ಮೆಗಾ ಲೋಕ್ ಅದಾಲತ್ನಲ್ಲಿ 2.63 ಲಕ್ಷ ಕೇಸ್ ಇತ್ಯರ್ಥ: ದಾಖಲೆ ಬರೆದ ಕರ್ನಾಟಕ
ಜನನ, ಮರಣ ಪ್ರಮಾಣಪತ್ರ ನೋಂದಣಿ, ಹೆಸರು ತಿದ್ದುಪಡಿಗಾಗಿ ಕೋರ್ಟ್ಗೆ ಓಡಾಡುತ್ತಿದ್ದ 30,709 ಜನರ ಕೇಸ್ ಇತ್ಯರ್ಥಪಡಿಸಲಾಗಿದೆ. ಕರ್ನಾಟಕದ ನ್ಯಾಯಾಂಗದ ಈ ಕ್ರಮದಿಂದ ನ್ಯಾಯಾಧೀಶರಿಗೆ 80 ದಿನಗಳ ಕೆಲಸ ಉಳಿತಾಯವಾಗಿದೆ.
ಬೆಂಗಳೂರು: ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕಾರ್ಯದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮಹತ್ವದ ಗುರಿ ಸಾಧಿಸಿದೆ. ಡಿ. 19 ರಂದು ರಾಜ್ಯದಲ್ಲಿ ನಡೆದ ಮೆಗಾ ಲೋಕ್ ಅದಾಲತ್ನಲ್ಲಿ ದಾಖಲೆ ಪ್ರಮಾಣದ ಕೇಸ್ ಇತ್ಯರ್ಥಗೊಳಿಸಲಾಗಿದೆ. ಹೈಕೋರ್ಟ್ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಅರವಿಂದ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೆಗಾ ಲೋಕ್ ಅದಾಲತ್ನಲ್ಲಿ ಒಟ್ಟು 2,63,197 ಕೇಸ್ ಇತ್ಯರ್ಥ ಪಡಿಸಲಾಗಿದ್ದು, ಚೆಕ್ ಬೌನ್ಸ್, ಅಪಘಾತ ಪ್ರಕರಣಗಳು ಸೇರಿದಂತೆ ಸಾರ್ವಜನಿಕರಿಗೆ 669.95 ಕೋಟಿ ರೂಪಾಯಿ ಪರಿಹಾರದ ಹಣ ಸಂದಾಯವಾಗಿದೆ. ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ 3,095 ಆಸ್ತಿ ವಿಭಾಗದ ಕೇಸ್ಗಳನ್ನು ಬಗೆಹರಿಸಲಾಗಿದೆ. 42 ಸಾವಿರ ಅಪರಾಧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಸರ್ಕಾರಕ್ಕೆ 41.45 ಕೋಟಿ ದಂಡ ಪಾವತಿಯಾಗಿದೆ, ಎಂದು ಮಾಹಿತಿ ನೀಡಿದರು.
ಜನನ, ಮರಣ ಪ್ರಮಾಣಪತ್ರ ನೋಂದಣಿ, ಹೆಸರು ತಿದ್ದುಪಡಿಗಾಗಿ ಕೋರ್ಟ್ಗೆ ಓಡಾಡುತ್ತಿದ್ದ 30,709 ಜನರ ಕೇಸ್ ಇತ್ಯರ್ಥಪಡಿಸಲಾಗಿದೆ. ಕರ್ನಾಟಕದ ನ್ಯಾಯಾಂಗದ ಈ ಕ್ರಮದಿಂದ ನ್ಯಾಯಾಧೀಶರಿಗೆ 80 ದಿನಗಳ ಕೆಲಸ ಉಳಿತಾಯವಾಗಿದೆ. ಸರ್ಕಾರಕ್ಕೆ ಅಂದಾಜು 144 ಕೋಟಿ ರೂಪಾಯಿ ಲಾಭವಾದಂತಾಗಿದೆ ಎಂದು ನ್ಯಾ.ಅರವಿಂದ್ ಕುಮಾರ್ ಮಾಹಿತಿ ನೀಡಿದರು.
ಕೋವಿಡ್ ಸಮಯದಲ್ಲೂ ಕಾನೂನು ಸೇವೆಗಳ ಪ್ರಾಧಿಕಾರದ ಮನವಿಗೆ ಸ್ಪಂದಿಸಿ ರಾಜಿ ಸಂಧಾನಕ್ಕೆ ಮುಂದಾದ ಕಕ್ಷಿದಾರರಿಗೆ, ವಕೀಲರಿಗೆ ನ್ಯಾ. ಅರವಿಂದ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಅವಘಡದಲ್ಲಿ ಪತಿ ಕಳೆದುಕೊಂಡ ಸಹನಾ ಎಂಬ ಮಹಿಳೆಗೆ 80 ಲಕ್ಷ ಪರಿಹಾರ ನೀಡಲಾಗಿದೆ ಎಂಬುದು ವಿಶೇಷ.
ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ತವರಿಗೆ ಮರಳಲು ನೆರವಾಗಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
Published On - 7:51 pm, Mon, 21 December 20