ಮಂಡ್ಯ: ಬೆಂಗಳೂರಿನ ವಿಜಯನಗರದ ಎಂ.ಸಿ.ಲೇಔಟ್ನಲ್ಲಿ ನಿವೃತ್ತ DySP ಹನುಮಂತಪ್ಪ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಆತ್ಮಹತ್ಯೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೆ ಅಕ್ರಮ ಸಂಬಂಧವೇ ಕಾರಣವಾಯ್ತಾ? ಎಂಬ ಅನುಮಾನ ಮೂಡಿದೆ.
ನಿವೃತ್ತ DySP ಹನುಮಂತಪ್ಪ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಈಗ ಅವರ ಸಾವಿಗೆ ಕಾರಣವಾಗಿದ್ದು ಅಕ್ರಮ ಸಂಬಂಧ ಎಂಬ ಹೊಸ ವಿಚಾರ ಬಯಲಾಗಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಇದೇ ವಿಚಾರವಾಗಿ ಬೆಳಕವಾಡಿ ಠಾಣೆ ಪೊಲೀಸರು, ಹನುಮಂತಪ್ಪಗೆ ನೋಟಿಸ್ ನೀಡಿದ್ದರು. ನೋಟಿಸ್ ಬಳಿಕ ಪೊಲೀಸರ ಕೈಗೆ ಸಿಗದೆ ಹನುಮಂತಪ್ಪ ಓಡಾಡಿಕೊಂಡಿದ್ದರು. ಈ ಮಧ್ಯೆ.. ಇದೇ ವಿಚಾರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
Published On - 1:34 pm, Mon, 28 December 20