‘5ನೇ ವಯಸ್ಸಿನಲ್ಲೇ ರೇಪ್​ ಆಗಿತ್ತು.. ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿರಲಿಲ್ಲಮ್ಮಾ..’: ಜಯಶ್ರೀ ರಾಮಯ್ಯ ಅಂತರಾಳದ ನೋವು ರೇಖಾರಾಣಿ ಮಾತಿನಲ್ಲಿ

‘ದೇಹಕ್ಕೆ ಗಾಯವಾದರೆ ಮನಸು ಸಮಾಧಾನ ಮಾಡತ್ತೆ, ಆದರೆ ಮನಸಿಗೆ ಗಾಯ ಆದರೆ ದೇಹ ಸಮಾಧಾನ ಮಾಡಲ್ಲ. ಆತ್ಮಹತ್ಯೆ ಮಾಡಿಕೊಂಡು ಬಿಡು ಎಂದೇ ದೇಹ ಮನಸಿಗೆ ಹೇಳತ್ತೆ ಅಲ್ವಾ ಅಮ್ಮಾ’ ಎಂದು ನನ್ನ ಬಳಿ ಹೇಳಿದ್ದಳು. ಈ ಮಾತು ನೆನಪಾದಾಗಲೆಲ್ಲ ನನಗೆ ಅಳು ಬರುತ್ತದೆ.

‘5ನೇ ವಯಸ್ಸಿನಲ್ಲೇ ರೇಪ್​ ಆಗಿತ್ತು.. ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿರಲಿಲ್ಲಮ್ಮಾ..’: ಜಯಶ್ರೀ ರಾಮಯ್ಯ ಅಂತರಾಳದ ನೋವು ರೇಖಾರಾಣಿ ಮಾತಿನಲ್ಲಿ
ಜಯಶ್ರೀ ರಾಮಯ್ಯ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2021 | 3:55 PM

ನಟಿ ಜಯಶ್ರೀ ರಾಮಯ್ಯ ಇಂದು ಆತ್ಮಹತ್ಯೆ ಮಾಡಿಕೊಂಡರು. ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಕೊನೆಗೂ ಮನಸು ನಿಯಂತ್ರಣ ಮಾಡಿಕೊಳ್ಳಲು ಆಗದೆ ಸಾವಿನ ಹಾದಿ ತುಳಿದರು ಎಂದು ಸುಲಭವಾಗಿ ಹೇಳಿಬಿಡಬಹುದು. ಅದೇನೋ ಸರಿ, ಜಯಶ್ರೀ ಅವರು ಅಷ್ಟೊಂದು ಖಿನ್ನತೆಗೆ ಜಾರಲು ಕಾರಣವೇನು? ಚಿತ್ರರಂಗದಲ್ಲಿ ಕಾಣದ ಯಶಸ್ಸಿನಿಂದಲೇ ಕಂಗಾಲಾದರಾ? ಅಥವಾ ಬೇರೇನಾದರೂ ಕಾರಣವಿತ್ತಾ? ಜಯಶ್ರೀ ಮನದಾಳದಲ್ಲಿ ಏನಿತ್ತು ಎಂಬುದನ್ನು ಆಕೆಯನ್ನು ಹತ್ತಿರದಿಂದ ಬಲ್ಲವರಲ್ಲಿ ಒಬ್ಬರಾದ ನಿರ್ದೇಶಕಿ, ನಿರ್ಮಾಪಕಿ ರೇಖಾರಾಣಿ ಕಶ್ಯಪ್​ ಟಿವಿ9 ಕನ್ನಡ ಡಿಜಿಟಲ್ ಜತೆ ಹಂಚಿಕೊಂಡಿದ್ದಾರೆ.

