ಬೆಂಗಳೂರು: ನಗರದಲ್ಲಿ ಕುಡಿದು ವೇಗವಾಗಿ ಗಾಡಿ ಚಲಾಯಿಸುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇದಕ್ಕೆ ತಡೆ ಹಾಕಲು ಸಂಚಾರಿ ಪೊಲೀಸರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈಗ ಕುಡಿದು ಗಾಡಿ ಚಲಾಯಿಸಿದ್ದಕ್ಕೆ ನಾಲ್ವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕುಡಿದ ಅಮಲಿನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಕೋಟೆಯಲ್ಲಿ ನಡೆದರೆ, ಬಸವನಗುಡಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಓರ್ವ ಮೃತಪಟ್ಟಿದ್ದಾನೆ.
ಲವನೀತ್ (23), ರಾಜೇಶ್ (24) ಹಾಗೂ ಹರೀಶ್ (24) ಗೆಳೆಯನ ಮನೆಯಲ್ಲಿ ನಡೆದ ಪಾರ್ಟಿ ಮುಗಿಸಿ ಬರುತ್ತಿದ್ದರು. ಮೂವರು ಸರಿಯಾಗಿ ಕುಡಿದಿದ್ದರು. ರಾಜೇಶ್ ಸ್ಕೂಟಿ ಓಡಿಸುತ್ತಿದ್ದ. ಹೊಸಕೋಟೆ ಟೋಲ್ ಬೂತ್ ವೇಗವಾಗಿ ಬರುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಗೆ ಸ್ಕೂಟಿ ಗುದ್ದಿದೆ. ಹೆಲ್ಮೆಟ್ ಧರಿಸದ ಕಾರಣ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯಡಿಯೂರು ವೃತ್ತದ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ಸ್ಪೋರ್ಟ್ಸ್ ಬೈಕ್ನಲ್ಲಿ ಮೂವರು ಪಾರ್ಟಿ ಮುಗಿಸಿ ಬರುತ್ತಿದ್ದರು. ಈ ವೇಳೆ ಕಾರನ್ನು ಓವರ್ಟೇಕ್ ಮಾಡಲು ಹೋದ ಯುವಕ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಗುದ್ದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಧೀರಜ್ ಮೃತಪಟ್ಟಿದ್ದಾನೆ.
ದೆಹಲಿ ಚಲೋ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ಇಬ್ಬರು ರೈತರು ಅಪಘಾತಕ್ಕೆ ಬಲಿ