ಕೋರ್ಟ್​ ತಡೆಯಾಜ್ಞೆ ತಂದಿದ್ದರೂ ಜಮೀನು ಪರಭಾರೆ ಮಾಡಿದ ತಹಶೀಲ್ದಾರ್: ತುರುವೇಕೆರೆ ಮಹಿಳೆ ನಿರಂತರ ಧರಣಿ

| Updated By: ಸಾಧು ಶ್ರೀನಾಥ್​

Updated on: Jan 12, 2024 | 11:12 AM

ಅಂದಹಾಗೆ ನ್ಯಾಯ ಬೇಡುತ್ತಾ ಧರಣಿ ನಡೆಸುತ್ತಿರುವ ಮಹಿಳೆ ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಮದವರು. ಈಕೆಯ ಪಾಲಿಗೆ 1 ಎಕರೆ ಜಮೀನಿದೆಯಂತೆ. ಪೂರ್ವಜರಿಂದ ಬಂದಿರುವ ಜಮೀನು ಇದಾಗಿದ್ದು, ಈ ಸಂಬಂಧ ಯಾರೂ ತೊಂದರೆ ಕೊಡಬಾರದೆಂದು ನ್ಯಾಯಾಲಯದಲ್ಲಿ ಶಾಶ್ವತ ತಡೆಯಾಜ್ಞೆ ಕೂಡ ಈ ಮಹಿಳೆ ತಂದಿದ್ದರಂತೆ.

ಕೋರ್ಟ್​ ತಡೆಯಾಜ್ಞೆ ತಂದಿದ್ದರೂ ಜಮೀನು ಪರಭಾರೆ ಮಾಡಿದ ತಹಶೀಲ್ದಾರ್: ತುರುವೇಕೆರೆ ಮಹಿಳೆ ನಿರಂತರ ಧರಣಿ
ಕೋರ್ಟ್​ ತಡೆಯಾಜ್ಞೆ ತಂದಿದ್ದರೂ ಜಮೀನು ಪರಭಾರೆ ಮಾಡಿದ ತಹಶೀಲ್ದಾರ್?
Follow us on

ಆಕೆ ತನ್ನ ಪಾಲಿಗೆ ತನ್ನ ಪೂರ್ವಜರ ಜಮೀನು ಇದೆ ಅಂತಾ ಧೈರ್ಯವಾಗಿ ಇದ್ದಳು. ಇರೊ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಆದರೆ ತಹಶೀಲ್ದಾರ್ ಅದ್ಯಾಕೋ ಈಕೆಯ ಜಮೀನನ್ನ ಪರರಿಗೆ ಮಾಡಿದ್ದಾರಂತೆ. ಸದ್ಯ ಆ ಮಹಿಳೆಯು ತನಗೆ ಅನ್ಯಾಯವಾಗಿದೆ ಎಂದು ತತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾಳೆ. ಎಲ್ಲಿ ಏನದು ಅಂತೀರಾ ಈ ವರದಿ ನೋಡಿ.

ಹೌದು‌‌.. ತಹಶೀಲ್ದಾರ್ ಕಚೇರಿ ಎದುರು ಮೌನವಾಗಿ ಧರಣಿ ಕುಳಿತಿರುವ ಮಹಿಳೆಯ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು‌. ಅಂದಹಾಗೇ ಈಕೆ ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಮದವರು. ಗ್ರಾಮದ ಸರ್ವೆ ನಂಬರ್ 25/8 ರಲ್ಲಿ ಈಕೆಗೆ ಒಂದು ಎಕರೆ ಜಮೀನಿದೆಯಂತೆ. ಪೂರ್ವಜರಿಂದ ಬಂದಿರುವ ಜಮೀನು ಇದಾಗಿದ್ದು, ಈ ಸಂಬಂಧ ಯಾರೂ ತೊಂದರೆ ಕೊಡಬಾರದೆಂದು ನ್ಯಾಯಾಲಯದಲ್ಲಿ ಶಾಶ್ವತ ತಡೆಯಾಜ್ಞೆ ಕೂಡ ಈ ಮಹಿಳೆ ತಂದಿದ್ದರಂತೆ.

ಆದರೆ ಇದಕ್ಕೆ ಕೇರ್ ಮಾಡದ ತುರುವೇಕೆರೆ ತಹಶೀಲ್ದಾರ್ ರೇಣುಕುಮಾರ್ ಜಮೀನಿನ ಸ್ಕೆಚ್ ತಿದ್ದುಪಡಿ ಮಾಡಿ ಪರರಿಗೆ ಅಂದರೆ ಗ್ರಾಮದ ನಾರಾಯಣಪ್ಪ ಎಂಬುವರಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿ ತಹಶಿಲ್ದಾರ್ ಹಾಗೂ ಪೊಲೀಸರ ವಿರುದ್ಧ ಧರಣಿ ನಡೆಸುತ್ತಿದ್ದಾರೆ ಸಂತ್ರಸ್ತ ಹಿರಿಯ ಮಹಿಳೆ ಪ್ರಮೀಳಮ್ಮ‌.

ಇನ್ನು ತಹಶಿಲ್ದಾರ್ ರೇಣುಕುಮಾರ್ ಉದ್ದೇಶಪೂರ್ವಕವಾಗಿಯೇ ಅನ್ಯಾಯ ಮಾಡಿದ್ದಾರೆ ಎಂದೂ ಇಲ್ಲಿ ಆರೋಪಿಸಲಾಗಿದೆ. ಹಣದ ಪ್ರಭಾವಕ್ಕೋ ಅಥವಾ ಇನ್ನು ಯಾವ ಉದ್ದೇಶಕ್ಕೋ ಗೊತ್ತಿಲ್ಲ ತನ್ನ ಜಮೀನನ್ನು ಪರರಿಗೆ ಮಾಡಿಕೊಟ್ಟಿದ್ದು ತನಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗಲ್ಲ ಎಂದು ಧರಣಿ ನಡೆಸುತ್ತಿದ್ದಾರೆ ಆ ಮಹಿಳೆ. ಆದರೆ ತಹಶಿಲ್ದಾರ್ ರೇಣುಕುಮಾರ್ ಮಾತ್ರ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

Also Read: ಕೋಲಾರ ಇ-ಕೆವೈಸಿಗೆ ಗ್ರಾಹಕರಿಂದ ಭಾರತ್ ಗ್ಯಾಸ್ ಏಜೆನ್ಸಿಯಿಂದ ಲಂಚ ವಸೂಲಿ; ವಿಡಿಯೋ ವೈರಲ್

ಆದರೂ ತಹಶಿಲ್ದಾರ್ ಹಾಗೂ ಪೊಲೀಸರಿಂದ ತನಗೆ ಅನ್ಯಾಯ ಆಗಿದೆ ಎನ್ನುತ್ತಾ ಸದ್ಯ ಪ್ರಮೀಳಮ್ಮ ಧರಣಿ ಮುಂದುವರಿಸಿದ್ದಾರೆ. ಅಧಿಕಾರಿಗಳು ಶಾಮೀಲಾಗಿರುವ ಆರೋಪ ಮೇಲ್ನೋಟಕ್ಕೆ ಕಂಡು‌ಬಂದಿದ್ದು ಆಗಿರುವ ತಪ್ಪು ಸರಿಮಾಡಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