ಹಾಸನದಲ್ಲಿ NCC ವಾರ್ಷಿಕೋತ್ಸವ ಸಂಭ್ರಮ, ಉಡುಪಿಯಲ್ಲಿ ಜಬರ್ದಸ್ತ್ ಸ್ಪೋರ್ಟ್ಸ್ ಡೇ ಸೆಲೆಬ್ರೇಷನ್

|

Updated on: Feb 06, 2020 | 8:01 AM

ಹಾಸನ:ಕಾಲೇಜ್​ಗೆ ಹೋಗೋದು. ಶಿಸ್ತಾಗಿ ಕುಂತು ಪಾಠ ಕೇಳೋದು. ತಲೆಗತ್ತಿಲ್ಲ ಅಂದ್ರೆ ಟ್ಯೂಷನ್​ಗೆ ಹೋಗಿ ಅಲ್ಲೂ ಪ್ರ್ಯಾಕ್ಟೀಸ್ ಮಾಡಿ ಎಕ್ಸಾಂ ಬರಿಯೋದು. ಬಟ್ ಅದೇ ಸ್ಟೂಡೆಂಟ್ಸ್​ಗೆ ಸ್ವಲ್ಪ ಮಸ್ತಿಯೂ ಬೇಕಲ್ವ. ಇದೇ ನಿಟ್ಟಿನಲ್ಲೇ ನಡೆದಿದ್ದು ಈ ಮಸ್ತಿ ಗೇಮ್ಸ್. ಖಾಲಿ ಚೀಲದಲ್ಲಿ ಕಾಲಿಟ್ಟು ಓಡೋಕೆ ಸರ್ಕಸ್. ಕಣ್ಣಿಗೆ ಬಟ್ಟೆ ಕಟ್ಕೊಂಡು ಗುರಿ ಮುಟ್ಟೋಕೆ ಹರಸಾಹಸ. ಹಗ್ಗಾಜಗ್ಗಾಟದಲ್ಲೂ ಕಸರತ್ತು. ಕಬ್ಬಡ್ಡಿ ಆಟದಲ್ಲೂ ತಾಕತ್ತು. ಟೋಟಲಿ ಹೇಳ್ಬೇಕಂದ್ರೆ ಕೆಲವ್ರು ಆಡೋದ್ರಲ್ಲಿ ಬ್ಯುಸಿಯಾಗಿದ್ರೆ ಇನ್ನೂ ಕೆಲವ್ರೂ ನೋಡೋದ್ರಲ್ಲೇ ಫುಲ್ ಮಜಾ ತಗೊಳ್ತಿದ್ರು. ಯಲಗುಂದ […]

ಹಾಸನದಲ್ಲಿ NCC ವಾರ್ಷಿಕೋತ್ಸವ ಸಂಭ್ರಮ, ಉಡುಪಿಯಲ್ಲಿ ಜಬರ್ದಸ್ತ್ ಸ್ಪೋರ್ಟ್ಸ್ ಡೇ ಸೆಲೆಬ್ರೇಷನ್
Follow us on

ಹಾಸನ:ಕಾಲೇಜ್​ಗೆ ಹೋಗೋದು. ಶಿಸ್ತಾಗಿ ಕುಂತು ಪಾಠ ಕೇಳೋದು. ತಲೆಗತ್ತಿಲ್ಲ ಅಂದ್ರೆ ಟ್ಯೂಷನ್​ಗೆ ಹೋಗಿ ಅಲ್ಲೂ ಪ್ರ್ಯಾಕ್ಟೀಸ್ ಮಾಡಿ ಎಕ್ಸಾಂ ಬರಿಯೋದು. ಬಟ್ ಅದೇ ಸ್ಟೂಡೆಂಟ್ಸ್​ಗೆ ಸ್ವಲ್ಪ ಮಸ್ತಿಯೂ ಬೇಕಲ್ವ. ಇದೇ ನಿಟ್ಟಿನಲ್ಲೇ ನಡೆದಿದ್ದು ಈ ಮಸ್ತಿ ಗೇಮ್ಸ್.

