ಕೆಎಂಸಿ ಆಸ್ಪತ್ರೆಯಿಂದ ಮಠಕ್ಕೆ ಪೇಜಾವರ ಶ್ರೀಗಳು ಶಿಫ್ಟ್

|

Updated on: Dec 29, 2019 | 9:17 AM

ಉಡುಪಿ: ಕಳೆದ ಒಂಬತ್ತು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳಿಗೆ ಅವರ ಇಚ್ಚೆಯಂತೆ ಮಠಕ್ಕೆ ಕರೆತರಲಾಗಿದೆ. ವೆಂಟಿಲೇಟರ್ ಮೂಲಕ ಉಸಿರಾಡ್ತಿರುವ 88 ವರ್ಷದ ಶ್ರೀಗಳ ಆರೋಗ್ಯ, ಕಳೆದೆರಡು ದಿನದಿಂದ ಮತ್ತಷ್ಟು ಬಿಗಡಾಯಿಸಿದೆ. ಉಸಿರಾಟ ಮತ್ತು ನ್ಯೂಮೋನಿಯಾ ಸಮಸ್ಯೆಯಿಂದಾಗಿ ಶ್ರೀಗಳು ಗಂಭೀರ ಸ್ಥಿತಿ ತಲುಪಿದ್ರು. ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸದ ಹಿನ್ನೆಲೆಯಲ್ಲಿ, ಶ್ರೀಗಳನ್ನ ಜೀವರಕ್ಷಕ ಸಾಧನಗಳ ಸಮೇತ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. KA 20 AA 5481ರ 9 […]

ಕೆಎಂಸಿ ಆಸ್ಪತ್ರೆಯಿಂದ ಮಠಕ್ಕೆ ಪೇಜಾವರ ಶ್ರೀಗಳು ಶಿಫ್ಟ್
Follow us on

ಉಡುಪಿ: ಕಳೆದ ಒಂಬತ್ತು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳಿಗೆ ಅವರ ಇಚ್ಚೆಯಂತೆ ಮಠಕ್ಕೆ ಕರೆತರಲಾಗಿದೆ. ವೆಂಟಿಲೇಟರ್ ಮೂಲಕ ಉಸಿರಾಡ್ತಿರುವ 88 ವರ್ಷದ ಶ್ರೀಗಳ ಆರೋಗ್ಯ, ಕಳೆದೆರಡು ದಿನದಿಂದ ಮತ್ತಷ್ಟು ಬಿಗಡಾಯಿಸಿದೆ.

ಉಸಿರಾಟ ಮತ್ತು ನ್ಯೂಮೋನಿಯಾ ಸಮಸ್ಯೆಯಿಂದಾಗಿ ಶ್ರೀಗಳು ಗಂಭೀರ ಸ್ಥಿತಿ ತಲುಪಿದ್ರು. ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸದ ಹಿನ್ನೆಲೆಯಲ್ಲಿ, ಶ್ರೀಗಳನ್ನ ಜೀವರಕ್ಷಕ ಸಾಧನಗಳ ಸಮೇತ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. KA 20 AA 5481ರ 9 ಎಂಬ ಸಂಖ್ಯಾ ಶಾಸ್ತ್ರ ದ ನಂಬರ್​ನ ಆಂಬುಲೆನ್ಸ್​ನಲ್ಲಿ ಶ್ರೀಗಳನ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ಪೊಲೀಸರ ಬಿಗಿಭದ್ರತೆಯ ನಡುವೆ ಕರೆತರಲಾಗಿದೆ.

ಶ್ರೀಗಳ ಜೊತೆ ವೈದ್ಯರ ತಂಡ ಸಹ ಬಂದಿದ್ದು, ಮಠದಲ್ಲೇ ಚಿಕಿತ್ಸೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಪೇಜಾವರ ಶ್ರೀಗಳನ್ನ ನೋಡಲು ಭಕ್ತರು ಮಠದ ಹೊರಗೆ ಕಾಯುತ್ತಿದ್ದಾರೆ. ಆದರೆ ಯಾರಿಗೂ ಮಠದ ಒಳಗೆ ಪ್ರವೇಶಿಸದಂತೆ ಭದ್ರತೆಯನ್ನು ಕೈಗೊಳ್ಳಲಾಗಿದೆ.

Published On - 7:36 am, Sun, 29 December 19