ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಮುಸ್ಲಿಂ ಸಮುದಾಯಕ್ಕೆ ಉಡುಪಿ ಖಾಜಿ ಕಿವಿಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 2:45 PM

‘ಪೋಷಕರು ತಮ್ಮ ಮಕ್ಕಳ ಪರೀಕ್ಷೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೂಕ್ಷ್ಮ ವಿಷಯಗಳನ್ನು ದೀರ್ಘ ದೃಷ್ಟಿಯಿಂದ ನೋಡಬೇಕು’ ಎಂದು ಮನವಿ ಮಾಡಿದರು.

ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಮುಸ್ಲಿಂ ಸಮುದಾಯಕ್ಕೆ ಉಡುಪಿ ಖಾಜಿ ಕಿವಿಮಾತು
ಖಾಜಿ ಅಬ್ದುಲ್ ಹಮೀದ್ ಮುಸಲಿಯಾರ್ ಮಾಣಿ
Follow us on

ಉಡುಪಿ: ಕರ್ನಾಟಕದಲ್ಲಿ ಸೋಮವಾರದಿಂದ (ಮಾರ್ಚ್ 28) ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಲಿದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕಿಂತಲೂ ಧರ್ಮವೇ ಮುಖ್ಯ ಎಂಬರ್ಥದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಉಡುಪಿಯ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಅಬ್ದುಲ್ ಹಮೀದ್ ಮುಸಲಿಯಾರ್ ಮಾಣಿ, ‘ಪೋಷಕರು ತಮ್ಮ ಮಕ್ಕಳ ಪರೀಕ್ಷೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೂಕ್ಷ್ಮ ವಿಷಯಗಳನ್ನು ದೀರ್ಘ ದೃಷ್ಟಿಯಿಂದ ನೋಡಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ನಮ್ಮಿಂದ ಧಕ್ಕೆ ಆಗಬಾರದು’ ಎಂದು ಮನವಿ ಮಾಡಿದರು.

ಸಮವಸ್ತ್ರದ ಜತೆಗೆ ಹಿಜಾಬ್​ ವಿಚಾರವೂ ಇದೀಗ ಸುಪ್ರೀಂಕೋರ್ಟ್​ನಲ್ಲಿದೆ. ಸುಪ್ರೀಂಕೋರ್ಟ್​ನಲ್ಲಿ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸವಿದೆ. ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು. ಭಾರತ ಒಂದು ಜಾತ್ಯತೀತ ರಾಷ್ಟ್ರ. ಸಂವಿಧಾನವು ಅವರವರ ಧರ್ಮ ಆಚರಣೆಗೆ ಅವಕಾಶ ನೀಡಿದೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುವ ತಪ್ಪು ಮಾಹಿತಿಗಳು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ ಎಂದು ನುಡಿದರು.

ಪರೀಕ್ಷೆಗೆ ತಪ್ಪಿಸಿಕೊಳ್ಳಬೇಡಿ: ವಿದ್ಯಾರ್ಥಿನಿಯರಿಗೆ ಉಲೆಮಾ ಕರೆ

ಮಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ತಪ್ಪದೆ ಪರೀಕ್ಷೆಗೆ ಹಾಜರಾಗಬೇಕು ಎಂದು ಮುಸ್ಲಿಂ ಧರ್ಮಗುರು, ಉಲೆಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಾಪುರಂ ಕರೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಸುಪ್ರಿಂಕೋರ್ಟ್​ನಲ್ಲಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲಿಯವರೆಗೆ ಕಾಯುವುದರ ಜೊತೆಗೆ ಪರೀಕ್ಷೆಯೂ ಮುಖ್ಯ. ಎಲ್ಲರೂ ಗರಿಷ್ಠ ಅನುಕೂಲಗಳನ್ನು ಬಳಸಿ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.

ಟಿಪ್ಪು ಕಥನ ಇರಬೇಕು: ಯು.ಟಿ.ಖಾದರ್

ಇತಿಹಾಸ ಪಠ್ಯಗಳಲ್ಲಿ ಟಿಪ್ಪು ಕಥನ ಕೈಬಿಡುವುದು ತಪ್ಪು. ಇಂಗ್ಲೆಂಡ್, ಫ್ರಾನ್ಸ್ ಮ್ಯೂಸಿಯಂಗಳಲ್ಲಿಯೂ ಟಿಪ್ಪು ಅವರ ಇತಿಹಾಸದ ಕುರುಹುಗಳಿವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಜೊತೆ ಹೋರಾಡಿದ್ದವರು ಟಿಪ್ಪುಸುಲ್ತಾನ್. ಕರ್ನಾಟಕದ ವಿವಿಧೆಡೆಯೂ ಟಿಪ್ಪು ಹೋರಾಟದ ಕಥೆಗಳಿವೆ. ಬೆಂಗಳೂರಿನ ನಂದಿಬೆಟ್ಟ, ಮಂಗಳೂರಿನ ಸುಲ್ತಾನ್ ಬತೇರಿ ಸೇರಿದಂತೆ ರಾಜ್ಯಾದ್ಯಂತ ಟಿಪ್ಪು ಸಾಧನೆಯ ಚಿತ್ರಣವಿದೆ. ಶೃಂಗೇರಿ ದೇವಸ್ಥಾನದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಪೂಜೆ ನಡೆಯುತ್ತದೆ. ಇದನ್ನು ತೆಗೆಯಲು ಸಾಧ್ಯವಿಲ್ಲ. ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದರೆ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಭಾರತ ದೇಶದ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ ಬಗ್ಗೆ ಇತಿಹಾಸ ಕಲಿಕೆಯಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸಿಕೊಂಡು ಬಂದರೆ ಎಕ್ಸಾಂಗೆ ಅವಕಾಶ ಇಲ್ಲ

ಇದನ್ನೂ ಓದಿ: ಹಿಜಾಬ್, ವ್ಯಾಪಾರ ನಿಷೇಧ ಬೆನ್ನಲ್ಲೇ ಈಗ ಟಿಪ್ಪು ಪಠ್ಯ ಸರದಿ; ಶಿಕ್ಷಣ ಇಲಾಖೆಗೆ ಶುರುವಾಯ್ತು ಮತ್ತೊಂದು ಟೆನ್ಷನ್

Published On - 1:54 pm, Sun, 27 March 22