ಚಿಂಚೋಳಿ ತಾಲೂಕಿನಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

|

Updated on: Mar 28, 2021 | 2:04 PM

ಉಡುಪಿ ಜಿಲ್ಲೆ ಕಾಪು ತಾಲೂಕಿನ ಇನ್ನಂಜೆ ಮೈದಾನದಲ್ಲಿ ವಾಲಿಬಾಲ್ ಆಡುವಾಗ ಕುಸಿದು ಮೃತಪಟ್ಟಿದ್ದಾರೆ. ವಾಲಿಬಾಲ್​ನಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ದೇವರಾಜ್, ರಾಷ್ಟ್ರೀಯ ಆಟಗಾರರ ಬೆವರಿಳಿಸಿದ್ದರು.

ಚಿಂಚೋಳಿ ತಾಲೂಕಿನಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಕಲಬುರಗಿ ಅಪಘಾತ
Follow us on

ಕಲಬುರಗಿ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗೌಡನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ. 19 ವರ್ಷದ ಪೃಥ್ವಿಸಿಂಗ್ ತಾರಾಸಿಂಗ್ ಮೃತ ದುರ್ದೈವಿ. ಚಿಂಚೋಳಿಯಿಂದ ಚಿಮ್ಮನಚೋಡದ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಮತ್ತೋರ್ವ ಬೈಕ್ ಸವಾರನಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಸಾವು
ಮೈದಾನದಲ್ಲಿ ವಾಲಿಬಾಲ್ ಆಡುವಾಗ ಕುಸಿದು ಬಿದ್ದು ದೇವರಾಜ್ ಅಂಚನ್(34) ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಇನ್ನಂಜೆ ಮೈದಾನದಲ್ಲಿ ವಾಲಿಬಾಲ್ ಆಡುವಾಗ ಕುಸಿದು ಮೃತಪಟ್ಟಿದ್ದಾರೆ. ವಾಲಿಬಾಲ್​ನಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ದೇವರಾಜ್, ರಾಷ್ಟ್ರೀಯ ಆಟಗಾರರ ಬೆವರಿಳಿಸಿದ್ದರು. ಹಕ್ಕಿಯಂತೆ ಜಿಗಿದು ಆಡುತ್ತಿದ್ದ ದೇವರಾಜ್​ಗೆ ಪಕ್ಕಿದೇವು ಅಂತಾನೇ ಕರೆಯುತ್ತಿದ್ದರು.

ತನಗೆ ಜೀವ ಬೆದರಿಕೆ ಇದೆ ಎಂದು ದೂರು ಸಲ್ಲಿಸಿದ ರಾಕೇಶ್ ಮಲ್ಲಿ
ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ ಮತ್ತು ರಾಖಿ ಅನ್ನೋರಿಂದ ತನಗೆ ಬೆದರಿಕೆ ಇದೆ ಎಂದು ಮಂಗಳೂರಿನ ಕದ್ರಿ ಠಾಣೆಯಲ್ಲಿ ರಾಕೇಶ್ ಮಲ್ಲಿ ದೂರು ನೀಡಿದ್ದಾರೆ. ಇದೇ ದೂರಿನಲ್ಲಿ ಬೆಂಗಳೂರಿನ ಕೆಲ ರೌಡಿಶೀಟರ್​ಗಳ ಹೆಸರುಗಳನ್ನು ಉಲ್ಲೇಖಿಸಲಾಗಿದ್ದು ರಾಖಿ ಡ್ರೈವರ್ ವಿಜಯ್, ಗಿರೀಶ್ ಪೊಡುವಳ್ ಎಂಬುವವರ ಹೆಸರನ್ನೂ ರಾಕೇಶ್ ಮಲ್ಲಿ ಪ್ರಸ್ತಾಪಿಸಿದ್ದಾರೆ. ಇವರೆಲ್ಲಾ ಸೇರಿಕೊಂಡು ನನ್ನನ್ನು ಕೊಲ್ಲಲು ಸ್ಕೆಚ್ ಹಾಕಿದ್ದಾರೆ ಅಂತ ರಾಕೇಶ್ ಮಲ್ಲಿ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ದಾಮರದುರ್ಗಂ ಬಳಿ ಅಪಘಾತ; ಲಾರಿ, ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರ ಸಾವು 

Published On - 7:23 am, Sun, 28 March 21