ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಹಿಂದೂ ಸಂಘಟನೆ, ಬಿಜೆಪಿ ಮುಖಂಡರ ವಿರುದ್ಧ ಕೇಸ್ ಬುಕ್

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಮುಖಂಡರು ಹಾಗೂ ಬಿಜೆಪಿ ನಾಯಕಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಹಿಂದೂ ಸಂಘಟನೆ,  ಬಿಜೆಪಿ ಮುಖಂಡರ ವಿರುದ್ಧ ಕೇಸ್ ಬುಕ್
ಬಿಜೆಪಿ, ಹಿಂದೂ ಸಂಘಟನೆಗಳ ಪ್ರತಿಭಟನೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Aug 04, 2023 | 1:59 PM

ಉಡುಪಿ, (ಆಗಸ್ಟ್ 04): ಉಡುಪಿಯ (Udupi) ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ(Video) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣವನ್ನು ಎಸ್​ಐಟಿ ತನಿಖೆಗೆ ವಹಿಸುವಂತೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ(BJP) ಪ್ರತಿಭಟನೆಗಿಳಿದಿವೆ. ಇದೀಗ ಪ್ರತಿಭಟನಾಕಾರರ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಜುಲೈ 28ರಂದು ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ಸಂಬಂಧ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಲು ಸಿದ್ಧರಾಗಿ; ಉಡುಪಿಯಲ್ಲಿ ಮಹಿಳೆಯರಿಗೆ ಶರಣ್ ಪಂಪ್​​​ವೆಲ್ ಕರೆ

ಶಾಲಾ-ಕಾಲೇಜಿಗೆ ಸೇರಿಸಬೇಡಿ, ಮದರಸಾಗಳಿಗೆ ಸೇರಿಸಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ್ದರು. ಇದೀಗ ಅವರ ಹೇಳಿಕೆ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಉಡುಪಿ ಪೊಲೀಸರು, ಕೋಮುದ್ವೇಷ, ಧರ್ಮ ತಾರತಮ್ಯ ಆರೋಪದಡಿ ವೀಣಾ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ಇನ್ನು ಇದೇ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಶ್ವ ಹಿಂದೂ ಪರಿಷತ್​​​ನ (VHP) ಕನ್ನಡದ ಪ್ರಾಂತೀಯ ಕಾರ್ಯದರ್ಶಿ ಶರಣ್ ವಿರುದ್ಧ ದೂರು ದಾಖಲಾಗಿದೆ. ಹಿಂದೂ ತಾಯಂದಿರು ಸೌಟು, ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಬೇಕು. ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ಸಿದ್ಧರಾಗಬೇಕು ಎಂದು ಶರಣ್ ಕರೆ ನೀಡಿದ್ದರು.

ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ಜಿಹಾದಿ ರಾಕ್ಷಸಿಯರು ಬಂದಿದ್ದಾರೆ. ಜಿಹಾದಿ ರಾಕ್ಷಸಿಯರ ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಸಂಚು ಹೂಡಲಾಗಿದೆ. ಜಿಹಾದಿ ರಾಕ್ಷಸಿಯರಿಗೆ ಹಿಂದು ರಕ್ಷಕರಾಗಿ ಉತ್ತರ ಕೊಡುತ್ತೇವೆ. ಇಂತಹ ದಾಳಿಗಳು ಇಂದೇ ಕೊನೆಗೊಳ್ಳಬೇಕು. ಹಿಂದೂ ತಾಯಂದಿರು ಎಚ್ಚೆತ್ತುಕೊಳ್ಳಬೇಕು ಎಂದು ಶರಣ್ ಪಂಪ್​​ವೆಲ್ ಹೇಳಿದ್ದರು.

ಇನ್ನಷ್ಟು ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:03 pm, Fri, 4 August 23