ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶಿವರಾಜ್​ಕುಮಾರ್ ಅಭಿಮಾನಿಗಳ ಆಗ್ರಹ

ಇಲ್ಲ ಸಲ್ಲದ ಸುದ್ದಿಗಳನ್ನು ಹರಿದಾಡಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಸನ್ನ ಥಿಯೇಟರ್ ಬಳಿ ಇರುವ ರಾಜ್ ಕುಮಾರ್ ಪ್ರತಿಮೆ ಹತ್ತಿರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶಿವರಾಜ್​ಕುಮಾರ್ ಅಭಿಮಾನಿಗಳ ಆಗ್ರಹ
ರಾಜ್​ಕುಮಾರ್ ಪ್ರತಿಮೆ ಹತ್ತಿರ ಅಭಿಮಾನಿಗಳ ಪ್ರತಿಭಟನೆ
sandhya thejappa

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 28, 2020 | 9:34 PM

ಬೆಂಗಳೂರು: ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಾ.ಶಿವರಾಜ್​ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ವಿಷ್ಣುವರ್ಧನ್ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಆದರೆ ಜನಪ್ರಿಯ ನಾಯಕ ಎನ್.ಆರ್ ರಮೇಶ್ ಬಗ್ಗೆ ಶಿವೆ ಸುವೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಇಲ್ಲ ಸಲ್ಲದ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಸನ್ನ ಥಿಯೇಟರ್ ಬಳಿ ಇರುವ ರಾಜ್​ಕುಮಾರ್ ಪ್ರತಿಮೆ ಹತ್ತಿರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಸಿಸಿಟಿವಿಯಲ್ಲಿ ಪರಿಶೀಲಿಸಿ ವಿಷ್ಣುವರ್ಧನ್ ಬಗ್ಗೆ ನಮಗೂ ಅಪಾರವಾದ ಗೌರವವಿದೆ. ಮೊನ್ನೆಯಷ್ಟೇ ವಿಷ್ಣುಗೆ ಪರಭಾಷಾ ನಟ ನಿಂದಿಸಿದ್ದಕ್ಕೆ ಬೇಸರವಾಗಿತ್ತು. ನಾವೆಲ್ಲರೂ ನಟ ವಿಷ್ಣುವರ್ಧನ್​ಗೆ ಗೌರವ ಕೊಡುತ್ತೇವೆ. ವಿಷ್ಣು ಪ್ರತಿಮೆ ಹಾಳಾಗಿರುವುದಕ್ಕೆ ನಮಗೂ ಬೇಸರವಾಗಿದೆ. ಆದರೆ ಈ ಕೃತ್ಯವನ್ನು ಎಸಗಿರುವುದು ರಾಜ್ ಕುಮಾರ್ ಅಭಿಮಾನಿಗಳೆಂದು ಸುಳ್ಳು ಸುದ್ದಿಯನ್ನು ಹರಿ ಬಿಟ್ಟಿರುವುದು ಒಳಿತಲ್ಲ. ಪ್ರತಿಮೆಯನ್ನು ಹಾಳು ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಡಾ.ರಾಜ್ ಕುಮಾರ್ ಅಭಿಮಾನಿ ಹೊನ್ನೇಗೌಡ ಅಭಿಪ್ರಾಯಪಟ್ಟರು.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮಾಹಿತಿ ಹರಿಬಿಟ್ಟ ಬಗ್ಗೆ ಮಾಗಡಿ ರೋಡ್ ಪೊಲೀಸರು ದೂರು ದಾಖಲಿಸಿದ್ದಾರೆ.

ಡಾ.ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ: ಧ್ವಂಸವಾದ ಜಾಗದಲ್ಲೇ ಮತ್ತೆ ತಲೆ ಎತ್ತಲಿದೆ ಸಾಹಸಸಿಂಹನ ಪ್ರತಿಮೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada