ಉತ್ತರ ಕನ್ನಡ: ತನ್ನ ಇಚ್ಛೆಯಂತೆ ನಡೆಯದ ಪ್ರೇಯಸಿಗೆ ಚಾಕುವಿನಿಂದ ಇರಿದ ಪ್ರಿಯಕರ

ತನ್ನ ಇಚ್ಚೆಯಂತೆ ನಡೆದುಕೊಳ್ಳಲು ನಿರಾಕರಿಸಿದ ಪ್ರೇಯಸಿಗೆ ಪ್ರಿಯಕರ ಚಾಕುವಿನಿಂದ ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಜುಭಾಗಲ್ಲಿ ನಡೆದಿದೆ. ಅಷ್ಟಕ್ಕೂ, ಕಳೆದ ಕೆಲವು ತಿಂಗಳಿನಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಾ, ಗುಪ್ತವಾಗಿ ಭೇಟಿಯಾಗುತ್ತಿದ್ದ ಪ್ರೇಮಿಗಳ ನಡುವೆ ಆಗಿದ್ದೇನು? ಇಲ್ಲಿದೆ ಮಾಹಿತಿ.

ಉತ್ತರ ಕನ್ನಡ: ತನ್ನ ಇಚ್ಛೆಯಂತೆ ನಡೆಯದ ಪ್ರೇಯಸಿಗೆ ಚಾಕುವಿನಿಂದ ಇರಿದ ಪ್ರಿಯಕರ
ಉತ್ತರ ಕನ್ನಡ: ತನ್ನ ಇಚ್ಛೆಯಂತೆ ನಡೆಯದ ಪ್ರೇಯಸಿಗೆ ಚಾಕುವಿನಿಂದ ಇರಿದ ಪ್ರಿಯಕರ (ಸಾಂದರ್ಭಿಕ ಚಿತ್ರ)
Updated By: Rakesh Nayak Manchi

Updated on: Apr 01, 2024 | 10:08 PM

ಕಾರವಾರ, ಏ.1: ತನ್ನ ಇಚ್ಚೆಯಂತೆ ನಡೆದುಕೊಳ್ಳಲು ನಿರಾಕರಿಸಿದ ಪ್ರೇಯಸಿಗೆ ಪ್ರಿಯಕರ ಚಾಕುವಿನಿಂದ ಇರಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಕಾಜುಭಾಗಲ್ಲಿ ನಡೆದಿದೆ. ನಿನ್ನೆ (ಮಾರ್ಚ್ 31) ರಾತ್ರಿ 9.30 ರಿಂದ 10 ಗಂಟೆ ನಡುವೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕಾರವಾರ ನಗರ ಠಾಣೆ ಪೊಲೀಸರು ಆರೋಪಿ ರವಿಶಂಕರ್ (42) ಎಂಬಾತನನ್ನು ಬಂಧಿಸಿದ್ದಾರೆ.

ಆಟೋ ಚಾಲಕನಾಗಿರುವ ನಂದನಗದ್ದಾ ನಿವಾಸಿ ರವಿಶಂಕರ್ (42) ಮತ್ತು ಕಾಜುಭಾಗ್ ನಿವಾಸಿ ಅಂದಾಜು 26-29 ವರ್ಷ ವಯಸ್ಸಿನ ಮಹಿಳೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ತಿಂಗಳಿನಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಾ, ಗುಪ್ತವಾಗಿ ಭೇಟಿಯಾಗುತ್ತಿದ್ದರು. ಆದರೆ, ಮಾರ್ಚ್ 31 ರಂದು ರಾತ್ರಿ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

ಇದನ್ನೂ ಓದಿ: ತನ್ನನ್ನು ಗೇಲಿ ಮಾಡಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ

ಇದೇ ವೇಳೆ ತನ್ನ ಮಾತಿಗೆ ಸಹಮತಿ ಸೂಚಿಸದ ಹಿನ್ನೆಲೆ ಕ್ರೋಧಗೊಂಡ ರವಿಶಂಕರ್, ಚಾಕು ತೆಗೆದು ಪ್ರೇಯಸಿಯ ಎದೆಗೆ ಇರಿದಿದ್ದನು. ಸದ್ಯ, ಆರೋಪಿ ರವಿಶಂಕರ್​ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತ, ಚಾಕು ಇರಿತಕ್ಕೊಳಗಾದ ಮಹಿಳೆಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Mon, 1 April 24