ಎರಡು ಗುಂಪುಗಳ ನಡುವೆ ಮಾರಾಮಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

| Updated By: ಸಾಧು ಶ್ರೀನಾಥ್​

Updated on: Jan 20, 2021 | 9:59 AM

ಬೆಂಗಳೂರು: ಬಾರ್​ಗೆ ತೆರಳಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಹೊಡದಾಡಿಕೊಂಡ ಘಟನೆ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ. ದೊಮ್ಮಸಂದ್ರ ಹುಡುಗರು ಹಾಗೂ ಎಂ.ಎಸ್ ರಾಮಯ್ಯ ಲೇಔಟ್ ಹುಡುಗರು ಸೇರಿ ಒಟ್ಟು 20 ಮಂದಿ ಕಾಝಿನ್ಸ್ ಹುಕ್ಕಾ ಬಾರ್​ಗೆ ತೆರಳಿದ್ದರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಜಗಳ ಏರ್ಪಟ್ಟಿದೆ. ಯುವಕರು ಹೊಡೆದಾಡುತ್ತಾ ಬಾರ್​ನಿಂದ ಹೊರ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.  

ಎರಡು ಗುಂಪುಗಳ ನಡುವೆ ಮಾರಾಮಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿರುವ ಯುವಕರು
Follow us on

ಬೆಂಗಳೂರು: ಬಾರ್​ಗೆ ತೆರಳಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಹೊಡದಾಡಿಕೊಂಡ ಘಟನೆ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ.

ದೊಮ್ಮಸಂದ್ರ ಹುಡುಗರು ಹಾಗೂ ಎಂ.ಎಸ್ ರಾಮಯ್ಯ ಲೇಔಟ್ ಹುಡುಗರು ಸೇರಿ ಒಟ್ಟು 20 ಮಂದಿ ಕಾಝಿನ್ಸ್ ಹುಕ್ಕಾ ಬಾರ್​ಗೆ ತೆರಳಿದ್ದರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಜಗಳ ಏರ್ಪಟ್ಟಿದೆ. ಯುವಕರು ಹೊಡೆದಾಡುತ್ತಾ ಬಾರ್​ನಿಂದ ಹೊರ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.