ಜಯಶ್ರೀ ರಾಮಯ್ಯ ಬಿಗ್​ಬಾಸ್​ಗೆ ಬರುವುದಕ್ಕೂ ಮೊದಲು ನನ್ನ ಬಳಿ ಆ್ಯಕ್ಟಿಂಗ್​ಗೆ ಅವಕಾಶ ಕೇಳಿದ್ದರು. ಹಲವು ಫೋಟೋಗಳನ್ನೂ ಕಳಿಸಿದ್ದರು. ಆದರೆ ನಾನು ಆಗ ಮಾಡುತ್ತಿದ್ದ ಪ್ರಾಜೆಕ್ಟ್​ಗೆ ಅವಳು ಸೂಕ್ತ ಎನ್ನಿಸಿರದ ಕಾರಣ ಮತ್ತು ನಮಗೂ ಕೆಲವೇ ನಟ-ನಟಿಯರ ಅಗತ್ಯವಿದ್ದ ಕಾರಣ ಆಕೆಯನ್ನು ನಮ್ಮ ಪಾತ್ರಗಳಿಗೆ ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಜಯಶ್ರೀಗೆ ಒಂದು ಅಚಲ ವಿಶ್ವಾಸವಿತ್ತು. ನಾನು ಒಂದು ಸಲ ಅಶೋಕ್​ ಕಶ್ಯಪ್​ ಅವರ ಧಾರಾವಾಹಿಯಲ್ಲಿ ನಟನೆ ಮಾಡಿದರೆ ಖಂಡಿತ ಪ್ರಸಿದ್ಧಿಯಾಗುತ್ತೇನೆ ಎಂದು ಬಲವಾಗಿ ನಂಬಿಕೊಂಡಿದ್ದ ಆಕೆ, ಒಂದಲ್ಲ ಒಂದು ದಿನವಾದರೂ ಅವಕಾಶ ಸಿಗಬಹುದು ಎಂದು ನಮ್ಮ ಸಂಪರ್ಕದಲ್ಲಿದ್ದಳು. ಆಗಾಗ ಕಾಲ್​, ಮೆಸೇಜ್​ ಮಾಡಿ ಅಮ್ಮಾ ಚೆನ್ನಾಗಿದ್ದೀರಾ, ಹೇಗಿದ್ದೀರಾ ಎಂದು ಜನರಲ್​ ಆಗಿ ಮಾತನಾಡುತ್ತಿದ್ದರು.

ಇಷ್ಟಾದ ಮೇಲೆ ಅವರಿಗೆ ಬಿಗ್​ಬಾಸ್​ನಲ್ಲಿ ಅವಕಾಶ ಸಿಕ್ಕಿತು. ಆಗ ಅವರೊಂದಿಗೆ ಸಂಪರ್ಕ ಕಡಿಮೆಯಾಯಿತು. ಅಷ್ಟಾದ ಮೇಲೆ ಆಕೆ ಮತ್ತೆ ನನ್ನ ಗಮನಕ್ಕೆ ಬಂದಿದ್ದು ಕಳೆದ ಜುಲೈನಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ. ಆ ಕೂಡಲೇ ನಾನವಳಿಗೆ ಒಂದು ಮೆಸೇಜ್​ ಕಳಿಸಿದೆ. ಎಷ್ಟು ಹೊತ್ತಲ್ಲಾದ್ರೂ ಸರಿ, ಮಾತನಾಡಬೇಕು ಎನ್ನಿಸಿದ ತಕ್ಷಣ ನನಗೆ ಕರೆ ಮಾಡು, ನಾನು ನಿನ್ನ ಜತೆಗೆ ಸದಾ ಇರುತ್ತೇನೆ ಎಂದು ಧೈರ್ಯ ತುಂಬಿದೆ. ಆದಕ್ಕವಳು ಥ್ಯಾಂಕ್ಯೂ ಅಮ್ಮಾ ಎಂದೂ ರಿಪ್ಲೈ ಮಾಡಿದ್ದಳು.

ಆಕೆ ಆಸ್ಪತ್ರೆಯಿಂದ ನನಗೆ ತುಂಬ ದೊಡ್ಡದೊಡ್ಡ ಸಂದೇಶಗಳನ್ನು ಕಳಿಸಿದ್ದಳು. ‘ನಾನು ಖಿನ್ನತೆಯಲ್ಲಿದ್ದೇನಮ್ಮಾ.. ನಿಮ್ಮ ಮನೆಗೆ ಬರಲಾ’ ಎಂದು ಕೇಳುತ್ತಿದ್ದಳು. ಆಯ್ತು ಬಾ ಎಂದು ನಾನು ಹೇಳಿದ್ದೆ. ಹಾಗೇ ನಮ್ಮ ಮನೆಗೆ ಬಂದಳು. ಆಕೆಗೆ ಮನೆ ಊಟ ಅಂದರೆ ಪ್ರೀತಿ. ಚಪಾತಿ, ರೊಟ್ಟಿ, ದೋಸೆ ಇಂಥದ್ದನ್ನೆಲ್ಲ ಕೇಳಿ ಮಾಡಿಸಿಕೊಂಡು ತಿನ್ನುತ್ತಿದ್ದಳು. ಅದೆಲ್ಲ ಆದ ಬಳಿಕ ಇಬ್ಬರೇ ಕುಳಿತು ಮಾತನಾಡಿದೆವು. ಆಗ ಬಿಚ್ಚಿಟ್ಟಳು ತನ್ನ ನೋವಿನ ಕತೆಯನ್ನು..

‘ನಾನು ಜೀವನದಲ್ಲಿ ತುಂಬ ಸೋತು ಹೋಗಿದ್ದೇನಮ್ಮಾ, ದೇಹಕ್ಕೆ ಗಾಯವಾದರೆ ಮನಸು ಸಮಾಧಾನ ಮಾಡತ್ತೆ, ಆದರೆ ಮನಸಿಗೆ ಗಾಯ ಆದರೆ ದೇಹ ಸಮಾಧಾನ ಮಾಡಲ್ಲ. ಅದರ ಬದಲು, ಕುತ್ತಿಗೆಗೆ ಕೈ ಹಾಕಿ ಹಿಸುಕಿಬಿಡು, ನೇಣು ಹಾಕಿಕೋ, ಆತ್ಮಹತ್ಯೆ ಮಾಡಿಕೊಂಡು ಬಿಡು ಎಂದೇ ದೇಹ ಮನಸಿಗೆ ಹೇಳತ್ತೆ ಅಲ್ವಾ ಅಮ್ಮಾ’ ಎಂದು ನನ್ನ ಬಳಿ ಹೇಳಿದ್ದಳು. ಈ ಮಾತು ನೆನಪಾದಾಗಲೆಲ್ಲ ನನಗೆ ಅಳು ಬರುತ್ತದೆ.

‘ನಾನು ತೀರ ಚಿಕ್ಕವಳಿದ್ದಾಗ ಅಂದರೆ 5 ವರ್ಷದಲ್ಲಿದ್ದಾಗಲೇ ನನ್ನ ಕಸಿನ್​ ಒಬ್ಬನಿಂದ ಅತ್ಯಾಚಾರಕ್ಕೆ ಒಳಪಟ್ಟೆ. ಇದನ್ನು ಅಪ್ಪಂಗೆ ಹೇಳಿದರೆ ಆತ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ನನ್ನ ಅಪ್ಪ ತುಂಬ ಕುಡಿಯುತ್ತಿದ್ದರು. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಅಮ್ಮಂಗೆ ಮಾನಸಿಕ ಸಮಸ್ಯೆಯಿತ್ತು. ಹಿಸ್ಟೀರಿಯಾಕ್ಕೆ ಒಳಗಾಗುತ್ತಿದ್ದರು’ ಎಂಬ ನೋವನ್ನೂ ನನ್ನ ಬಳಿ ಹೇಳಿಕೊಂಡಳು. ಅಷ್ಟೇ ಅಲ್ಲ, ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿಲ್ಲ. ಎಲ್ಲ ಕಡೆಯೂ ನಾನು ಸಂತ್ರಸ್ತೆಯಾಗಿಬಿಟ್ಟಿದ್ದೇನೆ. ಯಾರನ್ನೇ ನಂಬಿ ಹೋದರೂ ಮೋಸ ಹೋಗುತ್ತಿದ್ದೇನೆ. ಹೆಣ್ಣುಮಕ್ಕಳೂ ಹಾಗೇ ನಡೆದುಕೊಳ್ಳುತ್ತಾರೆ. ಎಷ್ಟೂ ಅಂತ ನನ್ನನ್ನು ನಾನು ಪ್ರೊಟೆಕ್ಟ್ ಮಾಡಿಕೊಳ್ಳಲಿ ಎಂದು ಬೇಸರವನ್ನು ತೋಡಿಕೊಂಡಿದ್ದಳು.

