ಕಾರವಾರ: ನಡು ರಸ್ತೆಯಲ್ಲಿ ಗೋವಿನ (cow) ತಲೆಯೊಂದು ಬಿದ್ದಿರುವಂತಹ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಈ ಘಟನೆ ಕಂಡು ಬಂದಿದ್ದು, ಸದ್ಯ ಆತಂಕ ಸೃಷ್ಟಿಸಿದೆ. ಅಪರಿಚಿತರು ಗೋವಿನ ತಲೆ ಕತ್ತರಿಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇನೊಂದೆಡೆ ಪೊದೆಯಲ್ಲಿ ಎಸೆದಿದ್ದ ಗೋವಿನ ತಲೆಯನ್ನ ಕಚ್ಚಿ ತಂದು ಶ್ವಾನಗಳು ರಸ್ತೆ ಬಿಸಾಡಿವೆ ಎನ್ನಲಾಗುತ್ತಿದೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮುಂದಿನ ವಾರ ಕರಾವಳಿ ಕರ್ನಾಟಕದಲ್ಲಿ ವರ್ಷಧಾರೆ, ಬೆಂಗಳೂರಿನಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ ಹಿನ್ನೆಲೆ ಸ್ಥಳೀಯ ಕಾಂಗ್ರೆಸ್ (Congress) ಮುಖಂಡ ಸೇರಿದಂತೆ ಇಬ್ಬರನ್ನು ನಗರದ ಆರ್ಎಂಸಿ ಯಾರ್ಡ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಸುಂಕದಕಟ್ಟೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸೋಮುಗೌಡ ಬಂಧಿತರು.
ಕಳೆದ ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಖಾಜಾಮೊಯಿನುದ್ದೀನ್ ಹಾಗೂ ಉಮೇಶ ಎಂಬುವವರು ಮಾಗಡಿಯಲ್ಲಿ ಗೋಮಾಂಸ ಖರೀದಿಸಿ ಶಿವಾಜಿ ನಗರಕ್ಕೆ ಸ್ಕಾರ್ಪಿಯೋ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು.
ಇದನ್ನೂ ಓದಿ: ಮಾಟ-ಮೋಡಿ ಹೆಸರಲ್ಲಿ ಮೋಸ ಮಾಡುತ್ತಿದ್ದ ಮಂತ್ರವಾದಿಯ ಕಳ್ಳಾಟ ಬಯಲು ಮಾಡಿದ ಯುವಕ, ವಿಡಿಯೋ ಮಾಡಿ ಸಂದೇಶ
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗೋಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಮಾಂಸಕ್ಕಾಗಿ ಗೋವುಗಳ ಮಾರಣಹೋಮ ನಡೆದಿತ್ತು. ಗೋವುಗಳ ಕಳ್ಳತನ ಮಾಡಿ ದಂಧೆಕೋರರು ಗೋಹತ್ಯೆ ಮಾಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ N.R ಪುರ ತಾಲೂಕಿನ ಮಾಗುಂಡಿ ಗ್ರಾಮದ ಸೇತುವೆ ಕೆಳಭಾಗದಲ್ಲಿ ಗೋವಿನ ಎರಡು ತಲೆ, ಎಂಟು ಕಾಲುಗಳು ಪತ್ತೆ ಆಗಿದ್ದವು.
ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, N.Rಪುರ ತಾಲೂಕಿನಲ್ಲಿ ನಿರಂತರವಾಗಿ ಗೋಮಾಂಸ ದಂಧೆ ನಡೆಯುತ್ತಿದೆ ಎಂಬ ಅನುಮಾನಿಸಲಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೋವುಗಳನ್ನು ದಂಧೆಕೋರರು ಬಿಡುತ್ತಿಲ್ಲ. ಗೋವು ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.