ಉತ್ತರ ಕನ್ನಡ, ಜೂ.06: ಕಾರವಾರ ಅರ್ಬನ್ ಬ್ಯಾಂಕ್(Karwar Urban Bank)ನಲ್ಲಿ 54 ಕೊಟಿ ರೂಪಾಯಿ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನಲೆ ಬ್ಯಾಂಕ್ಗೆ ಸಹಕಾರ ಇಲಾಖೆ ಅಧಿಕಾರಿಗಳು ಆಗಮಿಸಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಸುರೇಶ್ ಗೌಡ ನೆತೃತ್ವದಲ್ಲಿ ಬ್ಯಾಂಕ್ ದಾಖಲೆಗಳನ್ನು ಪರಿಶಿಲಿಸುತ್ತಿದ್ದಾರೆ. ಇತ್ತ ಗ್ರಾಹಕರು ಇಟ್ಟ ಹಣ ಹಿಂತಿರುಗಿಸಲು ಬ್ಯಾಂಕ್ ಸಿಬ್ಬಂದಿ ಸತಾಯಿಸುತ್ತಿದ್ದು, ತಮ್ಮ ಹಣಕ್ಕಾಗಿ ಬ್ಯಾಂಕ್ ಮುಂದೆ ಗ್ರಾಹಕರು ಕಣ್ಣೀರು ಹಾಕುತ್ತಿದ್ದಾರೆ.
ಈ ಕುರಿತು ಗ್ರಾಹಕರು ಮಾತನಾಡಿ, ‘ನಾವು ಎಷ್ಟೇ ಲಕ್ಷ ರೂ. ಹಣ ಇಟ್ಟಿದ್ದರೂ ಕೇವಲ 5 ಸಾವಿರ ರೂಪಾಯಿ ಮಾತ್ರ ಕೊಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ಕಷ್ಟ ಎಂದು ಬಂದ ಗ್ರಾಹಕರಿಗೆ ಹಣ ಸಿಗುತ್ತಿಲ್ಲವಂತೆ. ಈ ಹಿನ್ನಲೆ ಬ್ಯಾಂಕ್ ಮುಂದೆ ಭಾರೀ ಜನ ಜಮಾಯಿಸಿದ್ದಾರೆ. ಇನ್ನು ‘ಆರೋಗ್ಯ ಸರಿ ಇಲ್ಲ ಚಿಕಿತ್ಸೆಗೆ ಮಣಿಪಾಲ್ಗೆ ಹೋಗಬೇಕು, ಹಣ ಕೊಡಿ ಅಂದರೆ ಕೊಡುತ್ತಿಲ್ಲವಂತೆ. ಇತ್ತ ನಮ್ಮ ಯಜಮಾನರಿಗೆ ಕಣ್ಣಿನ ಆಪರೇಷನ್ ಮಾಡಿಸಬೇಕು ಹಣ ಕೊಡಿ ಅಂದರೂ ನಾಳೆ ಬನ್ನಿ ಎನ್ನುತ್ತಾರಂತೆ.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ: ಡೆತ್ನೋಟ್ ಬರೆದಿಟ್ಟು ಅಧೀಕ್ಷಕ ಆತ್ಮಹತ್ಯೆ
ನಮ್ಮ ಮಗಳ ಡೆಲಿವರಿ ಇದೆ ಹಣ ಕೊಡಿ ಅಂದ್ರೆ ಆದಷ್ಟು ಬೇಗ ಕೊಡುವುದಾಗಿ ಸಬೂಬು ಹೇಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಮಹಿಳೆ, ‘ನನ್ನ ಮಗಳ ಆಡ್ಮಿಷನ್ ಮಾಡಿಸಬೇಕು ಎಂದು ಹಣ ಕೇಳಲು ಬಂದರೆ ನಾಳೆ ಬನ್ನಿ ಎಂದು ಸತಾಯಿಸುತ್ತಿದ್ದಾರಂತೆ. ಈ ಮಧ್ಯೆ ಬೀದಿ ಬದಿ ವ್ಯಾಪಾರಿಯೂಬ್ಬರು, ‘ನಾನು ಕಷ್ಟ ಪಟ್ಟು ಕೂಡಿಟ್ಟ 15 ಲಕ್ಷ ಹಣವನ್ನು ಮರು ಪಾವತಿ ಮಾಡಲು ಕೇಳಿದರೆ, ಸದ್ಯ 5 ಸಾವಿರ ಕೊಡುವುದಾಗಿ ಹೇಳುತ್ತಿದ್ದಾರೆ. ಇತ್ತ ಮತ್ತೊಬ್ಬ ಗ್ರಾಹಕರೊಬ್ಬರು ನನ್ನ ಮಗಳ ಮದುವೆ ಇದೆ ಹಣ ಕೊಡಿ ಅಂದರೆ ಈಗ ಸದ್ಯಕ್ಕೆ ಆಗಲ್ಲ ಅಂತಿದ್ದಾರಂತೆ. ಕಷ್ಟಕ್ಕೆ ಹಣ ಬೇಕಾಗುತ್ತೆ ಎಂದು ಸ್ವಲ್ಪ ಹಣ ಇಟ್ಟಿದ್ದೆ, ಈಗ ನೋಡಿದ್ರೆ ಎಲ್ಲ ಮಣ್ಣ ಪಾಲಾಯ್ತು ಎಂದು ಬ್ಯಾಂಕ್ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ:ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ; ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಹೀಗೆ ಒಬ್ಬೊಬ್ಬ ಗ್ರಾಹಕರು ತಮ್ಮ ಕಷ್ಟ ಎಂದು ಬ್ಯಾಂಕ್ ಬಳಿ ಬಂದರೂ ಹಣ ಕೊಡುತ್ತಿಲ್ಲ. ಈ ಹಿಂದಿನ ಮ್ಯಾನೇಜರ್ ದಿವಂಗತ ಗುರುದಾಸ್ ಬಾಂದೆಕರ ತಪ್ಪಿನಿಂದ ಬ್ಯಾಂಕ್ಗೆ ಈ ಅವಸ್ಥೆ ಬಂದಿರುವುದಾಗಿ ಮರಣ ಹೊಂದಿದ ಬ್ಯಾಂಕ್ ಮ್ಯಾನೇಜರ್ ಮೇಲೆ ಬ್ಯಾಂಕ್ ಆಡಳಿತ ಮಂಡಳಿ ಆರೋಪ ಮಾಡುತ್ತಿದೆ. ಆಡಳಿತ ಮಂಡಳಿಯ ಆರೋಪಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಗುರುದಾಸ್ ಬಾಂದೇಕರ್ ಸಾವು ಅಲ್ಲ, ಅದು ಒಂದು ಕೊಲೆ ಎಂದು ಗಂಭೀರ ಆರೋಪ ಹೊರಡಿಸಿದ್ದಾರೆ. ಹೌದು, ಗುರುದಾಸ್ ಬಾಂದೆಕರ ಅಪಘಾತದಲ್ಲಿ ಮರಣ ಹೊಂದಿರುವುದಾಗಿ ಹೇಳುತ್ತಿದ್ದಾರೆ. ಆದ್ರೆ, ಈ ಅವ್ಯವಹಾರ ನೋಡಿದರೆ ಅದು ಆಕಸ್ಮಿಕ ಸಾವಲ್ಲ, ಅದು ಒಂದು ಕೊಲೆ ಎಂದು ಕಾರವಾರ ನಗರದ ನಿವಾಸಿ ದೀಪಕ್ ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