ಜಯಶ್ರೀ ಬಡವಳಲ್ಲ. ತುಂಬ ಶ್ರೀಮಂತೆ. ವಿಲ್ಸನ್​ ಗಾರ್ಡನ್​ನಲ್ಲಿ ಆಸ್ತಿಯಿತ್ತು. ಆದರೆ ಈಕೆಯ ತಾಯಿಯ ತಮ್ಮ ಅಂದರೆ ಸೋದರ ಮಾವ ಎಲ್ಲವನ್ನೂ ಕಬಳಿಸಿದ. ಇವರನ್ನು ನಡುರಾತ್ರಿ 12 ಗಂಟೆಯಲ್ಲಿ ಮನೆಯಿಂದ ಓಡಿಸಿದ್ದ. ಆದರೆ ಆ ಪ್ರಕರಣ ನಿಲ್ಲಲಿಲ್ಲ. ಅದಾದ ಬಳಿಕ ಜಯಶ್ರೀ ಜೆಪಿ ನಗರದ ಬಳಿ ಪಿಜಿಯಲ್ಲಿ ಅಮ್ಮನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಅಲ್ಲಿ ಅಡುಗೆಯವರೊಂದಿಗೆ ಈಕೆಯ ಅಮ್ಮನೂ ಹೊಂದಿಕೊಂಡು ಅಡುಗೆ ಮಾಡುತ್ತಿದ್ದರು. ಈ ಬಗ್ಗೆ ಜಯಶ್ರೀ ನನ್ನ ಬಳಿ ಹೇಳಿಕೊಂಡು ತುಂಬ ಸಂತೋಷ ಪಟ್ಟಿದ್ದಳು. ನನ್ನ ಅಮ್ಮಂಗೆ ಹೊಸ ಸ್ನೇಹಿತೆ ಸಿಕ್ಕಿದ್ದಾರೆ. ಅವರ ಬಳಿ ಮಾತನಾಡಿಕೊಂಡು, ನಕ್ಕೊಂಡು ಅಮ್ಮನೂ ಖುಷಿಯಾಗಿದ್ದಾರೆ ಎಂದೂ ಹೇಳಿದ್ದಳು. ನನಗೂ ತುಂಬ ಸಮಾಧಾನ ಆಯಿತು. ನಂತರವೂ ಆಕೆ ನನ್ನ ಮನೆಗೆ ಬಂದಿದ್ದಳು.

