ರಾಜ್ಯದಲ್ಲಿ ಕೊರೊನಾ ಲಸಿಕೆ ಟ್ರಯಲ್ಗೆ ಸ್ವಯಂ ಸೇವಕರ ಕೊರತೆ!
ವೈದೇಹಿ ಆಸ್ಪತ್ರೆಯಲ್ಲಿ ಕೊರೊನಾ ಔಷಧ ಪರೀಕ್ಷೆ ನಡೆಯುತ್ತಿದೆ. ಆದರೆ, ಈಗ ಯಾರೊಬ್ಬರೂ ಔಷಧ ಪಡೆಯಲು ಮುಂದೆ ಬರದೆ ಇರುವುದು ವೈದ್ಯರಿಗೆ ಚಿಂತೆ ಉಂಟು ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ 2ನೇ ಡೋಸ್ನ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇದಕ್ಕೆ ಸ್ವಯಂ ಸೇವಕರ ಕೊರತೆ ಎದುರಾಗಿದ್ದು, ಯಾರೊಬ್ಬರೂ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.
ಮೊದಲನೇ ಡೋಸ್ ಪಡೆದುಕೊಳ್ಳಲು ಕೂಡ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಹೀಗಾಗಿ, ಮೊದಲನೇ ಡೋಸ್ ಅನ್ನು ರಾಜಕಾರಣಿಗಳು, ಸೆಲೆಬ್ರೆಟಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಯ ಸಂಬಂಧಿಕರಿಗೆ ನೀಡಲಾಗಿತ್ತು. ಅದೇ ರೀತಿ ಈ ವಾರ ಎರಡನೇ ಡೋಸ್ ಆರಂಭಿಸಬೇಕಿತ್ತು.
ವೈದೇಹಿ ಆಸ್ಪತ್ರೆಯಲ್ಲಿ ಕೊರೊನಾ ಔಷಧ ಪರೀಕ್ಷೆ ನಡೆಯುತ್ತಿದೆ. ಆದರೆ, ಈಗ ಯಾರೊಬ್ಬರೂ ಔಷಧ ಪಡೆಯಲು ಮುಂದೆ ಬರದೆ ಇರುವುದು ವೈದ್ಯರಿಗೆ ಚಿಂತೆ ಉಂಟು ಮಾಡಿದೆ.
ಈ ಬಗ್ಗೆ ಕ್ಲಿಂಟ್ರಾಕ್ಟ್ ನಿರ್ದೇಶಕಿ ಮನವಿ ಮಾಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯಲು ಮುಂದೆ ಬರಬೇಕು. ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಆಗುವುದಿಲ್ಲ. ನಾವು ಜ.18ಕ್ಕೆ ಭಾರತದ ಹೆಮ್ಮೆಯ ಕೊವ್ಯಾಕ್ಸಿನ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದಿದ್ದಾರೆ.
ವುಹಾನ್ನಿಂದ ಕೊರೊನಾ ಸ್ಥಿತಿಗತಿ ವರದಿ ಮಾಡಿದ್ದ ಚೀನಾ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