Udupi News: ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್ ಕ್ರೈಂ; ವರ್ಷದಲ್ಲಿ 60ಕ್ಕೂ ಅಧಿಕ ಜನರ ಅಕೌಂಟಿನಿಂದ ಹಣ ಕಣ್ಮರೆ

|

Updated on: Jun 04, 2023 | 9:43 AM

ನಿಮ್ಮ ಮೊಬೈಲ್​ನಲ್ಲಿ ನಿಮಗೊಂದು ಅನಾಮಿಕ ಕರೆ ಬರುತ್ತೆ, ಅಥವಾ ಯಾವುದೋ ಭರ್ಜರಿ ಆಫರ್​ನ ನೋಟಿಫಿಕೇಶನ್ ಬರುತ್ತೆ. ನೀವು ಹಿಂದೆ ಮುಂದೆ ಯೋಚಿಸದೆ ಆ ಆಫರ್ ಅಥವಾ ಆ ಸಂಖ್ಯೆಗೆ ನಿಮ್ಮ ಹಣ ವರ್ಗಾವಣೆ ಮಾಡುತ್ತೀರಿ, ಭರ್ಜರಿ ಆಫರ್ ನಿರೀಕ್ಷೆಯಲ್ಲಿ ನೀವು ಕಳಿಸಿದ ಹಣ ನಿಮ್ಮ ಅಕೌಂಟ್ ನಿಂದ ಕಣ್ಮರೆಯಾಗುತ್ತದೆ. ಏನಿದು ವಿಚಾರ ಅಂತೀರಾ ಈ ಸ್ಟೋರಿ ನೋಡಿ.

Udupi News: ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್ ಕ್ರೈಂ; ವರ್ಷದಲ್ಲಿ 60ಕ್ಕೂ ಅಧಿಕ ಜನರ ಅಕೌಂಟಿನಿಂದ ಹಣ ಕಣ್ಮರೆ
ಉಡುಪಿ
Follow us on

ಉಡುಪಿ: ಜಿಲ್ಲೆಯಲ್ಲಿ ಸುಮಾರು 60ಕ್ಕೂ ಅಧಿಕ ಜನರ ಅಕೌಂಟಿನಿಂದ ಹಣ ಕಣ್ಮರೆಯಾಗಿದ್ದು. ರಾಜ್ಯದಲ್ಲಿಯೇ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ(udupi)ಜಿಲ್ಲೆಯಲ್ಲಿ ಇಂದಿಗೂ ಕೂಡ ಇಂತಹ ಸೈಬರ್ ಕ್ರೈಂ(Cyber Crime)ಗಳು ದಿನ ನಿತ್ಯವೂ ನಡೆಯುತ್ತಿದೆ. ಹಾಗಂತ ಅವಿದ್ಯಾವಂತರು ಈ ಪ್ರಕರಣದ ವ್ಯಕ್ತಿಗಳಲ್ಲ, ಬಹುತೇಕ ವಿದ್ಯಾವಂತರೆ ಇಂತಹ ಪ್ರಕರಣಗಲ್ಲಿ ಬಲಿಯಾಗುತ್ತಿರುವುದು ಶೋಚನೀಯ. ಉಡುಪಿ ಪೊಲೀಸ್ ಇಲಾಖೆ ನಿರಂತರವಾಗಿ ಸೈಬರ್ ಕ್ರೈಂ ವಿಚಾರದಲ್ಲಿ ಅಗತ್ಯ ಕ್ರಮಗಳ ಜೊತೆಗೆ ಮುನ್ನೆಚ್ಚರಿಕೆ ಮೂಡಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಆದರೂ ಕಳೆದ ಒಂದು ವರ್ಷದಲ್ಲಿ ಸುಮಾರು 60ಕ್ಕೂ ಅಧಿಕ ಸೈಬರ್ ಕ್ರೈಂ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬಹುತೇಕ ಬ್ಯಾಂಕ್​ಗಳು ಫೋನ್ ಮೂಲಕ ಓಟಿಪಿ ಮತ್ತು ಪಾಸ್ವರ್ಡ್​ಗಳ ಜೊತೆಗೆ ಅಕೌಂಟ್ ನಂಬರ್ ಮಾಹಿತಿ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಬಹುತೇಕ ವಿದ್ಯಾವಂತರೆ, ಹಣ ಉಳಿಸುವ ಅಥವಾ ಅಧಿಕ ಹಣ ಗಳಿಸುವ ಶಾರ್ಟ್ ಕಟ್ ತೆಗೆದುಕೊಳ್ಳುವ ಭರದಲ್ಲಿ ಇಂತಹ ಸೈಬರ್ ಕ್ರೈಂ ಪ್ರಕರಣಗಳಲ್ಲಿ ವಿಕ್ಟಿಂ ಆಗಿರುವುದು ಪೊಲೀಸ್ ಇಲಾಖೆಯ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ‘ನಿಮ್ಮ ಅಕೌಂಟ್ ನಂಬರ್, ಪಾಸ್ವರ್ಡ್, ಓಟಿಪಿಗಳನ್ನು ಯಾರಿಗೂ ನೀಡದಂತೆ ಮನವಿ ಮಾಡುತ್ತಲೇ ಇದೆ. ಅಲ್ಲದೆ ಪದೆ ಪದೇ ಎಟಿಎಂ ಕಾರ್ಡ್ ಮತ್ತು ಇನ್ನಿತರ ಹಣ ವರ್ಗಾಯಿಸುವ ವ್ಯವಸ್ಥೆಯ ಪಾಸ್ವರ್ಡ್ ಬದಲಾಯಿಸಬೇಕು. ಜೊತೆಗೆ ಅಗತ್ಯ ಬಿದ್ದಲ್ಲಿ, ಅನುಮಾನಸ್ಪದವಾಗಿದ್ದಲ್ಲಿ ಪೊಲೀಸ್ ಇಲಾಖೆ ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದೆ.

ಇದನ್ನೂ ಓದಿ:ಸೋದರಿಯರ ಮದುವೆ ಸಾಲ ತೀರಿಸಲು ಶಾಲೆಯ ಹಣ ಬಳಸಿಕೊಂಡ ಮುಖ್ಯ ಶಿಕ್ಷಕ; 36 ಲಕ್ಷ ರೂ ಲೂಟಿ, ಸೈಬರ್ ಕ್ರೈಂ ಠಾಣೆಗೆ ದೂರು

ಇಂತಹ ಪ್ರಕರಣಗಳು ನಡೆದ ತಕ್ಷಣ ಗೋಲ್ಡನ್ ಅವರ್ ಬಳಸಿ ಹಣವನ್ನ ಮರುಪಾವತಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನ ಬಳಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಒಟ್ಟಾರೆಯಾಗಿ ಉಡುಪಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯನ್ನು ಕೂಡ ಸೈಬರ್ ಕ್ರೈಂ ಸಂಬಂಧಿತ ಪ್ರಕರಣಗಳನ್ನು ದಾಖಲು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇಲಾಖೆ ಪದೇ ಪದೇ ಸೈಬರ್ ಕ್ರೈಂ ವಿಚಾರದಲ್ಲಿ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎನ್ನುವ ಮನವಿಯನ್ನ ಮಾಡುತ್ತಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