ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ

ಹಿಜಾಬ್ ವಿಷಯದಲ್ಲಿ ಯಶಪಾಲ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು. ಈ ರೀತಿಯ ಪೊಟ್ಟು ಬೆದರಿಕೆಗೆ ಯಶಪಾಲ ಸುವರ್ಣ ಬೆದರುವುದಿಲ್ಲ. ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ. ಅವರ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧವಿದ್ದೇವೆ.

ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ
ಸಾಂದರ್ಭಿಕ ಚಿತ್ರ
Edited By:

Updated on: Jun 08, 2022 | 3:08 PM

ಉಡುಪಿ: ಹಿಂದೂ ನಾಯಕ ಯಶಪಾಲ ಸುವರ್ಣಗೆ (Yashpal Suvarna) ಬೆದರಿಕೆ ಬಂದಿರುವ ಹಿನ್ನೆಲೆ ಹಿಂದೂ ಯುವ ಸೇನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ. ಯಶಪಾಲ ತಲೆ ಕಡಿದವರಿಗೆ 10 ಲಕ್ಷ ಎಂದು ಇನ್ಸ್ಟಾಗ್ರಾಂ ಪೇಜ್ (Instagram Page) ಮೂಲಕ ಬೆದರಿಕೆ ಹಾಕಿದ್ದಾರೆ. ಯಶಪಾಲ ಸುವರ್ಣ ಜೊತೆ ಪ್ರಮೋದ್ ಮುತಾಲಿಕ್ಗೂ ಬೆದರಿಕೆ ಹಾಕಿದ್ದು, ಸೂಕ್ತ ಕ್ರಮ ಜರಗಿಸುವಂತೆ ಹಿಂದೂ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಯುವಸೇನೆ ಮುಖಂಡ ಮಂಜು ಕೊಳ, ಯಶಪಾಲ ಸುವರ್ಣ ಬಾಲ್ಯದಿಂದಲೇ ಹಿಂದುತ್ವಕ್ಕಾಗಿ ಹೋರಾಡಿದವರು. ಇದು ಯಶಪಾಲ ಸುವರ್ಣಗೆ ಹಾಕಿದ ಬೆದರಿಕೆಯಲ್ಲ. ಹಿಂದೂ ಸಮಾಜಕ್ಕೆ ಹಾಕಿರುವ ಬೆದರಿಕೆ ಎಂದು ಭಾವಿಸುತ್ತೇವೆ. ಅಷ್ಟು ಸುಲಭವಾಗಿ ಈ ವಿಚಾರ ಕೈಬಿಡಲು ಸಾಧ್ಯವಿಲ್ಲ. ಇಂತಹ ಬೆದರಿಕೆಯಿಂದ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಧಕ್ಕೆ ಆಗುತ್ತೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಜಾಲತಾಣ ಮೂಲಕ ಬೆದರಿಕೆ ಹಾಕಿದವರು ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ ಎಂದು ತಿಳಿಸಿದರು.

ಹಿಜಾಬ್ ವಿಷಯದಲ್ಲಿ ಯಶಪಾಲ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು. ಈ ರೀತಿಯ ಪೊಟ್ಟು ಬೆದರಿಕೆಗೆ ಯಶಪಾಲ ಸುವರ್ಣ ಬೆದರುವುದಿಲ್ಲ. ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ. ಅವರ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧವಿದ್ದೇವೆ. ಹಿಂದೂ ಸಮಾಜದ ಕೆಲಸವನ್ನು ಮತ್ತಷ್ಟು ಮುಂಚೂಣಿಯಲ್ಲಿ ನಿಂತು ಮಾಡುತ್ತಾರೆ ಎಂದು ಯುವಸೇನೆ ಮುಖಂಡ ಮಂಜು ಕೊಳ ಹೇಳಿದರು.

ಇದನ್ನೂ ಓದಿ
Political Analysis: ನೂಪುರ್ ಶರ್ಮಾ ಅಮಾನತು: ಬಿಜೆಪಿಯಲ್ಲಿ ಪರ-ವಿರೋಧ ಹೊಯ್ದಾಟ, ಆರ್​ಎಸ್​ಎಸ್​ ಮೌನಕ್ಕೆ ಹಲವು ಅರ್ಥ
ನನ್ನನ್ನು ಮುಂದಿನ ಮುಖ್ಯಮಂತ್ರಿಯೆಂದು ಹೇಳುತ್ತಿರುವುದು ಸರಿಯಲ್ಲ: ಬಿವೈ ವಿಜಯೇಂದ್ರ
Mithali Raj: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್
Avyan Meaning: ನಿಖಿಲ್ ಕುಮಾರ್ ಮಗ ಅವ್ಯಾನ್ ಹೆಸರಿನ ಅರ್ಥವೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: ದೇವೇಗೌಡರ ಮರಿ ಮೊಮ್ಮೊಗನ ನಾಮಕರಣ ಶಾಸ್ತ್ರ: ಹೇಗಿದ್ದಾನೆ ನೋಡಿ ನಿಖಿಲ್ ಕುಮಾರ್ ಮಗ

ಇನ್ನು ಟಿವಿ9ಗೆ ಹೇಳಿಕೆ ನೀಡಿದ ಯಶಪಾಲ ಸುವರ್ಣ, ನನ್ನ ಬೆಲೆ ಎಷ್ಟು ಎಂದು ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. 10 ಲಕ್ಷ ಅಲ್ಲ 1 ಕೋಟಿ ಬೆಲೆ ಕಟ್ಟಿದರು ಹೆದರುವುದಿಲ್ಲ. ಇಂತಹ ಟೀಕೆಗಳಿಂದ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ. ಹಿಂದುತ್ವದ ಸಿದ್ಧಾಂತದಲ್ಲಿ ಯಾವುದೇ ರಾಜಿಯೇ ಇಲ್ಲ. ರಾಷ್ಟ್ರೀಯತೆಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. 20 ವರ್ಷಗಳಿಂದ ಸಂಘಟನಾತ್ಮಕವಾಗಿ ಕೆಲಸ ಮಾಡ್ತಿದ್ದೇನೆ. ಹಿಂದೂಗಳಿಗೆ ಅನ್ಯಾಯವಾದಾಗ ನಾನು ಎದ್ದು ನಿಂತಿದ್ದೇನೆ. ಬೆದರಿಕೆ ಹಾಕಿದವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಜಾಬ್ ಸಂಘರ್ಷ ಶುರುವಾದಾಗಿನಿಂದ ಹೋರಾಡಿದ್ದೇನೆ. ನಾನು ಹಿಂದೆ ಸರಿಯಬಹುದು ಎಂದು ಭಾವಿಸಿದರೆ ತಪ್ಪು ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡ

Published On - 3:06 pm, Wed, 8 June 22