ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ಕೆಲ ಹೊತ್ತಿನಲ್ಲೇ ಜೈಲಿನಿಂದ ರಾಗಿಣಿ ದ್ವಿವೇದಿ ಬಿಡುಗಡೆಯಾಗಲಿದ್ದಾರೆ. ಈ ಬಗ್ಗೆ ನಟಿ ರಾಗಿಣಿ ತಂದೆ ರಾಕೇಶ್ ದ್ವಿವೇದಿ, ಪರಪ್ಪನ ಅಗ್ರಹಾರ ಜೈಲಿನ ಬಳಿ ಹೇಳಿಕೆ ನೀಡಿದ್ದಾರೆ. ಮಗಳು ರಾಗಿಣಿ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ. ಇನ್ನು 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ. ಸಹಜವಾಗಿ ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅವಳು ಹೊರಬಂದ ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸುತ್ತೇವೆ. ಜೊತೆಗೆ, ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಮಾತನಾಡಿದ್ದಾರೆ.
ನಾಳೆ ನಡೆಯಲಿರುವ 72ನೇ ಗಣರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ರಾಜ್ಯಪಾಲ ವಜುಭಾಯಿ ವಾಲಾ ಶುಭಕೋರಿದ್ದಾರೆ. ಕರ್ನಾಟಕದ ಜನತೆಗೆ ವಾಲಾ ಶುಭಾಶಯ ತಿಳಿಸಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ದೇಶವನ್ನು ಮತ್ತಷ್ಟು ಬಲಪಡಿಸೋಣ. ಶಾಂತಿ, ಪ್ರಗತಿಯ ಪಥದಲ್ಲಿ ಸಾಗೋಣ ಎಂದು ಜನತೆಗೆ ಶುಭಾಶಯ ತಿಳಿಸಿದ್ದಾರೆ.
8 ವರ್ಷ ಮೇಲ್ಪಟ್ಟ ವಾಹನಗಳಿಗೆ ಹಸಿರು ತೆರಿಗೆಗೆ ಸಮ್ಮತಿ ದೊರಕಿದೆ. ಕೇಂದ್ರ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ 8 ವರ್ಷ ಮೇಲ್ಪಟ್ಟ ವಾಹನಗಳಿಗೆ ಹಸಿರು ತೆರಿಗೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಸ್ತೆ ತೆರಿಗೆಯನ್ನು ಶೇ.10ರಿಂದ ಶೇ.25 ಹೆಚ್ಚಳಕ್ಕೆ ಗಡ್ಕರಿ ಸಮ್ಮತಿ ಸೂಚಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಕೋರ್ಟ್ ಅಮೀನ ಆಗಮಿಸಿದ್ದಾರೆ. ಜಾಮೀನಿನ ಮೇಲೆ ರಾಗಿಣಿ ಬಿಡುಗಡೆ ಆದೇಶ ಪ್ರತಿಯನ್ನು ತಂದಿದ್ದಾರೆ. ರಾಗಿಣಿ ಬಿಡುಗಡೆಗೆ ಅಂತಿಮ ಹಂತದ ಪ್ರಕ್ರಿಯೆ ಬಾಕಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕ್ರಿಯೆ ಬಳಿಕ ನಟಿ ರಾಗಿಣಿ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸಂಜೆ 7.30ರೊಳಗೆ ಜೈಲಿನಿಂದ ರಾಗಿಣಿ ಬಿಡುಗಡೆ ಸಾಧ್ಯತೆ ಅಂದಾಜಿಸಲಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಭಾರತದ ಎರಡನೇ ಅತಿದೊಡ್ಡ ಮಿಲಿಟರಿ ಗೌರವ ಇದಾಗಿದೆ.
