AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಕಾಳಜಿ ಕಮ್ಮಿ ಆಯ್ತು ಅಂತಾ ಯುವತಿ ಆತ್ಮಹತ್ಯೆಗೆ ಶರಣು

ಮದುವೆಯಾಗಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಹಲವು ಬಾರಿ ತನ್ನ ತಾಯಿಗೆ ಕರೆ ಮಾಡಿ ಗಂಡ ಸರಿಯಿಲ್ಲ, ಮಾತು ಕೇಳಲ್ಲ ಅಂತಾ ದೂರು ಹೇಳ್ತಿದ್ದಳಂತೆ. ಆಗ ತಾಯಿ ನೀನೇ ಮಾಡಿಕೊಂಡ ತಪ್ಪು, ಅನುಭವಿಸು ಅಂತಾ ಹೇಳಿದ್ದರಂತೆ.

3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಕಾಳಜಿ ಕಮ್ಮಿ ಆಯ್ತು ಅಂತಾ ಯುವತಿ ಆತ್ಮಹತ್ಯೆಗೆ ಶರಣು
3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಕಾಳಜಿ ಕಮ್ಮಿ ಆಯ್ತು ಅಂತಾ ಯುವತಿ ಆತ್ಮಹತ್ಯೆಗೆ ಶರಣು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 27, 2023 | 5:55 PM

ಅದು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಆದರೆ ಪ್ರೀತಿ ಮಾಡುವ ಮುನ್ನ ಇದ್ದ ಕಾಳಜಿ ಅಮೇಲೆ‌ ಇಲ್ಲವಾಗಿದೆ.. ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಆಕೆ ಅದೇನಾಯ್ತೋ ಗೊತ್ತಿಲ್ಲ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ (hanging) ಶರಣಾಗಿದ್ದಾಳೆ. ಮೇಲಿನ ಪೋಟೊದಲ್ಲಿರುವ ಯುವತಿಯ (woman) ಹೆಸರು ಮೌನಿಕಾ, ಹೆಸರು 21 ವರ್ಷ, ಇನ್ನೂ ಜೀವನದಲ್ಲಿ ಓದಿ ಉನ್ನತಮಟ್ಟಕ್ಕೆ ಹೋಗಬೇಕಿದ್ದ ಆಕೆ, ಆತುರವಾದ ನಿರ್ಧಾರ ಮಾಡಿ, ಮದುವೆಯಾಗಿ, ಈಗ ನೇಣಿಗೆ ಕೊರಳೊಡ್ಡಿದ್ದಾಳೆ. ಎಸ್ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ‌ಮಾಡ್ತಿದ್ದ ಆಕೆ ಸಾಕಷ್ಟು ಕನಸುಕಟ್ಟಿಕೊಂಡಿದ್ದಳು. ಅಂದುಕೊಂಡಂತೆ ಹಠದಿಂದ ಪ್ರೀತಿ ಮಾಡಿ ಮದುವೆಯೂ ಆಗಿದ್ದಳು. ಆದರೆ ತನ್ನ ಹುಡುಗನ ನಿರ್ಲಕ್ಷ್ಯತನದಿಂದ ಆತ್ಮಹತ್ಯೆಗೆ (suicide) ಶರಣಾಗಿದ್ದಾಳೆ.

ಇನ್ನು ತುಮಕೂರಿನ (tumkur) ಅಭಿರಾಮ್ ಜೊತೆ ಮೌನಿಕ ಮದುವೆಯಾಗಿದ್ದಳು, ಐದಾರು ವರ್ಷಗಳಿಂದ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು, ಅಲ್ಲದೇ ಮದುವೆಗೂ ಮುನ್ನ ಮೌನಿಕ ಪೋಷಕರು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗಲೂ ಕೂಡ ಮೌನಿಕ ಅಭಿರಾಮ್ ಬೇಕೆಂದು ಹಠ ಹಿಡಿದು ಸಾಂತ್ವಾನ‌ ಕೇಂದ್ರಕ್ಕೆ ಹೋಗಿದ್ದಳು.

