Udupi Paryaya: ಕೃಷ್ಣಾಪುರ ಮಠಕ್ಕೆ ‘ಶ್ರೀಕೃಷ್ಣ’ನ ಪೂಜೆ ಹೊಣೆ
ಭಕ್ತರು ಕಡಿಮೆ ಇದ್ರೂ, ಭಕ್ತಿ ಭಾವ ತುಂಬಿತ್ತು.. ಅದ್ಧೂರಿತನ ಇಲ್ಲದಿದ್ರೂ ಆಚರಣೆಗಳು ನಡೆದ್ವು.. ರಥ ಬೀದಿಯಲ್ಲಿ ಅಷ್ಟ ಮಠಾಧೀಶರು ಸಾಗುತ್ತಿದ್ರೆ, ನಾದಸ್ವರ ಮೊಳಗುತ್ತಿತ್ತು.. ಶುಭ ಮುಹೂರ್ತದಲ್ಲಿ ಕೃಷ್ಣನ ಜವಾಬ್ದಾರಿ ಕೃಷ್ಣಾಪುರ ಮಠಕ್ಕೆ ವರ್ಗಾವಣೆಯಾಯ್ತು..
ಉಡುಪಿ: ಭಕ್ತರು ಕಡಿಮೆ ಇದ್ರೂ, ಭಕ್ತಿ ಭಾವ ತುಂಬಿತ್ತು.. ಅದ್ಧೂರಿತನ ಇಲ್ಲದಿದ್ರೂ ಆಚರಣೆಗಳು ನಡೆದ್ವು.. ರಥ ಬೀದಿಯಲ್ಲಿ ಅಷ್ಟ ಮಠಾಧೀಶರು ಸಾಗುತ್ತಿದ್ರೆ, ನಾದಸ್ವರ ಮೊಳಗುತ್ತಿತ್ತು.. ಶುಭ ಮುಹೂರ್ತದಲ್ಲಿ ಕೃಷ್ಣನ ಜವಾಬ್ದಾರಿ ಕೃಷ್ಣಾಪುರ ಮಠಕ್ಕೆ ವರ್ಗಾವಣೆಯಾಯ್ತು.
ಭಕ್ತರ ಸಂಖ್ಯೆ ಕಡಿಮೆವಿದ್ರೂ, ಸಂಪ್ರದಾಯಗಳಲ್ಲಿ ವಿಜೃಂಭಣೆಯಿತ್ತು.. ಕೊವಿಡ್ ಭಯವಿದ್ರೂ, ಪೂಜೆ ಪುನಸ್ಕಾರ ನಿರ್ವಿಘ್ನವಾಗಿ ಸಾಗಿತ್ತು.. ಅದ್ಧೂರಿ ಆಡಂಬರವಿಲ್ಲದೆ ಉಡುಪಿಯ ಕೃಷ್ಣಮಠದಲ್ಲಿ ಈ ಸಲ ಪರ್ಯಾಯ ನೆರವೇರಿತು.. ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಶ್ರೀಕೃಷ್ಣನ ಪೂಜೆ ಹೊಣೆ ವರ್ಗಾವಣೆಯಾಯ್ತು.
ಪರ್ಯಾಯ ಅಂದ್ರೆ, ಕೃಷ್ಣ ದೇವರ ಪೂಜೆ ಅಧಿಕಾರವನ್ನ ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರಿಸುವ ಮಹೋತ್ಸವ. ಆದ್ರೆ, ಕೊರೊನಾದಿಂದಾಗಿ ಮೊದಲ ಬಾರಿಗೆ, ಸರಳವಾಗಿ ಪರ್ಯಾಯೋತ್ಸವ ನಡೆಯಿತು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ನಾಲ್ಕನೇ ಸಲ ಸರ್ವಜ್ಞ ಪೀಠಾರೋಹಣ ಮಾಡಿದ್ರು.
ರಾತ್ರಿ ಪೂರ್ತಿ ನಡೀತಿದ್ದ ಕಾರ್ಯಕ್ರಮಗಳು ಈ ಸಲ ರದ್ದಾಗಿದ್ವು.. ಮೆರವಣಿಗೆಯಲ್ಲಿ ಟ್ಯಾಬ್ಲೋಗಳ ಸಂಖ್ಯೆ ತಗ್ಗಿತ್ತು.. ಕಲಾತಂಡಗಳ ಪ್ರದರ್ಶನ ಇರಲಿಲ್ಲ.. ಮುಂಜಾನೆ 3.30ಕ್ಕೆ ದಂಡ ತೀರ್ಥದಲ್ಲಿ ಪುಣ್ಯಸ್ನಾನ ಕೈಗೊಂಡ ಕೃಷ್ಣಾಪುರ ಶ್ರೀಗಳು ಜೋಡುಕಟ್ಟೆಗೆ ಬಂದ್ರು.. ಅಲ್ಲಿ ಅಷ್ಟ ಮಠಾಧೀಶರು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ, ವಾಹನ ಪಲ್ಲಕ್ಕಿಯಲ್ಲಿ ಮೆರವಣಿಗೆ ಸಾಗಿದ್ರು. ನಂತರ ಶುಭ ಮುಹೂರ್ತದಲ್ಲಿ ಅದಮಾರು ಶ್ರೀಗಳು ಕೃಷ್ಣಾಪುರ ಸ್ವಾಮೀಜಿಗೆ ಅಧಿಕಾರ ಹಸ್ತಾಂತರಿಸಿದ್ರು.. ಅಕ್ಷಯ ಪಾತ್ರೆ ಮತ್ತು ಸಟ್ಟುಗ ಪಡೆದ ಕೃಷ್ಣಾಪುರಶ್ರೀಗಳು, ಸರ್ವಜ್ಞ ಪೀಠಾರೋಹಣ ಮಾಡಿದ್ರು.. ಮಾಜಿ ಡಿಸಿಎಂ ಪರಮೇಶ್ವರ್ ಸೇರಿದಂತೆ, ನೂರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದ್ರು.
ಒಟ್ನಲ್ಲಿ, 14 ವರ್ಷಗಳ ನಂತರ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳಿಗೆ, ಕೃಷ್ಣಪೂಜೆಯ ಅಧಿಕಾರ ಸಿಕ್ಕಿದೆ.. ಮುಂದಿನ 2 ವರ್ಷ ಶ್ರೀ ಮಠದಲ್ಲೇ ಅವರು ಇರಲಿದ್ದು, ಶ್ರೀ ಕೃಷ್ಣನ ಪೂಜೆ ಪುನಸ್ಕಾರ ನೋಡಿಕೊಳ್ಳಲಿದ್ದಾರೆ.