ಬಾಗಲಕೋಟೆ ನವನಗರ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ ವಸತಿ ನಿರ್ಮಾಣ ಕಚೇರಿಯಲ್ಲಿ 4 ಸಾವಿರ ಲಂಚ ಸ್ವೀಕಾರ ಮಾಡುತ್ತಿರುವಾಗ FDA ಅಧಿಕಾರಿ ಸುನಂದಾ ತೆಗ್ಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ 40 ಜನರಿಗೆ ಜೀವನ್ ರಕ್ಷಾ ಪದಕ ಪ್ರದಾನ ಮಾಡಲಿದ್ದಾರೆ. ಒಬ್ಬರಿಗೆ ಸರ್ವೋತ್ತಮ್ ಜೀವನ್ ರಕ್ಷಾ ಪದಕ, 8 ಜನರಿಗೆ ಉತ್ತಮ್ ಜೀವನ್ ರಕ್ಷಾ ಪದಕ ಹಾಗೂ 31 ಜನರಿಗೆ ಜೀವನ್ ರಕ್ಷಾ ಪದಕ ಪ್ರದಾನ ಮಾಡಲಿದ್ದಾರೆ.
ಬೆಂಗಳೂರಿಗೆ ನಾಳೆ ಮೆರವಣಿಗೆಗೆಂದು ತೆರಳುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ಪೊಲೀಸರಿಂದ ತಡೆದಿದ್ದಾರೆ. ತಿಪಟೂರಿನಿಂದ ಬೆಂಗಳೂರಿಗೆ ಟ್ರ್ಯಾಕ್ಟರ್‌ಗಳು ಬರುತ್ತಿದ್ದವು. ತುಮಕೂರು ಜಿಲ್ಲೆಯ ಕೆಬಿ ಕ್ರಾಸ್‌ನಲ್ಲಿ ಟ್ರಾಕ್ಟರ್ಗಳನ್ನು ಪೊಲೀಸರು ತಡೆದಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಮಸೂದೆಗಳ ತಿದ್ದುಪಡಿ ವಿರೋಧಿಸಿ ನಾಳೆ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಜನ ಗಣರಾಜ್ಯೋತ್ಸವ ಪರೇಡ್‌ಗೆ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಹಾಗೂ ಅವರ ತಂಡ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇಂದು ಮಧ್ಯಾಹ್ನದವರೆಗೆ 2,06,577 ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ವ್ಯಾಕ್ಸಿನ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ನೀಡಿದೆ.
2019 ರಲ್ಲಿ ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) SPIಮೋಹನ್ ಲಾಲ್ ಮರಣೋತ್ತರವಾಗಿ ರಾಷ್ಟ್ರಪತಿಯವರ ಶೌರ್ಯ ಪದಕವನ್ನು ನೀಡಲಾಗಿದೆ.
ಚುನಾವಣೆ ಮುಂದೂಡುವಂತೆ ಆಂಧ್ರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಚುನಾವಣೆ ಮುಂದೂಡೋದು ಸರಿಯಲ್ಲ, ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಬೇಕೆಂದು ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನಿಗದಿಯಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಆದೇಶ ಹೊರಡಿಸಿದೆ.
ಮೈಸೂರಿನ ಸುತ್ತೂರು ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದ್ದಾರೆ. ಪುತ್ರಿಯ ಮದುವೆಗೆ ಸುತ್ತೂರು ಶ್ರೀಗಳಿಗೆ ಆಹ್ವಾನ ನೀಡಲು ಡಿಕೆಶಿ ತೆರಳಿದ್ದರು. ಭಾವಿ ಅಳಿಯ ಅರ್ಮರ್ಥ್ಯ ಸಿದ್ದಾರ್ಥ್ ಜೊತೆ ಆಗಮಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇಂದು ಸಂಜೆ ರಾಗಿಣಿ ದ್ವಿವೇದಿ ಜೈಲಿನಿಂದ ಸಂಜೆ 6 ಗಂಟೆ ನಂತರ ಬಿಡುಗಡೆಗೊಳ್ಳಲಿದ್ದಾರೆ. ಜಾಮೀನು ಮುಚ್ಚಳಿಕೆ ಒಪ್ಪಿ ಕೋರ್ಟ್ ಆದೇಶ ಹೊರಡಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಮೀನು ಮುಚ್ಚಳಿಕೆ ಪರಿಶೀಲನೆ ಮಾಡಲಾಗಿದೆ.