ಖಾಲಿ ಚೀಲದಲ್ಲಿ ಕಾಲಿಟ್ಟು ಓಡೋಕೆ ಸರ್ಕಸ್. ಕಣ್ಣಿಗೆ ಬಟ್ಟೆ ಕಟ್ಕೊಂಡು ಗುರಿ ಮುಟ್ಟೋಕೆ ಹರಸಾಹಸ. ಹಗ್ಗಾಜಗ್ಗಾಟದಲ್ಲೂ ಕಸರತ್ತು. ಕಬ್ಬಡ್ಡಿ ಆಟದಲ್ಲೂ ತಾಕತ್ತು. ಟೋಟಲಿ ಹೇಳ್ಬೇಕಂದ್ರೆ ಕೆಲವ್ರು ಆಡೋದ್ರಲ್ಲಿ ಬ್ಯುಸಿಯಾಗಿದ್ರೆ ಇನ್ನೂ ಕೆಲವ್ರೂ ನೋಡೋದ್ರಲ್ಲೇ ಫುಲ್ ಮಜಾ ತಗೊಳ್ತಿದ್ರು.

ಯಲಗುಂದ ಗ್ರಾಮದಲ್ಲಿ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಹಾಗೂ ಹಳ್ಳಿಯ ಮಹಿಳೆಯರಿಗಾಗಿ ಈ ಗೇಮ್ ನಡೀತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಟಲ್ ಹುಡುಕೋದು, ಗೋಣಿಚೀಲದಲ್ಲಿ ಕಾಲಿಟ್ಟು ಗುರಿ ಮುಟ್ಟೋದು, ಹಗ್ಗಾಜಗ್ಗಾಟದಲ್ಲಿ ಗೆದ್ದು ಬೀಗೋಕೆ ಕಸರತ್ತು, ಕಬ್ಬಡ್ಡಿಯಲ್ಲೂ ಕರಾಮತ್ತು.

ಹೀಗೆ ಹಲವು ಬಗೆಯ ಹಳ್ಳಿ ಆಟಗಳನ್ನ ಆಡಿಸಲಾಯ್ತು. ಗೃಹ ವಿಜ್ಞಾನ ಕಾಲೇಜಿನಿಂದ ನಡೆದ ಎನ್ಎಸ್ಎಸ್​ನ ವಾರ್ಷಿಕ ವಿಶೇಷ ಶಿಬಿರ ಇದಾಗಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗಿಯಾಗಿ ಮಸ್ತಿ ಮಾಡೋದ್ರ ಜೊತೆಗೆ ಗ್ರಾಮದಲ್ಲಿ ಸ್ವಚ್ಛತೆ ಕೆಲಸ ಮಾಡಿ ಜಾಗೃತಿ ಮೂಡಿಸಿದ್ರು.

 

ಉಡುಪಿ: ಇಲ್ಲಿನ ಕಾಲೇಜೊಂದ್ರಲ್ಲಿ ಸ್ಪೋರ್ಟ್ಸ್ ಡೇ ಸೆಲೆಬ್ರೇಟ್ ಮಾಡಲಾಯ್ತು. ಇಷ್ಟು ದಿನ ತಿಂಡಿ, ಊಟ, ಸ್ನ್ಯಾಕ್ಸ್​ಗೆ ಹೊರಗಡೆ ಹೋಗ್ತಿದ್ದೋರು ಕಾಲೇಜ್​ನಲ್ಲೇ ಖಾದ್ಯಗಳ ಅಡ್ಡಾ ತೆರೆದಿದ್ರು. ಬಿಸಿ ಚಕ್ಕುಲಿ ತೋವೆ, ತಂಪು ಎಳನೀರು ಶರಬತ್ತು, ಸಿಪ್ಪೆ ಕಪ್ ಕಲ್ಲಂಗಡಿ ಜ್ಯೂಸ್, ಫ್ರೈಡ್ ರೈಸ್, ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ, ವಡಪಾವ್, ಉಡುಪಿ ಪಾನಿಪುರಿ, ಬೆಂಕಿ ಬೀಡ, ಹೋಳಿಗೆ ತುಪ್ಪ, ಐಸ್ ಕ್ರೀಂ ಹೀಗೆ ತರಹೇವಾರಿ ಐಟಂಗಳನ್ನ ಮಾರಾಟ ಮಾಡಿದ್ರು.

ಅಂತೂ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಖುಷಿಯನ್ನೂ ಕೊಡ್ಬೇಕು ಅಂತಾ ಹಾಸನದಲ್ಲಿ ಗ್ರಾಮೀಣ ಕ್ರೀಡೆಗಳನ್ನ ಆಡಿಸಿದ್ರೆ ಉಡುಪಿಯಲ್ಲಿ ವ್ಯಾಪಾರವನ್ನೂ ಪರಿಚಯಿಸಿದ್ರು.. ಇದೇ ಅಲ್ವಾ ನಿಜವಾದ ಶಿಕ್ಷಣ ಅಂದ್ರೆ.