ಆರ್ಟಿಸ್ಟ್ ಆಗೋ ಆಸೆ ಇರಲಿಲ್ಲ ಜಯಶ್ರೀಗೆ  ಟೆಕ್ನೀಷಿಯನ್ ಆಗಬೇಕು ಎಂಬ ಕನಸು ಕಂಡಿದ್ದಳು. ನನ್ನನ್ನು ನಿಮ್ಮೊಂದಿಗೆ ಅಸಿಸ್ಟಂಟ್ ಡೈರೆಕ್ಟರ್​ ಆಗಿ ನೇಮಿಸಿಕೊಳ್ಳಿ ಎಂದಿದ್ದಳು. ನಾನೂ ಅದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದೆ. ನಾನೊಂದು ಸೀರಿಯಲ್ ಮಾಡಲು ಮುಂದಾಗಿದ್ದೆ. ಅದಕ್ಕೆ ಜಯಶ್ರೀಯನ್ನು ಕರೆಯಬೇಕು ಎಂದುಕೊಂಡಿದ್ದೆ. ಆದರೆ ಮಧ್ಯದಲ್ಲಿ ಆ ಸೀರಿಯಲ್ ಬೇಡವೆಂದು ಬಿಟ್ಟು ನಾನು ಬೇರೊಂದು ಪ್ರಾಜೆಕ್ಟ್​ನಲ್ಲಿ ತೊಡಗಿಕೊಂಡೆ. ಹಾಗಾಗಿ ಅವಳಿಗೆ ಕೆಲಸ ಕೊಡಲು ಆಗಲಿಲ್ಲ.

ಮದುವೆ ಮಾಡಿಸುವ ಪ್ರಯತ್ನ ಮಾಡಿದ್ದೆ ಆಕೆಯ ಸಮಸ್ಯೆಯೆಲ್ಲ ನನಗೆ ಗೊತ್ತಿತ್ತು. ಅಷ್ಟಾದರೂ ಅವಳಿಗೊಂದು ಮದುವೆ ಮಾಡಿಸಬೇಕು ಎಂದು ಪ್ರಯತ್ನ ಮಾಡಿದ್ದೆ. ಅದಕ್ಕೆ ಅವಳೂ ಒಪ್ಪಿದ್ದಳು. ನಾನು ಸತ್ಯ ಮಾತನಾಡುತ್ತೇನೆ. ನನ್ನ ವಲಯದಲ್ಲಿ ಕಪಟ, ನಾಟಕ ಇಲ್ಲ ಎಂಬುದು ಅವಳಿಗೂ ಗೊತ್ತಿತ್ತು. ಆಕೆಯ ಬಗ್ಗೆ ಎಲ್ಲವನ್ನೂ ತಿಳಿಸಿಯೇ ಸಂಬಂಧ ಹುಡುಕುವ ಪ್ರಯತ್ನ ಮಾಡಿದ್ದೆ. ಒಂದಿಬ್ಬರ ಬಳಿ ಮಾತನಾಡಿದ್ದೆ ಕೂಡ. ಆದರೆ ಹುಡುಗರಿಗೆ ಧೈರ್ಯ ಸಾಕಾಗಲಿಲ್ಲ. ಆಗಲೇ ಒಮ್ಮೆ ಆತ್ಮಹತ್ಯೆ ಯತ್ನ ಮಾಡಿದ್ದಾಳೆ. ಮದುವೆಯಾದ ಮೇಲೆ ಚಿಕ್ಕ ವಿಚಾರಕ್ಕೆ ಬೇಸರ ಮಾಡಿಕೊಂಡು ಮತ್ತೆ ಅದನ್ನೇ ಮಾಡಿದರೆ ಏನು ಮಾಡುವುದು ಎಂಬ ಆತಂಕ ವ್ಯಕ್ತಪಡಿಸಿದರು. ಅದರ ಹೊರತಾಗಿ ಬೇರೇನೂ ಸಮಸ್ಯೆ ಇರಲಿಲ್ಲ. ಹಳೇದನ್ನು ಮರೆತು ಇನ್ನು ಮುಂದೆ ನನ್ನೊಂದಿಗೆ ಚೆನ್ನಾಗಿರು ಎನ್ನುವವರು ಈಗಿನ ಕಾಲದಲ್ಲಿ ತುಂಬ ಜನ ಇರುತ್ತಾರೆ. ಆದರೆ ಈ ಹುಡುಗಿಯ ಸೂಸೈಡ್​ ಅಟೆಂಪ್ಟ್ ಬಗ್ಗೆ ಹೆದರಿ ಹುಡುಗರು ಹಿಂದೇಟು ಹಾಕಲು ಶುರು ಮಾಡಿದರು. ಆಗ ನಾನೂ ಸುಮ್ಮನಾದೆ. ನೀನು ಸಂಪೂರ್ಣವಾಗಿ ಹುಷಾರಾದಾಗ ಹೇಳು. ನಿನ್ನ ಜತೆ ನಾವಿರುತ್ತೇವೆ ಎಂದು ಜಯಶ್ರೀಗೆ ಭರವಸೆಯನ್ನೂ ನೀಡಿದೆ. ಹಳೆಯ ದುರಂತವನ್ನೆಲ್ಲ ಮರೆತು ಹೊಸ ಜೀವನ ಶುರು ಮಾಡು ಎಂದು ಹೇಳಿದ್ದೆ. ಅದಕ್ಕೆ ಅವಳು ಒಪ್ಪಿಕೊಂಡಿದ್ದಳು. ಆದರೆ ಈಗೆರಡು ತಿಂಗಳಿಂದ ಅವಳೊಂದಿಗೆ ಕಾಂಟೆಕ್ಟ್​ ಇರಲಿಲ್ಲ. ನನ್ನ ಕೆಲಸದಲ್ಲಿ ನಾನು ತುಂಬ ಬಿಜಿಯಾಗಿದ್ದೆ. ಆಕೆಯೂ ಕರೆ ಮಾಡಲಿಲ್ಲ.