ನನಗೆ ನೀಡಲಾಗಿದ್ದ ತೋಟಗಾರಿಕೆ, ಪೌರಾಡಳಿತ ಮತ್ತು ರೇಷ್ಮೆ ಖಾತೆಯನ್ನು ವಾಪಸ್ ಪಡೆದಿದ್ದಾರೆ. ಈಗ ಯುವಸೇವೆ ಮತ್ತು ಕ್ರೀಡಾ ಇಲಾಖೆ ನೀಡಿದ್ದಾರೆ. ಇಲಾಖೆಯ ಮೊದಲ ಸಭೆ ಇವತ್ತು ನಡೆಸಿದ್ದೇನೆ. ಪ್ರತಿ ಜಿಲ್ಲೆಯಲ್ಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ. ಕ್ರೀಡಾಪಟುಗಳಿಗೆ ತರಬೇತಿ ನೀಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅನುವು ಮಾಡಿ ಕೊಡುತ್ತೇವೆ ಎಂದು ಯುವಜನಸೇವೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಟ್ರ್ಯಾಕ್ಟರ್ ಱಲಿಗೆ ಪೊಲೀಸರ ಅನುಮತಿ ಇಲ್ಲ. ಕೆಲವು ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದೆ. ಆದರೆ ಟ್ರ್ಯಾಕ್ಟರ್ ಱಲಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಅವರು ನಿರ್ದಿಷ್ಟವಾಗಿ ಮಾಹಿತಿ ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ನಲ್ಲಿ ಬರಲು ಅನುಮತಿ ಕೊಟ್ಟಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 2011 ರಿಂದಲೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಉದ್ಯಮಗಳನ್ನು ನಡೆಸಲು ನನಗೆ ಬಿಡುತ್ತಿಲ್ಲ ಎಂದು ಉದ್ಯಮಿ ಆಲಂ ಪಾಷ ಪತ್ರದಲ್ಲಿ ತಿಳಿಸಿದ್ದಾರೆ.
ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ ಜಯಶ್ರೀ ಮಾಗಡಿ ರಸ್ತೆಯಲ್ಲಿರುವ ಪ್ರಗತಿ ಲೇಔಟ್ನ ಸಂಧ್ಯಾಕಿರಣ ವೃದ್ದಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 2020 ರಲ್ಲಿ ಜಯಶ್ರೀ ಸಾಯೋ ಬಗ್ಗೆ ಮಾತನಾಡಿದ್ದರು. ಸುದೀಪ್‌ಕೂಡ ಸಾಂತ್ವಾನದ ಮಾತುಗಳನ್ನ ಹೇಳಿ ಸಂತೈಸಿದ್ದರು.ಮಾನಸಿಕ ಕಿನ್ನತೆಗೆ ಒಳಗಾಗಿದ್ದ ಜಯಶ್ರಿ ಆತ್ಮ ಹತ್ಯೆಗಗೆ ಶರಣಾಗಿದ್ದಾರೆ.
ಜಿಲ್ಲಾ ಚುನಾವಣಾ ಕಚೇರಿ ಆಗಿರುವ ಚೆನ್ನೈ ಕಾರ್ಪೊರೇಷನ್ ಯುವ ಕ್ರಿಕೇಟಿಗ ವಾಷಿಂಗ್ ಟನ್ ಸುಂದರ್ ಅವರನ್ನು ಚೆನ್ನೈನ ‘ಜಿಲ್ಲಾ ಚುನಾವಣಾ ಐಕಾನ್’ ಎಂದು ಗುರುತಿಸಿದೆ.
ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ವಿಚಾರವಾಗಿ, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಕಾಣುತ್ತಿದೆ. ಈ ಕುರಿತಾಗಿ ಸರ್ಕಾರ ಕಾಳಜಿ ವಹಿಸಿದೆ ಎಂದು ಕೇಂದ್ರ ದೆಹಲಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಮೇ ತಿಂಗಳಲ್ಲಿ ದ್ವಿತೀಯ PUC, ಜೂನ್‌ನಲ್ಲಿ SSLC ಪರೀಕ್ಷೆ ನಡೆಸಲಾಗುವುದು. ಜೂನ್ ನಂತರ ಉಳಿದ ತರಗತಿಗಳಿಗೆ ಪರೀಕ್ಷೆ ಮತ್ತು ಫೆ.1ರಿಂದ ಪ್ರಥಮ PU ಕಾಲೇಜು ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಜ.27ರಂದು ಆರೋಗ್ಯ ಸಚಿವರ ಜತೆ ಚರ್ಚಿಸಲಾಗುವುದು ಎಂದು ಚಾಮರಾಜನಗರದಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ಅಕ್ರಮವಾಗಿ ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಅಕ್ಕಿಯನ್ನು ಕಾರ್ಯಚರಣೆ ನಡೆಸಿದ ಜಿಲ್ಲೆಯ ಕಿತ್ತೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಹಾವೇರಿಯಿಂದ ಮುಂಬೈಗೆ ಸಾಗಿಸುತ್ತಿದ್ದ ಐವತ್ತು ಕೆ.ಜಿ 1,040 ಚೀಲ ಅಕ್ಕಿಯನ್ನು ಜಪ್ತಿಮಾಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿರುವ ಸಾಧನೆ ಅಚ್ಚರಿ ಮೂಡಿಸುವಂತದ್ದು. ನಿಮಗೆ ಈ ಪುರಸ್ಕಾರ ಲಭಿಸಿದ್ದು ಮಹತ್ವದ ಸಂಗತಿ ಯಾಕೆಂದರೆ ನೀವು ಈ ಕೆಲಸಗಳನ್ನು ಕೊರೊನಾ ಕಾಲದಲ್ಲಿ ಮಾಡಿದ್ದೀರಿ. ನೀವು ಮುಂದೆ ನಮ್ಮ ದೇಶದ ಕ್ರೀಡಾಪಟು, ವಿಜ್ಞಾನಿ, ಸಿಇಒ ಆಗಿ ದೇಶ ಹೆಮ್ಮೆ ಪಡುವಂತೆ ಮಾಡುತ್ತೀರಿ ಎಂದು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) ಪ್ರಶಸ್ತಿಗೆ ಆಯ್ಕೆಯಾಗಿರುವ ಮಕ್ಕಳ ಜೊತೆಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ಮೌಲ್ಯದ ಚಿನ್ನ, ಫಾರಿನ್ ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದೆ. ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಜಪ್ತಿ ಮಾಡಿದೆ.
ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಜಾಮೀನು ಹಿನ್ನೆಲೆಗೆ ಸಂಬಂಧಿಸಿದಂತೆ,ಕೋರ್ಟ್ ಆದೇಶದಂತೆ ಜಾಮೀನು ಮುಚ್ಚಳಿಕೆಯನ್ನು ಸಲ್ಲಿಸಲಾಗಿದೆ. ಪರಿಶೀಲಿಸಿದ ನಂತರ NDPS ವಿಶೇಷ ಕೋರ್ಟ್ ಆದೇಶ ಹೊರಡಿಸಲಿದೆ.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ಱಲಿ ವಿಚಾರಕ್ಕೆ ಸಂಬಂಧಿಸಿದಂತೆ, ಯಾರೋ ಹೇಳುವ ಮಾತು ಕೇಳಿ ಱಲಿ ಮಾಡೋದು ಸರಿಯಲ್ಲ. ರೈತರ ಪರ ನಮ್ಮ ಇಲಾಖೆ, ಕೃಷಿ ಇಲಾಖೆ ಕೆಲಸ ಮಾಡುತ್ತೆ. ಹೀಗಾಗಿ ಪ್ರತಿಭಟನೆ ಮಾಡದಂತೆ ವಿಧಾನಸೌಧದಲ್ಲಿ ತೋಟಗಾರಿಕಾ ಸಚಿವ ಆರ್.ಶಂಕರ್ ರೈತರಲ್ಲಿ ಮನವಿ ಮಾಡಿದ್ದಾರೆ.
