ಉಡುಪಿ, (ಡಿಸೆಂಬರ್ 04): ವ್ಯಕ್ತಿಯೋರ್ವರು ರೈಸ್ಮಿಲ್ ಉದ್ಯಮದ ಜತೆ ಜೊತೆಗೆ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಹೌದು..ಉಡುಪಿ (Udupi) ಜಿಲ್ಲೆಯ ರಮೇಶ್ ನಾಯಕ್ (Thekkatte’s Ramesh Nayak) ಎನ್ನುವರು ರೈಸ್ಮಿಲ್ ಉದ್ಯಮದ ಜೊತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನುಲುಬಾಗಿ ನಿಂತು ವಾರ್ಷಿಕ ಸುಮಾರು ಕೋಟಿ ರೂ. ಅಧಿಕ ವಹಿವಾಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊಡಮಾಡುವ ಬಿಲಿಯೇನರ್ ರೈತ ಪ್ರಶಸ್ತಿಗೆ (Billionaire Farmer Award) ಆಯ್ಕೆಯಾಗಿದ್ದು, ಇದೇ ಡಿಸೆಂಬರ್ 7ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ತೆಕ್ಕಟ್ಟೆಯ ರೈಸ್ಮಿಲ್ ಉದ್ಯಮಿಯಾಗಿರುವ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾತು 13 ಎಕರೆ ಜಮೀನಿನಲ್ಲಿ ಸುಮಾರು 11 ಜಾತಿಯ 1634 ವಿವಧ ತಳಿತ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಲ ಕಂಡುಕೊಂಡಿದ್ದಾರೆ. ಈ ಮೂಲಕ ನಿಸರ್ಗ ಪ್ರೇಮ ಮೆರೆದು ಉಡುಪಿ ಜಿಲ್ಲೆಯ ಮಾದರಿ ರೈತ ಎನಿಸಿಕೊಂಡಿದ್ದಾರೆ.
ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡಗಳನ್ನು ನಾಟಿ ಮಾಡಲಾಗಿದ್ದು, ಇದರ ಮಧ್ಯೆ ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ. ಈ ನಡುವೆ ಡೆಂಗ್ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ, ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರ್ಯಾಗನ್ ಫ್ರೂಟ್ ಸೇರಿದಂತೆ ಒಟ್ಟು 1634 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾದರಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Mon, 4 December 23