ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..
ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ಫಿನಾಲೆ ಬರಲಿದೆ. ಯಾರು ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಟಾಸ್ಕ್ ಇಲ್ಲ. ಆದರೆ ಕೆಲವು ಚಟುವಟಿಕೆಗಳನ್ನು ನೀಡಲಾಗಿದೆ. ಜನವರಿ 12ರ ಪ್ರೋಮೋ ಇಲ್ಲಿದೆ ನೋಡಿ..
ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಫಿನಾಲೆ (Bigg Boss Kannada Finale) ವಾರಕ್ಕೆ ಕಾಲಿಟ್ಟಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಟಾಸ್ಕ್ ಇಲ್ಲ. ಆದರೆ ಕೆಲವು ಚಟುವಟಿಕೆಗಳನ್ನು ನೀಡಲಾಗಿದೆ. ಅಭಿಮಾನಿಗಳು ನಿಮ್ಮನ್ನು ಯಾವ ಬಿರುದುಗಳಿಂದ ಗುರುತಿಸಬೇಕು ಎಂಬ ಇಚ್ಛೆ ಇದೆ ಎಂದು ಸ್ಪರ್ಧಿಗಳಿಗೆ ಬಿಗ್ ಬಾಸ್ ಕೇಳಿದ್ದಾರೆ. ಅಶ್ವಿನಿ ಗೌಡ (Ashwini Gowda) ಅವರು ತಮ್ಮ ಆಯ್ಕೆಗಳನ್ನು ತಿಳಿಸಿದ್ದಾರೆ. ‘ಛಲಗಾರ್ತಿ ಅಶ್ವಿನಿ, ಹಠವಾದಿ ಅಶ್ವಿನಿ, ಕಿಚ್ಚು ಅಶ್ವಿನಿ, ಬೆಂಕಿ ಅಶ್ವಿನಿ, ಖಡಕ್ ಅಶ್ವಿನಿ’ ಎಂಬಿತ್ಯಾದಿ ಬಿರುದುಗಳನ್ನು ಅಶ್ವಿನಿ ಗೌಡ ಅವರು ಸೂಚಿಸಿದ್ದಾರೆ. ಗಿಲ್ಲಿ ನಟ (Gilli Nata) ಅವರು ‘ಪಳಾರ್ ಗಿಲ್ಲಿ, ಕಲಾಕಾರ್ ಗಿಲ್ಲಿ, ಕಿತಾಪತಿ ಕಿಂಗ್, ಮಾತಿನ ಮಲ್ಲ’ ಎಂಬಿತ್ಯಾದಿ ಬಿರುದುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ವೀಕ್ಷಕರ ಕೌತುಕ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