ವಿ.ಕೆ.ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ. ಈಗ ಅವರು ಆಹಾರ ಸೇವಿಸುತ್ತಿದ್ದಾರೆ. ಮತ್ತೊಬ್ಬರ ನೆರವಿನಿಂದ ಶಶಿಕಲಾ ನಿಧಾನವಾಗಿ ನಡೆಯುತ್ತಿದ್ದಾರೆ. ಕೊವಿಡ್ ನಿಯಮದಂತೆ ಚಿಕಿತ್ಸೆ ನೀಡಲಾಗುತ್ತಿದೆ.
OLX ಗ್ರಾಹಕರ ಬಳಿ ದರೋಡೆ ಮಾಡ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ವಸ್ತು ನೋಡಬೇಕೆಂದು ಕರೆಸಿಕೊಳ್ಳುತ್ತಿದ್ದು, ಬಳಿಕ ಇಲ್ಲೇ ಪಕ್ಕದಲ್ಲಿ ಮನೆ ಇದೆ ಎಂದು ಕರೆದೊಯ್ದು ಹಣ ದೋಚಿ ಪರಾರಿಯಾಗುತ್ತಿದ್ದರು. ಬೆಂಗಳೂರಿನ ಕೆ.ಆರ್ಮಾರುಕಟ್ಟೆ ಪೊಲೀಸರು ದರೋಡೆ ಮಾಡ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಸೀಗೇನಹಳ್ಳಿಯಲ್ಲಿ ನಡೆದಿದೆ. ಶಾಲಾ ವಾಹನದಲ್ಲಿದ್ದ 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದೆ.
ಭಾರತಕ್ಕೆ ಮಾಡೆರ್ನಾ ಲಸಿಕೆ ನೀಡುವುದರ ಕುರಿತಾಗಿ, ಅಮೆರಿಕದ ಮಾಡೆರ್ನಾ ಜತೆ ಟಾಟಾ ಕಂಪನಿ ಮಾತುಕತೆ ನಡೆಸಲಿದೆ. ಭಾರತದ CSIR ಜತೆಗೂಡಿ ಲಸಿಕೆ ನೀಡಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ 3ನೇ ಹಂತದಲ್ಲಿ ಭಾರತೀಯರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುವುದರ ಕುರಿತು ಚರ್ಚೆ ನಡೆಯಲಿದೆ.
ಸಚಿವ ಸ್ಥಾನ ಎಚ್. ವಿಶ್ವನಾಥ್ ಅವರಿಗೆ ಸಿಕ್ಕಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಎಚ್. ವಿಶ್ವನಾಥ್ ಏಕಾಂಗಿ ಅಲ್ಲ. ನಾವು ಅವರ ಜೊತೆಗಿದ್ದೇವೆ. ಮಿತ್ರ ಮಂಡಳಿಯಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ. ಯಾವುದೇ ಅಸಮಾಧಾನವೂ ಇಲ್ಲ. ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ವಿಧಾನಸೌಧದಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಉತ್ತರ ಸಿಕ್ಕಿಂನ ನಾಥುಲಾ ಗಡಿಭಾಗದಲ್ಲಿ ಭಾರತಕ್ಕೆ ನುಸುಳಲು ಯತ್ನಸಿದ ಚೀನಾ ಸೈನಿಕರ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಳೆದವಾರ ಚೀನಾ ಸೈನಿಕರು ಅಕ್ರಮವಾಗಿ ಗಡಿದಾಟುವ ಪ್ರಯತ್ನ ಮಾಡಿದ್ದರು. ಆದರೆ, ಭಾರತೀಯ ಸೇನೆ ಈ ದುಷ್ಕೃತ್ಯವನ್ನು ಸಮರ್ಥವಾಗಿ ಎದುರಿಸಿತ್ತು. ಈ ಸಂದರ್ಭದಲ್ಲಿ ಎರಡು ಸೇನೆಗಳ ಮಧ್ಯೆ ಘರ್ಷಣೆ ಉಂಟಾಗಿತ್ತು. 20 ಜನ ಚೀನಾ ಸೈನಿಕರು ಘರ್ಷಣೆಯಲ್ಲಿ ಗಾಯಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಮತ್ತೆ ಖಾತೆ ಬದಲು ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.ಜೆ.