ಕೊಡಗು: ಕಾಂಕ್ರೀಟ್ ಲಾರಿ ಪಲ್ಟಿಯಾಗಿ ಇಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿ ಓರ್ವನ ಶವ ಪತ್ತೆಯಾಗಿದ್ದು ಮತ್ತೋರ್ವನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದ ಬಳಿ ನಿನ್ನೆ ಭೀಕರ ದುರ್ಘಟನೆವೊಂದು ಸಂಭವಿಸಿತ್ತು. ರಸ್ತೆಗೆ ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಕಾಂಕ್ರೀಟ್ ಲಾರಿ ನಿಂತಿದ್ದಲ್ಲಿ ಮಣ್ಣು ಕುಸಿತವಾಗಿತ್ತು. ಈ ಸಂದರ್ಭ ಸಂತೋಷ್, ಪ್ರವೀಣ್ ಎಂಬ ಇಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದರು.
ಬಳಿಕ ಮಣ್ಣಿನ ಮೇಲೆ ಕಾಂಕ್ರೀಟ್ ಲಾರಿ ಉರುಳಿ ಬಿದ್ದಿತ್ತು. ಮತ್ತೊಂದು ಲಾರಿ ಜೆಸಿಬಿ ಮೂಲಕ ಕಾಂಕ್ರೀಟ್ ಲಾರಿ ಮೇಲೆತ್ತಿದ್ರು. ಮಣ್ಣಿನಡಿಯಲ್ಲಿ ಸಿಲುಕಿದ್ದ ಪ್ರವೀಣ್ ಮೃತದೇಹ ಪತ್ತೆಯಾಗಿದ್ದು, ಸಂತೋಷ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಕುಲಶೇಖರ ಬಳಿ ರೈಲು ಹಳಿ ಮೇಲೆ ಮಣ್ಣು ಕುಸಿತ; ರೈಲು ಸಂಚಾರ ರದ್ದು