
ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್ಲೈನ್ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ.
ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ ನವರಂಗಿ ನಾಟಕ ಮಾಡಿದ ಆನ್ಲೈನ್ ಖದೀಮರು ಯಾವಾಗ ಹಣ ಕ್ರೆಡಿಟ್ ಆಯ್ತೋ ಆಗ ಟಾಟಾ ಬಾಯ್ ಬಾಯ್ ಹೇಳಿದ್ದಾರೆ.
ಕೊನೆಗೆ ನಯನ್ ಕುಮಾರ್ ತುಮಕೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಡೀಟೇಲ್ಸ್ ಸಮೇತ ದೂರು ಕೊಡ್ತಾರೆ. ಯುಪಿಐ ಮುಖಾಂತರ ಸ್ವ ಇಚ್ಛೆಯಿಂದ ಹಣ ಕಳುಹಿಸಿದ್ದು ಕಳ್ಳರನ್ನ ಹಿಡಿಯೋದು ಕಷ್ಟ ಅಂತ ಪೊಲೀಸರು ಕೈ ಚಲ್ತಿದ್ದಾರೆ.
Published On - 2:47 pm, Sat, 27 June 20