ಸಿ ಮಾಧುಸ್ವಾಮಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಸಚಿವ ಸುಧಾಕರ್ಗೆ ನೀಡಲು ಚಿಂತನೆ ನಡೆಸಿದ್ದಾರೆ. ಸಂಜೆ ಅಧೀಕೃತ ಆದೇಶ ಬರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಾಳೆ ರೈತರ ಟ್ರ್ಯಾಕ್ಟರ್ ಪರೇಡ್ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಪರೇಡ್‌ಗೆ ಸ್ಟಾರ್ ನಟಿ, ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪರೇಡ್‌ನಲ್ಲಿ ಭಾಗಿಯಾಗುವುದಾಗಿ ರಂಜಿತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಾಳೆ ರೈತರ ಟ್ರ್ಯಾಕ್ಟರ್ ಱಲಿ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಅನುಮತಿ ಕೇಳಿಲ್ಲ. ಅನುಮತಿ ಕೇಳದೆ ಅನುಮತಿ ಕೊಡಲು ಹೇಗೆ ಸಾಧ್ಯ? ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ಪಂತ್ ಪ್ರಶ್ನೆ ಒಡ್ಡಿದ್ದಾರೆ. ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ಕೇಳಿದ್ದಾರೆ. ಅದಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ. ಟ್ರ್ಯಾಕ್ಟರ್ ಱಲಿಗೆ ಇನ್ನೂ ಅಧಿಕೃತವಾಗಿ ಅನುಮತಿ ಕೇಳಿಲ್ಲ. ಅನುಮತಿ ಕೇಳಿದ್ರೆ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ನಾಳೆ ರೈತರ ಟ್ರ್ಯಾಕ್ಟರ್ ಪರೇಡ್‌ಗೆ ಓಲಾ, ಉಬರ್ ಚಾಲಕರು ಭಾಗಿಯಾಗುವ ಸಾಧ್ಯತೆ ಇದೆ. ರೈತರ ಟ್ರ್ಯಾಕ್ಟರ್ ಪರೇಡ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪರೇಡ್‌ನಲ್ಲಿ ನಾವು ಭಾಗಿಯಾಗುತ್ತೇವೆ. ನಮ್ಮ ಯಾವುದೇ ವಾಹನಗಳು ನಾಳೆ ರಸ್ತೆಗಿಳಿಯುವುದಿಲ್ಲ. ನಮ್ಮ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸೋಮಶೇಖರ್ ಗೌಡ ಹೇಳಿಕೆ ನೀಡಿದ್ದಾರೆ.
ಕಿಸಾನ್ ಗಣತಂತ್ರ ಪರೇಡ್‌ಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ. ದೆಹಲಿ ಹೊರವಲಯದಲ್ಲಿ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡಲಾಗಿದೆ. ರೈತರ ಟ್ರ್ಯಾಕ್ಟರ್ ಪರೇಡ್ ದೆಹಲಿಯ ರಾಜಪಥದತ್ತ ಬರುವುದಿಲ್ಲ. ಟಿಕ್ರಿ, ಸಿಂಘು, ಘಾಜೀಪುರ ಗಡಿಗಳಿಂದ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರು ಬಳಿಯ ಜಮೀನಿನಲ್ಲಿದ್ದ ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ 40 ಕ್ವಿಂಟಾಲ್ ತೊಗರಿ ಸುಟ್ಟು ಭಸ್ಮವಾಗಿದೆ. ಮಲ್ಲು ಅವರಾದಿ ಎಂಬುವವರಿಗೆ ಸೇರಿದ ಜಮೀನು ಎಂದು ತಿಳಿದು ಬಂದಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಉತ್ತರಖಂಡದ ಕುಂಭ ಮೇಳದಲ್ಲಿ ಕೊವಿಡ್ ನೆಗೆಟಿವ್ RT-PCR ವರದಿಯನ್ನು ಸಲ್ಲಿಸಿದರೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಹಾಗೂ ಕುಂಭಮೇಳಕ್ಕೆ ಆಗಮಿಸುವ ಜನರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯರು, 65 ವರ್ಷಮೇಲ್ಪಟ್ಟವರು ಹಾಗೂ 10 ವರ್ಷ ಒಳಗಿನ ಮಕ್ಕಳಿಗೆ ಪ್ರವೇಶವನ್ನು ಕಲ್ಪಿಸಲಾಗುವುದಿಲ್ಲ ಎಂದು ಸೂಚನೆ ನೀಡಲಾಗಿದೆ.
