[lazy-load-videos-and-sticky-control id=”DInh6877suk”]
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್ ಆಶೋಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕ, ಕಾರ್ಪೊರೇಟರ್ಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಗಲಭೆಗೆ ಕಾರಣ ಎಂದರು.
“ಮೊದಲಿನಿಂದಲೂ ಪುಲಕೇಶಿ ನಗರದಲ್ಲಿ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟವಿತ್ತು, ಮಂಗಳವಾರದಂದು ನಡೆದ ಘಟನೆಯಿಂದ ಅದು ಬಹಿರಂಗಗೊಂಡಿದೆ, ಅವತ್ತು ನಡೆದ ಗಲಭೆ–ದೊಂಬಿಗಳಿಗೆ ಕೋಮುದಳ್ಳುರಿಯ ಲೇಪ ಮೆತ್ತುವ ಪ್ರಯತ್ನ ಬೇಡ, ಅದು ಪೂರ್ವನಿಯೋಜಿತ ಕೃತ್ಯವೇ ಹೊರತು ಧರ್ಮಗಳಿಗೆ ಸಂಬಂಧಿಸಿದ ವಿಚಾರವೇ ಅಲ್ಲ,” ಎಂದು ಅಶೋಕ ಹೇಳಿದರು.
ಎಸ್ ಡಿ ಪಿ ಐ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಮಾತಾಡಿದ ಅಶೋಕ, ಈ ನಿಟ್ಟಿನಲ್ಲಿ ಅವರ ಸರಕಾರ ಒಂದು ಹೆಜ್ಜೆ ಮುಂದೆ ಸಾಗಿದೆ ಎಂದರು. ” ಎಸ್ ಡಿ ಪಿ ಐ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ, ಇದರಿಂದ ಸಮಾಜಕ್ಕೆ ಒಳಿತೇನೂ ಇಲ್ಲ. ನಿಷೇಧ ಹೇರುವ ಮೊದಲು ಸಂಘಟನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ, ಮುಖ್ಯಮಂತ್ರಿಗಳ ಸೂಚನೆಗಾಗಿ ಕಾಯುತ್ತಿದ್ದೇವೆ, ಅದು ದೊರೆತ ಕೂಡಲೇ ಮುಂದುವರಿಯುತ್ತೇವೆ,” ಎಂದು ಸಚಿವರು ಹೇಳಿದರು.
ಮುಂದುವರಿದು ಹೇಳಿದ ಕಂದಾಯ ಮಂತ್ರಿಗಳು, “ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲು ಸಜ್ಜಾಗಿದೆ, ಈ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಸರಕಾರದ ಅಚಲ ನಿರ್ಧಾರವಾಗಿದೆ. ಕಾನೂನು ಮೀರಿ ನಡೆಯುವವರನ್ನು ಸರ್ಕಾರ ಬಿಡಲ್ಲ, ಸಂವಿಧಾನ ಎಲ್ಲರಿಗೂ ಒಂದೇ, ಸಂವಿಧಾನ ದೇವರ ಹೆಸರಲ್ಲಿ ರಚನೆಯಾಗಿಲ್ಲ ಹಾಗೂ ಧರ್ಮದ ಹೆಸರಲ್ಲಿ ಕಾನೂನು ರಚನೆ ಮಾಡುವುದಕ್ಕೆ ಇದು ಪಾಕಿಸ್ತಾನ ಅಲ್ಲ, ಭಾರತ,” ಎಂದರು
Published On - 2:50 pm, Fri, 14 August 20