AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬುಧಾಬಿಯ ಬಿಗ್ ಟಿಕೆಟ್‌ನಲ್ಲಿ ಕನ್ನಡಿಗರ ಕಮಾಲ್: 200 ಗ್ರಾಂ ಚಿನ್ನ ಗೆದ್ದ ಉಡುಪಿಯ ಅರುಣ್‌, ಬೆಂಗಳೂರಿನ ಷರೀಫ್‌

ಅಬುಧಾಬಿ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಭಾರತೀಯ ಮೂಲದ ನಿವಾಸಿಗಳು ಭಾರಿ ಅದೃಷ್ಟ ಗಳಿಸಿದ್ದಾರೆ. ಅರುಣ್ ಕೃಷ್ಣಪ್ಪ ಕಿಡಿಯೂರು, ಷರೀಫ್ ಸೇರಿ ನಾಲ್ವರು 200 ಗ್ರಾಂ ತೂಕದ 24-ಕ್ಯಾರಟ್ ಚಿನ್ನದ ಬಿಸ್ಕತ್ ಗೆದ್ದಿದ್ದಾರೆ. ಪ್ರತಿ ಬಿಸ್ಕತ್‌ನ ಮೌಲ್ಯ ಸುಮಾರು ₹25.02 ಲಕ್ಷ. ಉಡುಪಿ, ಬೆಂಗಳೂರು, ಕೇರಳ ಮತ್ತು ಶಾರ್ಜಾದ ಭಾರತೀಯರು ಈ ವಿಜಯ ಸಾಧಿಸಿದ್ದಾರೆ. ಕಷ್ಟಪಟ್ಟು ದುಡಿದವರಿಗೆ ಅದೃಷ್ಟ ಒಲಿದಿದೆ ಎಂಬ ಸಂದೇಶವಿದು.

ಅಬುಧಾಬಿಯ ಬಿಗ್ ಟಿಕೆಟ್‌ನಲ್ಲಿ ಕನ್ನಡಿಗರ ಕಮಾಲ್: 200 ಗ್ರಾಂ ಚಿನ್ನ ಗೆದ್ದ ಉಡುಪಿಯ ಅರುಣ್‌, ಬೆಂಗಳೂರಿನ ಷರೀಫ್‌
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Oct 28, 2026 | 12:05 PM

Share

ಬೆಂಗಳೂರು, ಅ.28: ಯುಎಇಯ ಅತ್ಯಂತ ಜನಪ್ರಿಯ ‘ಅಬುಧಾಬಿ ಬಿಗ್ ಟಿಕೆಟ್’ (Big Ticket Abu Dhabi) ಲಕ್ಕಿ ಡ್ರಾದಲ್ಲಿ ಭಾರತೀಯ ಮೂಲದ ನಿವಾಸಿಗಳು ಭಾರಿ ಜಯಗಳಿಸಿದ್ದಾರೆ. ಅಕ್ಟೋಬರ್ ತಿಂಗಳ ಮೂರನೇ ವಾರದ ಇ-ಡ್ರಾದಲ್ಲಿ ಉಡುಪಿ ಮೂಲದ ಅರುಣ್ ಕೃಷ್ಣಪ್ಪ ಕಿಡಿಯೂರು ಹಾಗೂ ಬೆಂಗಳೂರಿನ ಶರೀಫ್ ಸೇರಿದಂತೆ ನಾಲ್ವರು ಭಾರತೀಯರು 200 ಗ್ರಾಂ ತೂಕದ 24-ಕ್ಯಾರಟ್ ಅಪರಂಜಿ ಚಿನ್ನದ ಬಿಸ್ಕತ್ ಗೆದ್ದು ಬೀಗಿದ್ದಾರೆ. ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ, ಗೆದ್ದಿರುವ ಪ್ರತಿಯೊಂದು ಚಿನ್ನದ ಬಿಸ್ಕತ್‌ನ ಮೌಲ್ಯ ಸುಮಾರು 96,500 ಯುಎಇ ದಿರ್ಹಮ್ಸ್ (ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹25.02 ಲಕ್ಷ) ಆಗಿದೆ.