ಟ್ರ್ಯಾಕ್ಟರ್ ಪರೇಡ್‌ಗೆ ಅಡ್ಡಿಪಡಿಸಲ್ಲವೆಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಪೊಲೀಸರು ಕೂಡ ಅಡ್ಡಿಪಡಿಸುವ ಕೆಲಸ ಮಾಡುವುದಿಲ್ಲ. ಟ್ರ್ಯಾಕ್ಟರ್‌ಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ಹೇಳಿದ್ದಾರೆ. 20 ಸಾವಿರ ರೈತರು, 8 ಸಾವಿರ ವಾಹನ ಪರೇಡ್‌ನಲ್ಲಿ ಭಾಗಿಯಾಗುತ್ತವೆ. ಟ್ರ್ಯಾಕ್ಟರ್ ಪರೇಡ್ ತಡೆದರೆ ಉಗ್ರ ಹೋರಾಟ ಮಾಡುತ್ತೇವೆ. ಱಲಿ ತಡೆದರೆ ಬೆಂಗಳೂರು ನಗರವನ್ನು ಲಾಕ್ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ನಾಳೆ ರೈತರಿಂದ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ಸಿಕ್ಕಿದೆ. ಱಲಿಗೆ ಅನುಮತಿ ನೀಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಭಾಗಿಯಾಗಲಿದ್ದಾರೆ.
ಬೈಕ್ ಸವಾರನ ಮೇಲೆ ಮಧುಗಿರಿ ಸಿಪಿಐ ಸರ್ದಾರ್ ದರ್ಪ ಮೆರೆದು, ನಡುರಸ್ತೆಯಲ್ಲೇ ಬೂಟು ಕಾಲಿನಿಂದ ತುಳಿದಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ನೃಪತುಂಗಾ ಸರ್ಕಲ್‌ನಲ್ಲಿ ನಡೆದಿದೆ. ಸಿಪಿಐ ಸರ್ದಾರ್ ದರ್ಪ ತೋರಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬೆಂಗಳೂರು ನಗರದಲ್ಲಿ ನಾಳೆ(ಜ.26) ರೈತರಿಂದ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ. ಟ್ರ್ಯಾಕ್ಟರ್ ಪರೇಡ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಭಾಗಿಯಾಗಲಿವೆ.
ಪೂರ್ವ ನಾಡಾದಲ್ಲಿರುವ ತ್ರಿಶೂರ್‌ನ ಗುರುವಾಯೂರ್‌ನಲ್ಲಿ ವಿದೇಶಿ ವಿನಿಮಯ ಸಂಸ್ಥೆಯಿಂದ 1.28 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಅಕ್ರಮವಾಗಿ 44.56 ಲಕ್ಷ ರೂ. ಏಜೆನ್ಸಿಗೆ ಯಾವುದೇ ಕಾನೂನು ದಾಖಲೆಗಳಾಗಲಿ, ಪರವಾನಗಿ ಇಲ್ಲ ಎಂದು ಕಸ್ಟಮ್ಸ್ ಕಂಡುಹಿಡಿದಿದೆ.
