545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಳಸಿದ್ದ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆ
ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಮನೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದ್ದು ಈ ಬಗ್ಗೆ ಸಿಐಡಿ ಇನ್ನೂ ದೃಢಪಡಿಸಿಲ್ಲ. ಸಿಐಡಿ ಪೊಲೀಸರು ಇದು ಮಾದರಿ ಡಿವೈಸ್ ಎಂದು ತೋರಿಸ್ತಿದ್ದಾರೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ PSI ಪರೀಕ್ಷಾ ಅಕ್ರಮಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ಡಿವೈಸ್ಗಳು ಪತ್ತೆಯಾಗಿವೆ. ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಮನೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದ್ದು ಈ ಬಗ್ಗೆ ಸಿಐಡಿ ಇನ್ನೂ ದೃಢಪಡಿಸಿಲ್ಲ. ಸಿಐಡಿ ಪೊಲೀಸರು ಇದು ಮಾದರಿ ಡಿವೈಸ್ ಎಂದು ತೋರಿಸ್ತಿದ್ದಾರೆ. ಈಗಾಗಲೇ ರುದ್ರಗೌಡ, ಮಹಾಂತೇಶ್ನನ್ನು ಸಿಐಡಿ ಬಂಧಿಸಿದೆ.
ರುದ್ರಗೌಡ ಪಾಟೀಲ್ PSI ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆಗಿದ್ದಾರೆ. ಅಕ್ರಮವಾಗಿ ಪರೀಕ್ಷೆ ಬರೆದಿದ್ದವರನ್ನೂ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಆರ್ಡರ್ ಕೊಟ್ಟು ಡಿವೈಸ್ ಸಿದ್ಧಪಡಿಸುತ್ತಿದ್ದರು. ಸಿಮ್ ಅಳವಡಿಸಿ ಕೀಪ್ಯಾಡ್ ಮೊಬೈಲ್ ಮಾದರಿಯ ಪುಟ್ಟ ಕಿವಿಯಲ್ಲಿ ಇರಿಸಿಕೊಳ್ಳಲು ಬ್ಲೂಟೂತ್ ಡಿವೈಸ್ ಸಿದ್ಧಪಡಿಸುತ್ತಿದ್ದರು. ಯಾರಿಗೂ ಗೊತ್ತಾಗದಂತೆ ಪರೀಕ್ಷಾ ಅಕ್ರಮವೆಸಗುತ್ತಿದ್ದ ಅಭ್ಯರ್ಥಿಗಳು, ಪರೀಕ್ಷೆ ಮುಗಿದ ನಂತರ ಎಲೆಕ್ಟ್ರಾನಿಕ್ ಡಿವೈಸ್ ವಾಪಸ್ ನೀಡುತ್ತಿದ್ದರು. ಅಭ್ಯರ್ಥಿಗಳು ಪರೀಕ್ಷೆಯ ನಂತರ ಕಿಂಗ್ಪಿನ್ಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಹಿಂದಿರುಗಿಸುತ್ತಿದ್ದರು.
18 ದಿನಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ & ಗ್ಯಾಂಗ್ ಕಳೆದ 18 ದಿನಗಳಿಂದ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿಯಾಗಿರುವ ದಿವ್ಯಾ & ಗ್ಯಾಂಗ್ ತಲೆಮರೆಸಿಕೊಂಡಿದೆ. ಪರೀಕ್ಷಾ ಅಕ್ರಮ ನಡೆದಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ ಒಡತಿಯಾಗಿರುವ ದಿವ್ಯಾಗೆ ಕೋರ್ಟ್ನಿಂದ ಅರೆಸ್ಟ್ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ದಿವ್ಯಾ ಹಾಗರಗಿ ಸೇರಿದಂತೆ 6 ಆರೋಪಿಗಳಿಗೆ ವಾರಂಟ್ ಜಾರಿ ಮಾಡಲಾಗಿದೆ. ಇದೀಗ ತಾವೇ ಪೊಲೀಸರಿಗೆ ಶರಣಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವಾರದೊಳಗೆ ಸಿಐಡಿ ಮುಂದೆ ಹಾಜರಾಗುವಂತೆ ಆರೋಪಿಗಳಿಗೆ ಕಲಬುರಗಿಯ 3ನೇ JMFC ಕೋರ್ಟ್ ಸೂಚನೆ ನೀಡಿದ್ದು ಯಾವಾಗ ಸಿಐಡಿ ಮುಂದೆ ಶರಣಾಗುತ್ತಾರೆ ಅನ್ನುವ ಕುತೂಹಲ ಹೆಚ್ಚಾಗಿದೆ.
