ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ

ವಿಆರ್​ಎಲ್​ ಲಾಜಿಸ್ಟಿಕ್ಸ್ ಲಿಮಿಟೆಡ್​​​​ ಪ್ರಕಾಶನದಲ್ಲಿ ಪ್ರಕಟವಾದ ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ 'A Promised Nation Hon'ble Shri Narendra Modi- the Maker of New India' ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ
ಪುಸ್ತಕ ಬಿಡುಗಡೆ ಮಾಡಿದ ಅಮಿತ್​ ಶಾ
ವಿವೇಕ ಬಿರಾದಾರ

Updated on: Jan 26, 2024 | 11:26 AM

ಬೆಂಗಳೂರು/ನವದೆಹಲಿ, ಜನವರಿ 26: ವಿಆರ್​ಎಲ್ (VRL)​ ಲಾಜಿಸ್ಟಿಕ್ಸ್ ಲಿಮಿಟೆಡ್​​​​ ಪ್ರಕಾಶನದಲ್ಲಿ ಪ್ರಕಟವಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ‘A Promised Nation Hon’ble Shri Narendra Modi- the Maker of New India’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಿಡುಗಡೆ ಮಾಡಿದ್ದಾರೆ.

ವಿಶೇಷವೆಂದರೆ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಈ ಕೃತಿಯ ಪ್ರಕಾಶಕರು ಹುಬ್ಬಳ್ಳಿಯವರು ಎಂಬುದೇ ಹೆಮ್ಮೆಯ ಸಂಗತಿ. ಈ ಪುಸ್ತಕವನ್ನು ನಮ್ಮ ಹುಬ್ಬಳ್ಳಿಯ ವಿಆರ್​ಎಲ್​ ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಕಟಿಸಿದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಬ್ರೈಲ್ ಲಿಪಿಯಲ್ಲಿ ಬರೆಯಲಾಗಿರುವ ಈ ಪುಸ್ತಕವು ದೃಷ್ಟಿಹೀನ ಜನರಿಗೆ ಮೋದಿ ಅವರ ಜೀವನ ಪಯಣದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಈ ಮಹತ್ತರ ಹೆಜ್ಜೆಯಲ್ಲಿ ನಮ್ಮ ಹುಬ್ಬಳ್ಳಿಯೂ ಒಂದು ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ಪ್ರಹ್ಲಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Follow Us