ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಗ್ರಾಮದಲ್ಲಿ ದಲಿತರ ಬಿದಿಗೆ ದೇವರನ್ನ ಕಳುಸಹಿಸಲು ಒಂದು ಗುಂಪು ಹಿಂದೇಟು ಹಾಕಿದ್ದು, ನಾವು ದಲಿತರ ಬೀದಿಗೆ ದೇವರನ್ನ ಕಳುಹಿಸಲ್ಲ. ದಲಿತರ ಬೀದಿಗೆ ಮೆರವಣಿಗೆ ತಂದರೆ ದೇವರಿಗೆ ಮೈಲಿಗೆ ಆಗುತ್ತೆ ಅಂತ ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ
ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ
Updated By: sandhya thejappa

Updated on: Apr 27, 2022 | 10:11 AM

ತುಮಕೂರು: ದಲಿತರ ಬೀದಿಗೆ ದೇವರನ್ನ (God) ಕಳುಹಿಸಲು ಹಿಂದೇಟು ಹಾಕಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೇಘಟ್ಟ ಗ್ರಾಮದಲ್ಲಿ ನಡೆದಿದೆ. ಹುಣಸೇಘಟ್ಟ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯ ದೇವಸ್ಥಾನ (Anjaneya Temple) ಇದೆ. ಪ್ರತಿವರ್ಷ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತೆ. ಅದರಂತೆ ಇದೇ ಏಪ್ರಿಲ್ 23, 24 ರಂದು ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. ಈ ವೇಳೆ ಗ್ರಾಮದ ತುಂಬಾ ಆಂಜನೇಯ ಸ್ವಾಮಿ, ದೊಡ್ಡಮ್ಮ, ಚಿಕ್ಕಮ್ಮ ದೇವರುಗಳನ್ನ ಗ್ರಾಮಸ್ಥರು ಮೆರವಣಿಗೆ ಮಾಡಿದ್ದರು. ದಲಿತರ ಕಾಲೋನಿ ಬರುತ್ತಿದ್ದ ಹಾಗೆ ದೇವರನ್ನ ಮೆರವಣಿಗೆ ಮಾಡದೇ ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

ಗ್ರಾಮದಲ್ಲಿ ದಲಿತರ ಬಿದಿಗೆ ದೇವರನ್ನ ಕಳುಸಹಿಸಲು ಒಂದು ಗುಂಪು ಹಿಂದೇಟು ಹಾಕಿದ್ದು, ನಾವು ದಲಿತರ ಬೀದಿಗೆ ದೇವರನ್ನ ಕಳುಹಿಸಲ್ಲ. ದಲಿತರ ಬೀದಿಗೆ ಮೆರವಣಿಗೆ ತಂದರೆ ದೇವರಿಗೆ ಮೈಲಿಗೆ ಆಗುತ್ತೆ ಅಂತ ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದಲಿತ ಕಾಲೋನಿಯಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು, ಮಂಗಳಾರತಿ ಮಾಡಿಸಿಕೊಂಡು ಹೋಗಿ ಅಂತ ದಲಿತರು ಪಟ್ಟು ಹಿಡಿದಿದ್ದರು. ಆದರೆ ಕೊನೆಗೂ ದೇವರ ಮೆರವಣಿಗೆಯನ್ನ ದಲಿತರ ಕಾಲೋನಿಗೆ ಕಳುಹಿಸದೇ ವಾಪಸ್ ಹೋಗಿದ್ದಾರೆ.

ಜಾತಿನಿಂದೆ ಮಾಡಿ ದಲಿತರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ ಅಂತ ಗ್ರಾಮಸ್ಥರ ವಿರುದ್ಧ ಆರೋಪಿಸಿ ನೊಣವಿನಕೆರೆ ಪೊಲೀಸ್ ಠಾಣೆ ಹಾಗೂ ತಿಪಟೂರು ತಹಶೀಲ್ದಾರ್​​ಗೆ ದೂರು ನೀಡಿದ್ದಾರೆ.

ಸರ್ಕಾರಿ ರಸ್ತೆಗೆ ಬೇಲಿ ಹಾಕಿದ ಗ್ರಾಮ ಪಂಚಾಯಿತಿ ಸದಸ್ಯ:
ತುಮಕೂರು ತಾಲೂಕಿನ ಮುದ್ದರಾಮಯ್ಯಪಾಳ್ಯ ಗ್ರಾಮದಲ್ಲಿ ಸರ್ಕಾರಿ ನಕಾಶೆ ರಸ್ತೆಗೆ ಗ್ರಾಮ ಪಂಚಾಯತಿ ಸದಸ್ಯ ಬೇಲಿ ಹಾಕಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಆನಂದ್ ಎಂಬುವರು ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಹಲವು ವರ್ಷಗಳಿಂದ ಇದ್ದ ರಸ್ತೆಗೆ ಬೇಲಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಅಂತ ಆರೋಪ ಕೇಳಿಬಂದಿದೆ.

ಇದನ್ನೂ ಓದಿ

Petrol Price Today: ಇಂದು ಕೂಡಾ ಇಂಧನ ದರ ಸ್ಥಿರ; ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಳಸಿದ್ದ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆ

Published On - 10:06 am, Wed, 27 April 22