23 ವರ್ಷಗಳಿಂದ ಬಹ್ರೇನ್‌ನಲ್ಲಿರುವ ಉಡುಪಿಯ ಅರುಣ್‌ಗೆ ಒಲಿದ ಅದೃಷ್ಟ:

ಉಡುಪಿ ಮೂಲದ ಅರುಣ್ ಕೃಷ್ಣಪ್ಪ ಕಿಡಿಯೂರು (45) ಅವರು ಕಳೆದ 23 ವರ್ಷಗಳಿಂದ ಬಹ್ರೇನ್‌ನಲ್ಲಿ ವಾಸಿಸುತ್ತಿದ್ದು, ಉದ್ಯೋಗ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ನೇಹಿತರೊಂದಿಗೆ ಸೇರಿ ಬಿಗ್ ಟಿಕೆಟ್ ಖರೀದಿಸುತ್ತಿದ್ದ ಇವರಿಗೆ ನಾಲ್ಕೇ ತಿಂಗಳಲ್ಲಿ ಈ ಭಾರಿ ಮೊತ್ತದ ಅದೃಷ್ಟ ಒಲಿದುಬಂದಿದೆ. “ಆಯೋಜಕರು ಕರೆ ಮಾಡಿ ಚಿನ್ನದ ಬಿಸ್ಕತ್ ಗೆದ್ದಿರುವ ಸುದ್ದಿ ತಿಳಿಸಿದಾಗ ಆಶ್ಚರ್ಯವಾಯಿತು ಮತ್ತು ಅತ್ಯಂತ ಸಂತೋಷವಾಯಿತು. ಈ ಚಿನ್ನವನ್ನು ಏನು ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ನಂಬಿಕೆ ಕಳೆದುಕೊಳ್ಳದೆ ಸತತವಾಗಿ ಪ್ರಯತ್ನಿಸುತ್ತಿರಬೇಕು” ಎಂದು ಅರುಣ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಸಿವಿಲ್ ಇಂಜಿನಿಯರ್ ಷರೀಫ್‌ಗೂ ಭಾರಿ ಜಾಕ್‌ಪಾಟ್:

ಬೆಂಗಳೂರು ಮೂಲದ ಸಿವಿಲ್ ಇಂಜಿನಿಯರ್ ಸಾದತ್‌ಉಲ್ಲಾ ಷರೀಫ್ (51) ಅವರಿಗೂ ಈ ಡ್ರಾದಲ್ಲಿ 200 ಗ್ರಾಂ ಚಿನ್ನ ಒಲಿದಿದೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ದುಬೈಗೆ ಉದ್ಯೋಗಕ್ಕಾಗಿ ತೆರಳಿದ್ದ ಷರೀಫ್, ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ಬಗ್ಗೆ ತಿಳಿದುಕೊಂಡು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಪ್ರಾರಂಭಿಸಿದ್ದರು. ಲಕ್ಕಿ ಡ್ರಾ ಕರೆ ಬಂದಾಗ ಮೊದಲು ಇದನ್ನು ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಟೋಲ್ ಪ್ಲಾಜಾ ಸಮೀಪದ ನಿವಾಸಿಗಳ ಗಮನಕ್ಕೆ: ಬಿಗ್ ರಿಲೀಫ್‌ ನೀಡಿದ ಕೇಂದ್ರ ಸರ್ಕಾರ; ನ.1ರಿಂದ ಬರಲಿದೆ ಹೊಸ ನಿಯಮ

ಚಿನ್ನದ ಲಕ್ಕಿ ಡ್ರಾ ಗೆದ್ದ ಇತರ ಇಬ್ಬರು ಭಾರತೀಯರು:

2007 ರಿಂದ ಶಾರ್ಜಾದಲ್ಲಿ ಗುತ್ತಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೇರಳದ ಜಿಜೋಯ್ ವಿಶ್ವನ್ (51), 5 ರಿಂದ 10 ಜನ ಸ್ನೇಹಿತರೊಂದಿಗೆ ಸೇರಿ ಟಿಕೆಟ್ ಖರೀದಿಸುತ್ತಿದ್ದರು. ಈ ಬಹುಮಾನದ ಮೊತ್ತವನ್ನು ಸ್ನೇಹಿತರೊಂದಿಗೆ ಹಂಚಿಕೊಂಡು, ತಮ್ಮ ಕುಟುಂಬಕ್ಕೆ ಆಸರೆಯಾಗಿ ಉಳಿಸಲು ಯೋಜಿಸಿದ್ದಾರೆ. ಇನ್ನೊಬ್ಬರು ಶಾರ್ಜಾದಲ್ಲಿ ವಾಸಿಸುತ್ತಿರುವ ಫ್ರೀಲಾನ್ಸರ್ ಮನೀಷಾ, ಕಳೆದ 3 ವರ್ಷಗಳಿಂದ ಈ ಟಿಕೆಟ್​​​ ಡ್ರಾದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ಪ್ರತ್ಯೇಕವಾಗಿ ಸ್ವಂತವಾಗಿ ಖರೀದಿಸಿದ ಟಿಕೆಟ್‌ಗೆ ಅದೃಷ್ಟ ಒಲಿದುಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More