ಉಡುಪಿ: ಸುಳ್ಳು ದಾಖಲೆ ನೀಡಿ 4 ಮಕ್ಕಳ ತಂದೆ ಒಬ್ಬ 2ನೇ ಮದುವೆಗೆ ಮುಂದಾದ ಘಟನೆ ಉಡುಪಿಯಲ್ಲಿ ನಡೆದಿದೆ. ಯುವತಿ ಜತೆ ವಿವಾಹಕ್ಕೆ ಅನ್ಯಧರ್ಮೀಯ ಯುವಕ ಮುಂದಾಗಿದ್ದಾನೆ. ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಯುವಕ ಸಿದ್ಧತೆ ಮಾಡಿಕೊಂಡಿದ್ದಾನೆ. ಉಡುಪಿಯ ಮಧ್ವನಗರದ ನಿವಾಸಿಯಾಗಿರುವ ಮಹಿಳೆಯನ್ನು ವರಿಸಲು ಸುಳ್ಳು ದಾಖಲೆ ನೀಡಿ ತಯಾರಾಗಿದ್ದ.
ಯುವಕ ದಕ್ಷಿಣ ಕನ್ನಡ ಜಿಲ್ಲೆಯ ವಿಳಾಸದಲ್ಲಿ ಅವಿವಾಹಿತನೆಂದು ಅರ್ಜಿ ಸಲ್ಲಿಕೆ ಮಾಡಿದ್ದ. 2002ರಲ್ಲಿ ಯುವಕ ಮೊದಲ ಮಡದಿಯನ್ನು ಮದುವೆಯಾಗಿದ್ದ. ಆದರೆ, ಕೊರೊನಾ ಸೋಂಕಿಗೆ ಮೊದಲ ಪತ್ನಿ ಬಲಿಯಾಗಿದ್ದರು. 18 ವರ್ಷದ ಪುತ್ರಿ, 16 ವರ್ಷದ ಮಗ, ಎರಡೂವರೆ ವರ್ಷದ ಅವಳಿ ಮಕ್ಕಳು ಇರುವ ತಂದೆ ಈಗ, ತನ್ನ 4 ಮಕ್ಕಳನ್ನು ಬಿಟ್ಟು ಅಜ್ಜಿ ಮನೆಯಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ.
ತನ್ನ ಸಮುದಾಯದ ಮುಖಂಡರ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ. ಇತರೆ ಮುಖಂಡರು, ಮಕ್ಕಳ ಮನವಿಗೂ ಕೇರ್ಲೆಸ್ ಎನ್ನುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದೀಗ, ಮುಖಂಡರು ಹಾಗೂ ಮಕ್ಕಳು ಸಬ್ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮದುವೆ ಅರ್ಜಿ ತಿರಸ್ಕರಿಸುವಂತೆ ವಿವಾಹ ನೋಂದಣಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ: ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್
ಇದನ್ನೂ ಓದಿ: ಉಪ್ಪಿನಂಗಡಿ: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡಿಸಿ ಪಿಎಫ್‌ಐ ಕಚೇರಿಯಿಂದ ಎಸ್ಪಿ ಕಚೇರಿಗೆ ಮೆರವಣಿಗೆ