ಇನ್ನು ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಒಬ್ಬೊಬ್ಬರಿಗೆ ಒಂದೊಂದು ರೀತಿ ರೇಟ್ ಫಿಕ್ಸ್ ಮಾಡಿದ್ದ. ತಮಗೆ ಬೇಕಾದವರು, ಪರಿಚಿತರು, ತಮ್ಮ ಜಾತಿಯವರಿಗೆ ಕಡಿಮೆ ಹಣ ಪಡೆದು ಡೀಲ್ ಮಾಡಿಕೊಳ್ಳುತ್ತಿದ್ದ. ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯಿಂದ ಕೇವಲ ಮೂವತ್ತು ಲಕ್ಷ ಪಡೆದಿದ್ದ. ಶಾಸಕರ ಬಳಿ ಕೆಲಸ ಮಾಡುತ್ತಿದ್ದರಿಂದ ಕಡಿಮೆ ಹಣ ಪಡೆದಿದ್ದ. ಇನ್ನು ತಮ್ಮದೇ ಜಾತಿಯ ಕೆಲ ಅಭ್ಯರ್ಥಿಗಳಿಗೆ ಕೂಡಾ ಕಡಿಮೆ ಹಣ ಪಡೆದಿರೋ ಮಾಹಿತಿ ಸಿಕ್ಕಿದೆ. ಆದ್ರೆ ರೇಟ್ ಪ್ರಾರಂಭವಾಗಿದ್ದೆ ಮೂವತ್ತು ಲಕ್ಷದಿಂದ. ಗರಿಷ್ಟ ಅರವತ್ತು ಲಕ್ಷದವರಗೆ ಡೀಲ್ ಮಾಡಿಕೊಳ್ಳುತ್ತಿದ್ದ. ಇನ್ನು ಅಭ್ಯರ್ಥಿಗಳಿಂದ ನೇರವಾಗಿ ಹಣ ಪಡೆದಿರೋ ಕಿಂಗ್ ಪಿನ್ ಗಳು, ಚೆಕ್, ನೆಪ್ಟ್ ಬದಲಾಗಿ ನೇರವಾಗಿ ಹಣ ಪಡೆದಿದ್ದಾರೆ. ಅಕ್ರಮದಲ್ಲಿ ಸಿಲುಕಬಾರದು ಅಂತ ನೇರವಾಗಿ ಹಣ ಪಡೆದಿದ್ದಾರೆ.
ಕ್ಯಾಮರ ಕಾಣುತ್ತಿದ್ದಂತೆ ಸುದ್ದಿ ಮಾಡದಂತೆ ಮನವಿ ಮಾಡಿದ ಆರೋಪಿ ಇನ್ನು ಮಾದ್ಯಮಗಳ ಕ್ಯಾಮರ ನೋಡಿ ದಿಮಾಕು ತೋರಿದ್ದ ಕಿಂಗ್ ಪಿನ್ ರುದ್ರಗೌಡ ಸಿಐಡಿ ಡ್ರಿಲ್ ಬಳಿಕ ತಣ್ಣಗಾಗಿದ್ದಾರೆ. ಮೂರು ದಿನಗಳಿಂದ ಸಿಐಡಿ ವಶದಲ್ಲಿರುವ ರುದ್ರಗೌಡ ಈಗ ಸೈಲೆಂಟ್ ಆಗಿದ್ದಾರೆ. ಕ್ಯಾಮರ ಕಾಣುತ್ತಿದ್ದಂತೆ ಸುದ್ದಿ ಮಾಡದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gold Price Today: ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ದರವೂ ಇಳಿಕೆ
ಸ್ವಿಮ್ಮಿಂಗ್ಪೂಲ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಆಮಿರ್ ಮಗಳು ಇರಾ ಖಾನ್
Published On - 7:42 am, Wed, 27 April 22