ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಟಿವಿ 9 ಸಾಧನೆ ಮಾಡುತ್ತಿದೆ. ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಸಂಗೀತ ನಿರ್ದೇಶಕ ಚರಣ್ ರಾಜ್ ಹೇಳಿದ್ದಾರೆ. ಟಿವಿ 9 ಸುದ್ದಿ ವಾಹಿನಿ ಪ್ರಾರಂಭವಾಗಿ 15 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ನವನಕ್ಷತ್ರ ಸಾಧಕ 9 ಜನರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಚರಣ್ ರಾಜ್ ಮಾತನಾಡಿದರು. ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ ನನ್ನ ಜರ್ನಿ ತುಂಬ ಚೆನ್ನಾಗಿ ನಡೆಯುತ್ತಿದೆ. ಹಾಗೇ, ಇವತ್ತು ಟಿವಿ 9ನವರು ಇಂಥ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ತುಂಬ ಖುಷಿಯಾಯಿತು ಎಂದು ಹೇಳಿದರು.
ನನಗೆ ನನ್ನ ಟೀಂನಿಂದಲೇ ಸ್ಫೂರ್ತಿ ಸಿಗುತ್ತದೆ
ನಿಮ್ಮ ಸಂಗೀತದಲ್ಲಿ ವಿಭಿನ್ನತೆಯಿರುತ್ತದೆ. ಈಗಿನ ಟ್ರೆಂಡ್ಗೆ ತಕ್ಕಂತೆ ಹಾಡನ್ನು ಕೊಡುತ್ತೀರಿ, ವಿಭಿನ್ನವಾಗಿ ಯೋಚಿಸುತ್ತೀರಿ..ಇದೆಲ್ಲ ಹೇಗೆ ಸಾಧ್ಯ ಎಂದು ಟಿವಿ 9 ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚರಣ್ ರಾಜ್, ಇದು ಸಾಧ್ಯವಾಗೋದು ನನ್ನ ತಂಡದ ಪರಿಶ್ರಮದಿಂದ. ಆ ಸಿನಿಮಾದ ನಿರ್ದೇಶಕರು, ಇನ್ನಿತರರ ಮಾರ್ಗದರ್ಶನದಿಂದಲೇ ಒಂದೊಳ್ಳೆ ಸಂಗೀತ ಮೂಡುತ್ತಿದೆ. ಯಾಕೆಂದರೆ ನನಗೆ ಅಗತ್ಯವಿರುವಷ್ಟು ಸಮಯ, ಅವಕಾಶ ಕೊಡುತ್ತಾರೆ. ಹಾಗಾಗಿ ಕ್ರೆಡಿಟ್ ಏನಿದ್ದರೂ ನಮ್ಮ ತಂಡಕ್ಕೆ ಸೇರಬೇಕು. ಯಾಕೆಂದರೆ ಸಿನಿಮಾ ಎಂಬುದು ಹಲವರು ಸೇರಿ, ಸಹಯೋಗದಲ್ಲಿ ಮಾಡುವಂಥದ್ದು. ಹಾಗಾಗಿ ಇದೊಂದು ಟೀಂ ವರ್ಕ್ ಆಗಿದ್ದು, ಎಲ್ಲ ಹೊಗಳಿಕೆಯನ್ನೂ ನಾನೊಬ್ಬನೇ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಭಾವನೆ, ಧ್ವನಿಗೆ ಶಕ್ತಿಯಾದ ವಾಹಿನಿ ಟಿವಿ 9: ಡಿಸಿಎಂ ಅಶ್ವತ್ಥ ನಾರಾಯಣ್
Published On - 5:51 pm, Tue, 4 January 22