ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ ಕಾರ್ಮಿಕರು
ಹುಬ್ಬಳ್ಳಿ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ ಆರವತ್ತು ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಈತ ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದ. ಆದ್ರೆ ಜನವರಿ 10 ರಂದು ರಾತ್ರಿ ಸಮಯದಲ್ಲಿ ಕ್ಯಾಂಪಸ್ ನಲ್ಲಿಯೇ ಬಿದ್ದಿದ್ದ. ಆರಂಭದಲ್ಲಿ ವಿಠ್ಠಲ್ ಕುಡಿದು ಬಿದ್ದಿದ್ದ ಅಂತ ಕಾರ್ಮಿಕ ಕುಟುಂಬವೊಂದು ಹೇಳಿತ್ತು. ಹೀಗಾಗಿ ಕುಟುಂಬದ ಮಾತು ಕೇಳಿ ಪೊಲೀಸರು ಅಸಹಜವಾದ ಸಾವು ಅಂತಲೇ ಅಂದುಕೊಂಡಿದ್ದರು.
ಹುಬ್ಬಳ್ಳಿ, (ಜನವರಿ 12): ನಗರದ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ ಆರವತ್ತು ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಈತ ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದ. ಆದ್ರೆ ಜನವರಿ 10 ರಂದು ರಾತ್ರಿ ಸಮಯದಲ್ಲಿ ಕ್ಯಾಂಪಸ್ ನಲ್ಲಿಯೇ ಬಿದ್ದಿದ್ದ. ಆರಂಭದಲ್ಲಿ ವಿಠ್ಠಲ್ ಕುಡಿದು ಬಿದ್ದಿದ್ದ ಅಂತ ಕಾರ್ಮಿಕ ಕುಟುಂಬವೊಂದು ಹೇಳಿತ್ತು. ಹೀಗಾಗಿ ಕುಟುಂಬದ ಮಾತು ಕೇಳಿ ಪೊಲೀಸರು ಅಸಹಜವಾದ ಸಾವು ಅಂತಲೇ ಅಂದುಕೊಂಡಿದ್ದರು. ಆದ್ರೆ ಆಸ್ಪತ್ರೆಯಿಂದ ನವನಗರ ಠಾಣೆಗೆ ಮಾಹಿತಿ ಬಂದಿದ್ದರಿಂದ ನವನಗರ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಆದ್ರೆ ವಿಚಾರಣೆ ವೇಳೆಗೆ ಗೊತ್ತಾಗಿದ್ದು ವಿಠ್ಠಲ್ ರಾಠೋಡ್ ನದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಅನ್ನೋದು ದೃಢಪಟ್ಟಿದೆ. ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಕೊಲೆಯಾದ ವಿಠ್ಠಲ್ ರಾಠೋಡ್ ಕೆಲಸ ನೀಡಿದ್ದ ಕಾರ್ಮಿಕರು. ಹೌದು… ತಾನೇ ಕಟ್ಟಡ ನಿರ್ಮಾಣ ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಕಾರ್ಮಿಕರೇ ವಿಠ್ಠಲ್ ನನ್ನು ಹೊಡೆದು ಕೊಲೆ ಮಾಡಿದ್ದಾರೆ.
ಛತ್ತೀಸ್ಗಢ ಮೂಲದ ಮೇಘವ್ ಸತನಾಮಿ (50) ಇವನ ಪುತ್ರ ಭಗವಾನ್ ದಾಸ್ ಸತನಾಮಿ (21), ಹಾಗೂ ಪತ್ನಿ ವಿಮಲಾ ಸತನಾಮಿ (40) ವಿಠ್ಠಲ್ ರಾಠೋಡ್ ನನ್ನು ಕೊಲೆ ಮಾಡಿದ್ದಾರೆ. ಈ ಕುಟುಂಬ ಕಳೆದ ಐದು ವರ್ಷಗಳಿಂದ ವಿಠ್ಠಲ್ ಜೊತೆ ಕೆಲಸ ಮಾಡುತ್ತಿತ್ತು. ವಿಠ್ಠಲ್ ಎಲ್ಲೆಲ್ಲಿ ಗುತ್ತಿಗೆ ಕೆಲಸ ಹಿಡಿಯುತ್ತಿದ್ದನೋ ಅಲ್ಲಿ ಹೋಗಿ ವಾಸವಾಗಿ ಕೆಲಸ ಮಾಡುತ್ತಿದ್ದರು. ಇವರ ಸಂಬಂದ ಇಷ್ಟಕ್ಕೆ ಇದ್ದಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ವಿಠ್ಠಲ್ ರಾಠೋಡ್ ಜೊತೆ ವಿಮಲಾಳ ಸಲುಗೆ ಬೆಳದಿತ್ತು. ನಂತರ ಆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ವಿಮಲಾ ಗಂಡ ಮೇಘವ ಮತ್ತು ಪುತ್ರ ಭಗವಾನ್ ದಾಸ್ ಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ವಿಠ್ಠಲ್ ರಾಠೋಡ್ ನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಧಾರವಾಡ ಹುಬ್ಬಳ್ಳಿ ಪೊಲೀಸ್ ಆಯುಕ್ತ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