ಕೆಟ್ಟ ಕೆಲಸ ಮಾಡೋಕೆ ಇಷ್ಟವಿರಲಿಲ್ಲ ಜಯಶ್ರೀಗೆ ಹಣದ ಬಗ್ಗೆ ವ್ಯಾಮೋಹ ಇರಲಿಲ್ಲ. ಹಣ, ಹೆಸರಿಗಾಗಿ ಕೆಟ್ಟ ಕೆಲಸ ಮಾಡೋದೂ ಬೇಕಿರಲಿಲ್ಲ. ಅದನ್ನೂ ಹೇಳಿದ್ದಳು. ನನಗೆ ಅಂಥ ಬದುಕು ಬೇಡ. ಹಣ ಮಾಡಲೆಂದೇ ಹೊರಟರೆ ಇಂಡಸ್ಟ್ರಿಯಲ್ಲಿ ಎರಡು ನಿಮಿಷದ ಕೆಲಸ. ಆದರೆ ನನಗೆ ಅದೆಲ್ಲ ಬೇಡ ಎನ್ನುತ್ತಿದ್ದಳು. ಹಾಗಾಗಿ ಅವಳ ಖಿನ್ನತೆಗೆ ಚಿತ್ರರಂಗ ಕಾರಣ ಅಲ್ಲ. ಅವಳು ಐದನೇ ವರ್ಷದಿಂದ ಅನುಭವಿಸಿದ ಕಿರುಕುಳ, ಯಾರಿಂದಲೂ ಸಿಗದ ಸಹಕಾರವೇ ಅವಳನ್ನು ಬಳಲಿಸಿತು. ಬಾಲ್ಯದ ನೋವನ್ನು ಮರೆಯಲೆಂದೇ ಈ ರಂಗಕ್ಕೆ ಬಂದಳು. ಆದರೆ ಎಲ್ಲೂ ಅವಳಿಗೆ ಗೆಲುವು ಸಿಗಲಿಲ್ಲ. ಈ ಕ್ಷೇತ್ರಕ್ಕೆ ಆಸೆ ಪಟ್ಟು ಬಂದಿದ್ದರೂ ಸಹ ಇಲ್ಲಿನ ವಸ್ತು ಸ್ಥಿತಿ, ವಾಸ್ತವ ಅರ್ಥವಾದ ಮೇಲೆ ಇಲ್ಲಿಂದ ಬಿಟ್ಟು ಹೋಗುವ ಯೋಚನೆ ಮಾಡಿದ್ದಳು. ಅಂಟಿಕೊಂಡು ಕೂರಲಿಲ್ಲ. ಸಿನಿಮಾ ಮಾಡಬೇಕು ಎಂಬ ಆಸೆಯಿದ್ದರೂ ಅವಕಾಶ ಸಿಗಲೇ ಇಲ್ಲ.