ಶಿವಮೊಗ್ಗ ಜಿಲ್ಲೆಯ ಹುಣುಸೋಡು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಕ್ಕೂ ನಂಟಿರುವ ಮಾಹಿತಿ ತಿಳಿದು ಬಂದಿದೆ. ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗ ಪಟ್ಟಣದ ಹನುಮಾನ್ ಎಂಟರ್ ಪ್ರೈಸಸ್ ಮಾಲೀಕ ಮಂಜುನಾಥ್ ಸಾಯಿ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಲ್ಲು ಕ್ವಾರಿಗಳಿಗೆ ಅಕ್ರಮವಾಗಿ ಸ್ಪೋಟಕ ವಸ್ತು ಸಾಗಾಟ ಮಾಡುತ್ತಿದ್ದ. ಅಂತೆಯೇ, ಶಿವಮೊಗ್ಗಕ್ಕೆ ಸ್ಪೋಟಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಖಾಸಗಿ ಶಾಲೆ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆಯೊಳಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ. ಈ ಕುರಿತಂತೆ ವಿಧಾನಪರಿಷತ್ ಸದಸ್ಯರ ಜತೆ ಸಚಿವ ಸುರೇಶ್ ಕುಮಾರ್ ಚರ್ಚೆ ನಡೆಸಲಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದು ಎಲೆಕ್ಟ್ರಾನಿಕ್ ವೋಟರ್ ಐಡಿ ಕಾರ್ಡ್ (e-EPIC) ಯೋಜನೆಗೆ ಚಾಲನೆ ನೀಡಿದರು. ಇನ್ನು, ಮೊಬೈಲ್ ಫೋನ್, ಕಂಪ್ಯೂಟರ್‌ನಲ್ಲಿ e-EPIC ಡೌನ್‌ಲೋಡ್ ಮಾಡಬಹುದು.
ದೇಶದಲ್ಲಿ ನೋಟ್ ಬ್ಯಾನ್ ಆಗುತ್ತದೆ ಎಂಬೆಲ್ಲಾ ಅಂತೆ-ಕಂತೆಗಳಿಗೆ ಸಂಬಂಧಸಿದಂತೆ RBI ಸ್ಪಷ್ಟನೆ ನೀಡಿದೆ. ನೂರು, ಹತ್ತು, ಐದು ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲ್ಲ. ಈ ನೋಟುಗಳಿಗೆ ಕಾನೂನಿನ ಮಾನ್ಯತೆ ಇರುತ್ತೆ ಎಂದು RBI ಅಧಿಕಾರಿ ಮಹೇಶ್ ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದಾರೆ.
ಭಾರತ-ಚೀನಾ ದೇಶಗಳ ನಡುವೆ ಗಡಿ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿತ್ತು. ಮೊಲ್ಡೊದಲ್ಲಿ ನಿನ್ನೆ(ಜ.24) ಬೆಳಗ್ಗೆ 11ಗಂಟೆಗೆ ಆರಂಭವಾಗಿದ್ದ 9ನೇ ಸುತ್ತಿನ ಮಾತುಕತೆ, ಇಂದು(ಜ.25) ಮುಂಜಾನೆ 2.30ರವರೆಗೆ ನಡೆದಿದೆ.
FDA ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ, ಕೆಪಿಎಸ್ಸಿಯಲ್ಲಿ ಎಸ್.ಡಿ.ಎ ಆಗಿರುವ ರಮೇಶ್ ಹೆರಕಲ್ ಜತೆ ಐವರನ್ನು ಸಿಸಿಬಿ ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಇವರ ಪಾತ್ರವಿದೆ ಎಂಬ ಶಂಕೆ ಮೂಡಿದ್ದು, ಸಿಸಿಬಿ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಇಬ್ಬರು ಮಕ್ಕಳನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪುರಸ್ಕೃತರ ಜತೆ ಇಂದು ಮಧ್ಯಾಹ್ನ 12ಕ್ಕೆ ಪ್ರಧಾನಿ ನಂರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
Published On - 6:58 pm, Mon, 25 January 21