Avyan Meaning: ನಿಖಿಲ್ ಕುಮಾರ್ ಮಗ ಅವ್ಯಾನ್ ಹೆಸರಿನ ಅರ್ಥವೇನು? ಇಲ್ಲಿದೆ ಉತ್ತರ

ಇಂದು (ಜೂನ್ 8) ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನಡೆದಿದೆ.

Avyan Meaning: ನಿಖಿಲ್ ಕುಮಾರ್ ಮಗ ಅವ್ಯಾನ್ ಹೆಸರಿನ ಅರ್ಥವೇನು? ಇಲ್ಲಿದೆ ಉತ್ತರ
ನಿಖಿಲ್-ಅವ್ಯಾನ್-ರೇವತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 08, 2022 | 2:33 PM

ಯಾವುದೇ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಹೆಸರಿಟ್ಟಾಗ ಆ ಹೆಸರಿನ ಅರ್ಥವೇನು ಎನ್ನುವುದನ್ನು ಫ್ಯಾನ್ಸ್ ಹುಡುಕುತ್ತಾರೆ. ಸೆಲೆಬ್ರಿಟಿಗಳೂ ಅಷ್ಟೇ ಪ್ರಚಲಿತದಲ್ಲಿರುವ ಹೆಸರನ್ನು ಮಕ್ಕಳಿಗೆ ಇಡಲು ಬಯಸುವುದಿಲ್ಲ. ಯಾರೂ ಕೇಳದೇ ಇರುವ ಹೆಸರನ್ನು ಹುಡುಕಿ ಇಡುತ್ತಾರೆ. ಹೀಗಾಗಿ, ಈ ಸಂದರ್ಭದಲ್ಲಿ ಫ್ಯಾನ್ಸ್ ಆ ಶಬ್ದ ಅರ್ಥವೇನು ಎಂಬುದಕ್ಕೆ ಹುಡುಕಾಡುತ್ತಾರೆ. ಯಶ್ (Yash) ಹಾಗೂ ರಾಧಿಕಾ ಪಂಡಿತ್ ಮಗಳಿಗೆ ಆಯ್ರಾ (Ayra) ಎಂದು ಹೆಸರಿಟ್ಟಾಗ ಜನರು ಗೂಗಲ್​ನಲ್ಲಿ ಆ ಹೆಸರಿನ ಅರ್ಥ ಹುಡುಕಿದ್ದರು. ಈಗ ನಿಖಿಲ್ ಕುಮಾರ್ ಹಾಗೂ ರೇವತಿ ಮಗುವಿನ ಸರದಿ. ಇಂದು (ಜೂನ್​ 8) ನಿಖಿಲ್ ಮಗನಿಗೆ ಅವ್ಯಾನ್ ದೇವ್ (Avyan Dev) ಎಂದು ನಾಮಕರಣ ಮಾಡಲಾಗಿದೆ. ಇದರ ಅರ್ಥಕ್ಕಾಗಿ ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.

ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ 2021ರ ಸೆಪ್ಟೆಂಬರ್ 24ರಂದು ಗಂಡು ಮಗು ಜನಿಸಿತು. ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಈ ಬಗ್ಗೆ ಸಂತಸ ಹೊರಹಾಕಿದ್ದರು. ಇಂದು (ಜೂನ್ 8) ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಬಹುತೇಕ ಕುಟುಂಬಸ್ಥರು ಭಾಗಿಯಾಗಿದ್ದರು. ನಿಖಿನ್ ಪುತ್ರನಿಗೆ ಅವ್ಯಾನ್​​ ದೇವ್ ಎಂದು ಹೆಸರಿಡಲಾಗಿದೆ.

ಸಂಸ್ಕೃತ ಪಂಡಿತರ ಪ್ರಕಾರ ಅವ್ಯಾನ್ ಎಂಬುದು ದೇವರ ಹೆಸರು. ಯಾವುದೇ ದೇವರನ್ನು ಬೇಕಿದ್ದರೂ ಅವ್ಯಾನ್ ಹೆಸರಿನಿಂದ ಕರೆಯಬಹುದು. ಇದಕ್ಕೆ ಒಂದು ಮುಖ್ಯವಾದ ಅರ್ಥವಿದೆ. ಅವ್ಯಾನ್ ಎಂದರೆ ಖರ್ಚಾಗದೆ ಇರುವವನು ಅಥವಾ ನಾಶ ಇಲ್ಲದವನು ಎಂದರ್ಥ. ಮಗನಿಗೆ ಭಿನ್ನ ಹೆಸರು ಹಾಗೂ ಅರ್ಥ ಗರ್ಭಿತ ಹೆಸರನ್ನೇ ನಿಖಿಲ್ ಆಯ್ಕೆ ಮಾಡಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ
Image
‘ಆಚಾರ್ಯ’ ಸಿನಿಮಾ ವಿತರಕರ ನಷ್ಟ ಭರಿಸಲು ಸಂಭಾವನೆಯನ್ನೇ ಹಿಂದಿರುಗಿಸಿದ ನಟ ಚಿರಂಜೀವಿ
Image
Kangana Ranaut: ನೂಪುರ್​ ಶರ್ಮಾಗೆ ಬೆಂಬಲ ನೀಡಿದ ಕಂಗನಾ; ‘ಧಾಕಡ್​’ ನಟಿ ಹೇಳಿದ್ದೇನು?
Image
Avyaan Dev: ದೇವೇಗೌಡರ ಕುಟುಂಬದ ಕುಡಿಗೆ ನಾಮಕರಣ; ನಿಖಿಲ್​- ರೇವತಿ ಪುತ್ರನ ಹೆಸರು ಇಲ್ಲಿದೆ ನೋಡಿ
Image
Priyamani: ‘ಜವಾನ್, ಮೈದಾನ್, ಸೈನೈಡ್..’; ಪ್ರಿಯಾಮಣಿ ಬತ್ತಳಿಕೆಯಲ್ಲಿವೆ ವಿವಿಧ ಭಾಷೆಗಳ 8ಕ್ಕೂ ಹೆಚ್ಚು ಚಿತ್ರಗಳು

ಇದನ್ನೂ ಓದಿ: Avyaan Dev: ದೇವೇಗೌಡರ ಕುಟುಂಬದ ಕುಡಿಗೆ ನಾಮಕರಣ; ನಿಖಿಲ್​- ರೇವತಿ ಪುತ್ರನ ಹೆಸರು ಇಲ್ಲಿದೆ ನೋಡಿ

2020ರ ಏಪ್ರಿಲ್​ 17ರಂದು ನಿಖಿಲ್ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಹೆಚ್​ಡಿಕೆ ತೋಟದ ಮನೆಯಲ್ಲಿ ನಿಖಿಲ್ ಮದುವೆ ನಡೆದಿತ್ತು..2021ರ ಸೆಪ್ಟೆಂಬರ್ 24ರಂದು ಈ ದಂಪತಿ ಪುತ್ರನನ್ನು ಬರಮಾಡಿಕೊಂಡಿದ್ದರು.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Published On - 2:33 pm, Wed, 8 June 22

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್