ಒಂದು ಸಾಂತ್ವನದ ಗ್ರೂಪ್​ ಬೇಕು ನನಗೆ ಅನ್ನಿಸುವ ಪ್ರಕಾರ ನಮ್ಮಲ್ಲೊಂದು ಸಾಂತ್ವನದ ಗ್ರೂಪ್​ ಬೇಕು. ತುಂಬ ಜನ ಇರದಿದ್ದರೂ ಅಲ್ಲಿ ಹೀಗೆ ನೊಂದಿರುವ ಹೆಣ್ಣುಮಕ್ಕಳು ತಮ್ಮ ಕಷ್ಟ, ತಮಗಾದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳುವ ಅವಕಾಶ ಇರಬೇಕು. ಸಿಲ್ಕ್ ಸ್ಮಿತಾ ಸತ್ತಾಗಲೂ ನಾನಿದನ್ನು ಹೇಳಿದ್ದೆ. ಈಗ ಇವಳು ಆತ್ಮಹತ್ಯೆ ಮಾಡಿಕೊಂಡಾಗಲೂ ನನಗೆ ಬಲವಾಗಿ ಅನ್ನಿಸುತ್ತಿದೆ. ಬರೀ ಹಣ, ಅಧಿಕಾರ ಇದ್ದಾಗಲಷ್ಟೇ ಮಾತುಕತೆ ಮಾಡಿಕೊಂಡಿರುವುದಲ್ಲ. ಕಷ್ಟವನ್ನೂ ಕೇಳಬೇಕು. ಖಿನ್ನತೆ, ನೋವಿನಲ್ಲಿ ಇರುವವರಿಗೆ, ಅವರು ಅದನ್ನು ಹಂಚಿಕೊಂಡಾಗ ನಾಲ್ಕು ಜನ ಸಮಾಧಾನ ಮಾಡಬೇಕು. ಅವರೊಟ್ಟಿಗೆ ಮುಕ್ತವಾಗಿ ಮಾತನಾಡುವಂತಿರಬೇಕು. ನಾನೂ ಈ ಬಗ್ಗೆ ನನ್ನ ಸ್ನೇಹಿತರೊಟ್ಟಿಗೆ ಮಾತನಾಡುತ್ತೇನೆ.

ಜಯಶ್ರೀ ಸಾವಿನ ಬೆನ್ನಲ್ಲೇ ನಿರ್ದೇಶಕಿ ರೇಖಾ ರಾಣಿಯವರು ಹಾಕಿದ ಫೇಸ್​ಬುಕ್ ಪೋಸ್ಟ್​

ನಿರ್ದೇಶಕಿ ರೇಖಾರಾಣಿ

-ನಿರೂಪಣೆ: ಲಕ್ಷ್ಮೀ ಹೆಗಡೆ

ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ

ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ

ನಿನ್ನೆ ರಾತ್ರಿ ಊಟ ಮಾಡಿ ರೂಂ ಸೇರಿದ್ದ ಜಯಶ್ರೀ ಹೊರಬರಲಿಲ್ಲ..

ಸಾವಿನ ಹಾದಿಯನ್ನೇ ತುಳಿದ ಬಿಗ್​ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ

Published On - 8:50 pm, Mon, 25 January 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