- Kannada News Photo gallery Actress Priyamani have more than 8 films in pipeline see actress new photos here
Priyamani: ‘ಜವಾನ್, ಮೈದಾನ್, ಸೈನೈಡ್..’; ಪ್ರಿಯಾಮಣಿ ಬತ್ತಳಿಕೆಯಲ್ಲಿವೆ ವಿವಿಧ ಭಾಷೆಗಳ 8ಕ್ಕೂ ಹೆಚ್ಚು ಚಿತ್ರಗಳು
priyamani: ಕನ್ನಡ ಮೂಲದ ನಟಿ ಪ್ರಿಯಾಮಣಿ ಸದ್ಯ ಬಹುಭಾಷಾ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬತ್ತಳಿಕೆಯಲ್ಲಿ ಪ್ರಸ್ತುತ 8ಕ್ಕೂ ಹೆಚ್ಚು ಸಿನಿಮಾಗಳಿವೆ. ವೆಬ್ ಸೀರೀಸ್ಗಳನ್ನೂ ನಟಿ ಸಕ್ರಿಯರಾಗಿದ್ದಾರೆ. ನಟಿಯ ಫೋಟೋಗಳು ಇಲ್ಲಿವೆ.
Updated on:Jun 08, 2022 | 10:35 AM

ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಮಣಿ ಪ್ರಸ್ತುತ ಭಾರತದ ಹಲವು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಅವರು ಸದ್ಯ ಓಟಿಟಿ ಕ್ಷೇತ್ರದಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.

ಪ್ರಸ್ತುತ ಪ್ರಿಯಾಮಣಿ ಬತ್ತಳಿಕೆಯಲ್ಲಿ 8ಕ್ಕೂ ಅಧಿಕ ಚಿತ್ರಗಳಿವೆ. ಅವುಗಳಲ್ಲಿ 3 ಕನ್ನಡ ಚಿತ್ರಗಳಾಗಿವೆ. ‘ಸೈನೈಡ್’, ‘ಡಾ.56’ ಹಾಗೂ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಟ್ರೇಲರ್ ರಿಲೀಸ್ ಆಗಿತ್ತು. ನಿರೀಕ್ಷೆ ಹುಟ್ಟಿಸಿರುವ ಆ ಚಿತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂದಿಯ ‘ಮೈದಾನ್’ ಚಿತ್ರದಲ್ಲೂ ನಟಿ ಬಣ್ಣಹಚ್ಚುತ್ತಿದ್ದಾರೆ. ಅಜಯ್ ದೇವಗನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಿಯಾಮಣಿ ನಟಿಸುತ್ತಿರುವ ‘ಸೈನೈಡ್’ ಚಿತ್ರ ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ.

ತಮಿಳಿನ ‘ಕೊಟೇಶನ್ ಗ್ಯಾಂಗ್’ ಚಿತ್ರದಲ್ಲೂ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಶಾರುಖ್ ಖಾನ್ ನಟನೆಯ ‘ಜವಾನ್‘ ಟೀಸರ್ ರಿಲೀಸ್ ಆಗಿತ್ತು. ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರುವ ಆ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೀರೀಸ್ಗಳಲ್ಲೂ ಪ್ರಿಯಾಮಣಿ ಸಕ್ರಿಯರಾಗಿದ್ದಾರೆ. ಪ್ರಖ್ಯಾತ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯ ಮೂರನೇ ಸೀಸನ್ ತಯಾರಾಗುತ್ತಿದೆ. ಅದರಲ್ಲೂ ನಟಿ ಅಭಿನಯಿಸುತ್ತಿದ್ದಾರೆ ಎಂದಿವೆ ವರದಿಗಳು.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಿಯಾಮಣಿ, ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದಾರೆ.
Published On - 10:30 am, Wed, 8 June 22



















