AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ..

ಎಸಿಪಿಗಳು  ಆಗಮಿಸಿ ಕೊರಳಿಗೆ ಹಗ್ಗ ಕಟ್ಟಿದ್ದನ್ನು ಬಿಚ್ಚುವಂತೆ  ಮನವಿ ಮಾಡಿದ್ದರು. ಆದರೆ ಇದಕ್ಕೆ ಬಗ್ಗದ ಕನ್ನಡಪರ ಹೋರಾಟಗಾರು ನಾನು ಸತ್ತರು ಪರವಾಗಿಲ್ಲ ಹಗ್ಗ ಕೊಡುವುದಿಲ್ಲ ಹಾಗೂ ಧ್ವಜಸ್ತಂಭ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಕನ್ನಡ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ..
ಧ್ಜಜಸ್ತಂಭಕ್ಕೆ ಉರುಳು ಹಾಕಿಕೊಂಡ ಕನ್ನಡ ಪರ ಹೋರಾಟಗಾರನನ್ನು ಎಳೆದಾಡಿದ ಪೊಲೀಸರು
sandhya thejappa
| Edited By: |

Updated on: Dec 28, 2020 | 4:59 PM

Share

ಬೆಳಗಾವಿ: ಕನ್ನಡ ಪರ ಹೋರಾಟಗಾರರು ಕನ್ನಡದ ಶಾಲುವಿನಿಂದ ಧ್ವಜಸ್ತಂಭಕ್ಕೆ ಉರುಳು ಹಾಕಿಕೊಂಡು ಕುಳಿತ ಘಟನೆ ಜಿಲ್ಲೆಯ ಮಹಾನಗರ ಪಾಲಿಕೆ ಎದುರು ಕಂಡುಬಂದಿದೆ.

ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಇರಿಸಲು ಕನ್ನಡ ಪರ ಹೋರಾಟಗಾರರು ಮುಂದಾಗಿದ್ದರು. ಧ್ವಜಸ್ತಂಭವನ್ನು ಸ್ಥಳಕ್ಕೆ ತರುತ್ತಿದ್ದಂತೆ ಈ ವಿಷಯ ತಿಳಿದ ಪೊಲೀಸರು ಅಲ್ಲಿಗೆ ಆಗಮಿಸಿ ಧ್ವಜಸ್ತಂಭ ಸ್ಥಾಪನೆ ಮಾಡದಂತೆ ತಡೆದರು. ಆ ಬಳಿಕ  ಕನ್ನಡ ಪರ ಹೋರಾಟಗಾರರು ಅದೇ ಧ್ವಜಸ್ತಂಭಕ್ಕೆ ಕನ್ನಡ ಶಾಲುವಿನಿಂದ ಕೊರಳಿಗೆ ಉರುಳು ಹಾಕಿಕೊಂಡರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಹಾಗೂ ಕನ್ನಡ ಪರ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ಪ್ರಾರಂಭವಾಯಿತು. ಸದ್ಯದ ಪರಿಸ್ಥಿತಿ ಸುಧಾರಿಸಲು ಇಬ್ಬರು ಎಸಿಪಿಗಳು  ಆಗಮಿಸಿ ಕೊರಳಿಗೆ ಹಗ್ಗ ಕಟ್ಟಿದ್ದನ್ನು ಬಿಚ್ಚುವಂತೆ  ಮನವಿ ಮಾಡಿದರು. ಆದರೆ ಇದಕ್ಕೆ ಬಗ್ಗದ ಕನ್ನಡಪರ ಹೋರಾಟಗಾರು ನಾನು ಸತ್ತರೂ ಪರವಾಗಿಲ್ಲ ಹಗ್ಗ ಕೊಡುವುದಿಲ್ಲ ಹಾಗೂ ಧ್ವಜಸ್ತಂಭ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಚಪ್ಪಲಿ ತೊಡಿಸಿ ಸನ್ಮಾನ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರುವವರೆಗೆ ಚಪ್ಪಲಿ ಹಾಕುವುದಿಲ್ಲವೆಂದು ಪ್ರತಿಜ್ಞೆ ಮಾಡಿ, 16 ವರ್ಷಗಳಿಂದ ಬರಿಗಾಲಲ್ಲೇ ಓಡಾಡುತ್ತಿದ್ದ ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಬಾವಿಗೆ  ಇದೀಗ ಚಪ್ಪಲಿಯನ್ನು ತೊಡಿಸಿ  ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿದ್ದಾರೆ.

ದುರ್ಗದ ಕೆಎಸ್ಆರ್​ಟಿಸಿ ಚಾಲಕ ನಟರಾಜ್​ ‘ಕನ್ನಡ ರಥ’ ನಿಮಗೂ ಇಷ್ಟವಾದೀತು.. ಬನ್ನೀ ಒಂದ್​ ರೌಂಡ್