ಬಳಿಕ ಮದುವೆಯಾಗಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಹಲವು ಬಾರಿ ತನ್ನ ತಾಯಿಗೆ ಕರೆ ಮಾಡಿ ಗಂಡ ಸರಿಯಿಲ್ಲ, ಮಾತು ಕೇಳಲ್ಲ ಅಂತಾ ದೂರು ಹೇಳ್ತಿದ್ದಳಂತೆ. ಆಗ ತಾಯಿ ನೀನೇ ಮಾಡಿಕೊಂಡ ತಪ್ಪು, ಅನುಭವಿಸು ಅಂತಾ ಹೇಳಿದ್ದರಂತೆ. ಇನ್ನು ಮಗಳನ್ನು ನೆನೆದು ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ತನ್ನ ಮಗಳ ಸಾವಿಗೆ ಅವನೇ ಕಾರಣ, ಅವನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.’

ಒಟ್ಟಾರೆ ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದ ನಿವಾಸಿಯಾಗಿದ್ದ ಮೌನಿಕ, ತುಮಕೂರಿನ ಯುವಕ ಅಭಿರಾಮ್ ನ ಪ್ರೀತಿಸಿ‌ ಅಂತರರ್ಜಾತಿ ಮದುವೆಯಾಗಿ ಯಾವುದೇ ಸುಖವನ್ನು ಪಡೆಯದೇ ತನ್ನ ಗಂಡ ತನ್ನ ಮಾತು ಕೇಳ್ತಿಲ್ಲ ಎಂದು ಸಾವಿಗೆ ಶರಣಾಗಿದ್ದಾಳೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ ಮೌನಿಕ ಹಾಗೂ ಯುವಕ ಅಭಿರಾಮ್ ನಡುವೆ ಗಲಾಟೆಯಾಗಿತ್ತಂತೆ.

ನೀನು ಪೋಲಿ ಹುಡುಗರ ‌ಜೊತೆ ಓಡಾಡಬೇಡ, ಹೋದರೆ ನಾನು ಸಾಯ್ತಿನಿ ಅಂತಾ ಹೇಳಿದ್ದಳಂತೆ. ಆಗ ಅಭಿರಾಮ್ ನಾನು ಹೋಗಿಯೇ ಹೋಗ್ತೇನೆ ಎಂದು ಹೋಗಿದ್ದನಂತೆ. ಇದಕ್ಕೆ ಮನನೊಂದ ಮೌನಿಕ ಎರಡು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ‌ ತುಮಕೂರು ನಗರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಯುವಕ ಪೊಲೀಸರ ವಶದಲ್ಲಿದ್ದು ತನಿಖೆ‌ ಮುಂದುವರೆಸಿದ್ದಾರೆ. (ವರದಿ: ಮಹೇಶ್, ಟಿವಿ9, ತುಮಕೂರು)

ಪ್ರಿಯಕರ ಮೋಸ ಮಾಡಿದ್ದಕ್ಕೆ ಯುವತಿ ನೇಣಿಗೆ ಶರಣು

ಇತ್ತೀಚಿನ ಬೆಳವಣಿಗೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ. ಭವ್ಯ ಭವಿಷ್ಯ ಕಾಣಬೇಕಿರುವ ಯುವತಿಯರು ಕಾಲನ ವಶವಾಗುತ್ತಿದ್ದಾರೆ. ಕಾರಣವೇನೇ ಇರಲಿ, ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬುದನ್ನು ಯುವ ಜನತೆ ಅರಿತುಕೊಳ್ಳಬೇಕಿದೆ. ಅಪರೂಪದ ಮಾನವ ಜೀವನಕ್ಕೆ ಬಲವಂತವಾಗಿ ಎಂಡ್ ಕಾರ್ಡ್ ಹಾಕುತ್ತಿದ್ದಾರೆ. ವಾರಂಗಲ್ ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಆತ್ಮಹತ್ಯೆ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಅದೇ ವಾರಂಗಲ್ ಜಿಲ್ಲೆಯ ಮತ್ತೊಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೇಮಿಯ ವಂಚನೆಯಿಂದಾಗಿ ಆಕೆ ನೇಣು ಬಿಗಿದುಕೊಂಡಿದ್ದಾಳೆ.

ಎಲ್ಕತುರ್ಥಿ ಮಂಡಲದ ಗೋಪಾಲಪುರದ ಪೋಗುಲ ಉಷಾರಾಣಿ ಎಂಬ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೊಬ್ಬ ಪ್ರೀತಿಸಿ ಮೋಸ ಮಾಡಿದ್ದಕ್ಕೆ ಮನನೊಂದ ಭೂಪಾಲಪಲ್ಲಿ ಜಿಲ್ಲೆಯ ಯುವತಿ ಇಂದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 27 February 23

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್