ವಾಕಿಂಗ್ (Walking) ಕೆಲವರಿಗೆ ಹವ್ಯಾಸ ..ಇನ್ನು ಹಲವರಿಗೆ ಅನಿವಾರ್ಯ! ಸಂಪರ್ಕ ಸಾಧನಗಳನ್ನು ಬಳಸದೆ ಬರಿಗಾಲಲ್ಲಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇವತ್ತಿಗೂ ನಮ್ಮಲ್ಲಿದೆ. ನಮ್ಮ ದೇಶದಲ್ಲಿ 35 ಲಕ್ಷಕ್ಕೂ ಅಧಿಕ ಜನರಿಗೆ ಕಾಲಿಗೆ ಧರಿಸಲು ಚಪ್ಪಲಿ (slippers) ಇಲ್ವಂತೆ! ಬಡವರ ಪಾದಕ್ಕೆ ರಕ್ಷೆ ಕೊಡುವ ನಡಿಗೆ ಅಭಿಯಾನವೊಂದು (campaign) ಉಡುಪಿಯಲ್ಲಿ (udupi) ಗಮನ ಸೆಳೆದಿದೆ.
ನಡಿಗೆ ನಮ್ಮ ಬೊಜ್ಜು ಕರಗಿಸಬಹುದು. ಆದರೆ ಉಡುಪಿಯಲ್ಲಿ ನಡೆಯುತ್ತಿರುವ ನಡಿಗೆ ನಮ್ಮ ಮನ ಕರಗಿಸುತ್ತದೆ. ಇದೊಂದು ವಿಶಿಷ್ಟ ಅಭಿಯಾನ! ನಾವು ಬಳಸಿ ಎಸೆಯಲು ಇಟ್ಟ ಚಪ್ಪಲಿಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ಸಂಗ್ರಹಿಸುತ್ತಿದ್ದಾರೆ. ನಿಗದಿಪಡಿಸಿದ ಮೂರು ದಿನಗಳಲ್ಲಿ ಉಡುಪಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಜನರು ಸುಮಾರು 10,000 ಜೋಡಿ ಚಪ್ಪಲಿ ಕೊಟ್ಟು ಹೋಗಿದ್ದಾರೆ… ಅರೆ ಬಳಸಿದ ಚಪ್ಪಲಿ ಇಟ್ಕೊಂಡು ಏನ್ ಮಾಡ್ತಾರೆ ಅಂದ್ರಾ…. ಚಪ್ಪಲಿ ಇಲ್ಲದೆ ಕಾಲು ಸವಿಯುತ್ತಿರುವ ಸಾವಿರಾರು ಬಡವರಿಗೆ ಸಹಾಯ ಮಾಡುವ ನಡಿಗೆ ಅಭಿಯಾನದ ರಹಸ್ಯ ಏನು? ಇಲ್ಲಿ ನೋಡಿ…
ಇವೆಂಟ್ ಪ್ಲಾನರ್ ಮತ್ತು ಆಂಕರ್ ಆಗಿರುವ ಸಾಮಾಜಿಕ ಕಾರ್ಯಕರ್ತ ಅವಿನಾಶ್ ಕಾಮತ್ ಈ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಮುಂಬೈನ ಗ್ರೀನ್ ಸೋಲ್ ಫೌಂಡೇಶನ್ ಈ ಅಭಿಯಾನಕ್ಕೆ ಸಹಾಯ ಮಾಡಿದೆ. ಬಳಸಿದ ಕ್ರೀಡಾ ಪಾದರಕ್ಷೆಯಿಂದ ಹೊಸ ಪಾದರಕ್ಷೆಯನ್ನು ತಯಾರು ಮಾಡಿ ಬಡ ಮಕ್ಕಳಿಗೆ ದಾನ ಮಾಡುತ್ತಿದ್ದಾರೆ.
Also read: ಬಂಟ್ವಾಳ ಅಕ್ಷಯ ಪಾತ್ರ ಪ್ರತಿಷ್ಠಾನದ ಹೈಟೆಕ್ ಅಡುಗೆಮನೆಯು ದಿನಕ್ಕೆ 15 ಸಾವಿರ ಊಟ ಸಿದ್ದಪಡಿಸುತ್ತಿದೆ
ಉಡುಪಿಯಲ್ಲಿ ಸಂಗ್ರಹಿಸಿದ 10 ಸಾವಿರ ಜೋಡಿ ಚಪ್ಪಲಿಗಳನ್ನು ಮುಂಬೈಯ ಸಂಸ್ಥೆಗೆ ರವಾನೆ ಮಾಡಲಾಗುತ್ತದೆ. ಅಲ್ಲಿ ಹೊಸ ಪಾದರಕ್ಷೆಯಾಗಿ ಮಾರ್ಪಾಟು ಮಾಡಲಾಗುತ್ತದೆ. ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ಪಾದರಕ್ಷೆ ಸಂಗ್ರಹಿಸಲಾಗುತ್ತಿದೆ. ಮನೆ ಶುಚಿತ್ವದ ಜೊತೆ ಮನಮೆಚ್ಚುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಅಂತ ಉಡುಪಿ ಜನಕ್ಕೆ ಕರೆ ನೀಡಲಾಗಿದೆ.
ಕಸದ ಬುಟ್ಟಿಗೆ ಎಸೆದು ಪರಿಸರ ಕಲುಷಿತ ಆಗೋದನ್ನು ತಪ್ಪಿಸಲು ಇಂತಹ ಅಭಿಯಾನ ದೇಶದ, ರಾಜ್ಯದ ಅಲ್ಲಲ್ಲಿ ನಡೆದಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಅವರು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನಕ್ಕೆ ಹೇಳಿದ್ದಾರೆ!
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