- Kannada News Photo gallery Cricket photos IND vs NZ 2nd ODI: Sundar Injury Blow, Reddy Set for Rajkot Debut; Kohli Eyes Ton
IND vs NZ: ತಂಡಕ್ಕೆ ಆಯ್ಕೆಯಾದರೂ ಆಯುಷ್ ಬದೋನಿಗೆ ಆಡುವ ಅವಕಾಶವಿಲ್ಲ
India vs New Zealand ODI: ವಡೋದರಾ ಏಕದಿನ ಗೆಲುವಿನ ನಡುವೆ, ವಾಷಿಂಗ್ಟನ್ ಸುಂದರ್ ಗಾಯದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಆಯುಷ್ ಬದೋನಿ ತಂಡ ಸೇರಿದ್ದಾರೆ. ಆದರೆ ಅವರಿಗೆ ಎರಡನೇ ಏಕದಿನದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳಿಲ್ಲ. ಏಕೆಂದರೆ ಈಗಾಗಲೇ ನಿತೀಶ್ ಕುಮಾರ್ ರೆಡ್ಡಿ ತಂಡದಲಿರುವುದರಿಂದ ಅವರಿಗೆ ಆಡುವ ಅವಕಾಶ ಸಿಗಬಹುದು.
Updated on: Jan 12, 2026 | 7:20 PM

ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸುವುದರೊಂದಿಗೆ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿತು. ಆದರೆ ಈ ಗೆಲುವಿನ ನಡುವೆಯೂ, ತಂಡಕ್ಕೆ ವಾಷಿಂಗ್ಟನ್ ಸುಂದರ್ ಅವರ ಗಾಯದ ರೂಪದಲ್ಲಿ ಆಘಾತ ಎದುರಾಗಿದೆ. ಸುಂದರ್ ಗಾಯ ಗಂಭೀರವಾಗಿದ್ದು ಅವರನ್ನು ಸರಣಿಯಿಂದ ಹೊರಗಿಡಲಾಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಸೊಂಟದ ನೋವಿಗೆ ತುತ್ತಾದ ಸುಂದರ್, ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ಆಟಗಾರ ಆಯುಷ್ ಬದೋನಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಆಯುಷ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿಲ್ಲ.

ವರದಿಗಳ ಪ್ರಕಾರ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರೂ, ದೆಹಲಿ ನಾಯಕ ಆಯುಷ್ ಬದೋನಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕಾಗಿ ಕಾಯಬೇಕಾಗುತ್ತದೆ. ಎರಡನೇ ಪಂದ್ಯದಲ್ಲಿ ಆಯುಷ್ಗೆ ಆಡುವ ಅವಕಾಶ ಸಿಗುವ ಸಾಧ್ಯತೆಗಳಿಲ್ಲ. ತಂಡದ ಆಡಳಿತ ಮಂಡಳಿಯು ಬಡೋನಿಗಿಂತ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಆದ್ಯತೆ ನೀಡಲಿದೆ ಎಂದು ವರದಿಯಾಗಿದ್ದು, ಮುಂದಿನ ಏಕದಿನ ಪಂದ್ಯದಲ್ಲಿ ಅವರು ಆಡುವುದನ್ನು ಕಾಣಬಹುದು.

ನಿತೀಶ್ ಈಗಾಗಲೇ ಏಕದಿನ ತಂಡದ ಭಾಗವಾಗಿದ್ದರು ಆದರೆ ವಡೋದರಾ ಏಕದಿನ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ. 2024 ರಲ್ಲಿ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಆಂಧ್ರ ಪ್ರದೇಶದ ಯುವ ಆಟಗಾರ ರೆಡ್ಡಿ, ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಒಂದು ಪಂದ್ಯದಲ್ಲಿ ಆಡಿದ್ದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ತಂಡದ ಭಾಗವಾಗಿದ್ದರು.

ಆದಾಗ್ಯೂ, ಆ ನಂತರ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ನಿತೀಶ್ ಅವರು ಆಡಿರಲಿಲ್ಲ. ಈಗ ಅವರನ್ನು ಈ ಸರಣಿಗೆ ಮತ್ತೆ ಸೇರಿಸಿಕೊಳ್ಳಲಾಗಿದ್ದು, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ.

ಏಕದಿನ ಸರಣಿಯ ಎರಡನೇ ಪಂದ್ಯ ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯವು ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಇದುವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ ಒಂದನ್ನು ಗೆದ್ದು ಮೂರು ಪಂದ್ಯಗಳನ್ನು ಸೋತಿದೆ. ವಿರಾಟ್ ಕೊಹ್ಲಿ ಈ ಮೈದಾನದಲ್ಲೂ ಅಬ್ಬರಿಸುವ ನಿರೀಕ್ಷೆ ಇದೆ.

ಕೊಹ್ಲಿ ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 56.50 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಆದಾಗ್ಯೂ, ಈ ಮೈದಾನದಲ್ಲಿ ಕೊಹ್ಲಿಗೆ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿಲ್ಲ. ಕೊಹ್ಲಿ ಅವರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಅವರ ಶತಕದ ಬರ ಕೊನೆಗೊಳ್ಳುತ್ತದೆ ಎಂದು ಆಶಿಸಲಾಗಿದೆ.
