ಲೋಕಾಯುಕ್ತ ಪ್ರತ್ಯೇಕ ದಾಳಿ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಪಿಡಿಒ ಅಧಿಕಾರಿಗಳು ವಶಕ್ಕೆ

| Updated By: ವಿವೇಕ ಬಿರಾದಾರ

Updated on: Nov 25, 2022 | 9:14 PM

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಬಸವರಾಜ 6000 ರೂ ಲಂಚ ಪಡೆಯುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಬಂಧಿಸಿದ್ದಾರೆ.

ಲೋಕಾಯುಕ್ತ ಪ್ರತ್ಯೇಕ ದಾಳಿ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಪಿಡಿಒ ಅಧಿಕಾರಿಗಳು ವಶಕ್ಕೆ
ಲೋಕಾಯುಕ್ತ ಕಚೇರಿ
Follow us on

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯತಿಯ (Gram panchayat) ಪಿಡಿಒ (PDO) ಬಸವರಾಜ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಗವಿರಂಗಾಪುರದ ಲೋಕೇಶ್​ರಿಂದ ಪಿಡಿಒ ಬಸವರಾಜ ಮತ್ತು ಕಾರ್ಯದರ್ಶಿ ಜಗದೀಶ್ 6,000 ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ಡಿವೈಎಸ್​ಪಿ ಜಿ.ಮಂಜುನಾಥ್ ನೇತೃತ್ವದ ತಂಡ ದಾಳಿ ಮಾಡಿ, ಬಂಧಿಸಿದ್ದಾರೆ.

ದೇವಿಕೆರೆ ಗ್ರಾ.ಪಂ. ಪಿಡಿಒ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ದಾವಣಗೆರೆ: ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯತಿಯ ಪಿಡಿಒ ಬಸವರಾಜಪ್ಪಇ-ಸ್ವತ್ತು ಮಾಡಿಕೊಡಲು 5,000 ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಪಿಡಿಒ ಬಸವರಾಜಪ್ಪ ದೇವಿಕೆರೆಯ ಶಾಂತಕುಮಾರ್​ರಿಂದ ಲಂಚ ಪುಣೆ-ಬೆಂಗಳೂರು (ಪಿಬಿ) ರಸ್ತೆಯ ದ್ವಾರಕಾ ಹೋಟೆಲ್​ನಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಇನ್ಸ್​ಪೆಕ್ಟರ್​ ಆಂಜನೇಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