ವಿಧವೆಯನ್ನು ವರಿಸಿದ ನುಡಿ ಹೇಳಿದ ದೈವಪಾತ್ರಿ; ಆರೋಪ ತಳ್ಳಿಹಾಕಿದ ದೈವನರ್ತಕನ ಸಹೋದರ ಹೇಳಿದ್ದೇನು ನೋಡಿ

| Updated By: Rakesh Nayak Manchi

Updated on: Feb 04, 2023 | 9:52 PM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಆಕೆಯನ್ನು ದೈವಪಾತ್ರಿ ಮದುವೆಯಾಗಿದ್ದಾರೆ, ಈ ವಿಷಯವನ್ನ ಮುಚ್ಚಿಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ವಿಧವೆಯನ್ನು ವರಿಸಿದ ನುಡಿ ಹೇಳಿದ ದೈವಪಾತ್ರಿ; ಆರೋಪ ತಳ್ಳಿಹಾಕಿದ ದೈವನರ್ತಕನ ಸಹೋದರ ಹೇಳಿದ್ದೇನು ನೋಡಿ
ದೈವ ದರ್ಶನದ ವೇಳೆ ವಿಧವೆಯನ್ನು ಮದುವೆಯಾಗುವುದಾಗಿ ನಡಿ ನೀಡಿದ ದೈವಪಾತ್ರಿ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ದೈವನರ್ತಕ ಚಂದ್ರಹಾಸನ ಸಹೋದರ ವಿನೋದ್ ನಾಯ್ಕ, ದೈವ ನರ್ತಕ ಚಂದ್ರಹಾಸ ಆಕೆಯನ್ನು ಮದುವೆ ಆಗಿಲ್ಲ. ಬೆಳಗಾವಿ ಮೂಲದ ಮಹಿಳೆ ದೈವಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಒಬ್ಬಳು. ಆಕೆಗೂ ನಮ್ಮ ಸಹೋದರನಿಗೆ ಸಂಬಂಧವಿಲ್ಲ. ಆಕೆಯ ಗಂಡ ಎರಡು ವರ್ಷದ ಹಿಂದೆ ಕೊರೊನ ಸಂದರ್ಭದಲ್ಲಿ ಮೃತನಾಗಿದ್ದಾನೆ. ತನ್ನ ಕಷ್ಟ ಪರಿಹಾರಕ್ಕಾಗಿ ಇಲ್ಲಿಗೆ ದೈವದ ಆರಾಧನೆಗೆ ಬರುತ್ತಿದ್ದಳು. ಆಕೆ ಯಾರು ಎಂಬುವುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಒಂದು ವೇಳೆ ಮದುವೆ ಎನ್ನುವ ವಿಚಾರ ಬಂದರೆ ನಾವು ಒಪ್ಪುವುದಿಲ್ಲ. ಚಂದ್ರಹಾಸನಿಗೆ ಎರಡು ಮಕ್ಕಳಿದ್ದಾರೆ. ಮಗಳಿಗೆ ಮದುವೆ ವಯಸ್ಸು, ಈ ವಯಸ್ಸಿನಲ್ಲಿ ತಂದೆಗೆ ಮದುವೆ ಮಾಡಲಿಕ್ಕೆ ಆಗುತ್ತಾ? ಹೀಗೆ ಮದುವೆ ಆದರೆ ಒಪ್ಪುವುದಕ್ಕಾದರೂ ಆಗುತ್ತಾ? ಇದು ನಮ್ಮ ಏಳಿಗೆ ಸಹಿಸದೆ ಇರುವುವವರು ಮಾಡಿದ್ದಾರೆ. ಆ ತರಹದ ಯಾವುದೇ ಮದುವೆ ಆಗಿಲ್ಲ ಎಂದಿದ್ದಾರೆ. ಅದಾಗ್ಯೂ, ಬೆಳಗಾವಿ ಮೂಲದ ಮಹಿಳೆಗೂ ಚಂದ್ರಹಾಸನಿಗೆ ಮದುವೆ ಆಗಿದೆ, ಈ ವಿಷಯವನ್ನ ಮುಚ್ಚಿಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ದೈವ ದರ್ಶನಕ್ಕೆಂದು ಬೆಳಗಾವಿಯಿಂದ ಬಂದಿದ್ದ ಮದುವೆಯಾದ ಮಹಿಳೆಗೆ, ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಲಾದ ಪಾತ್ರಿಯೊಬ್ಬರು ಮದುವೆಯಾಗುವುದಾಗಿ ವಾಗ್ದಾನ ಮಾಡಿದ್ದಾರೆ. ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈ ಮೇಲೆ ಅರಿಶಿಣ ಚೆಲ್ಲಿಕೊಳ್ಳುತ್ತಾ ಕಾಂತಾರ ಸ್ಟೈಲ್‌ನಲ್ಲಿ ಓ… ಎಂದು ಕೂಗುತ್ತ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ ಎಂದು ಪಾತ್ರಿ ನುಡಿದಿದ್ದಾರೆ. ಈ ರೀತಿ ಪಾತ್ರಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ಕಾರವಾರದಲ್ಲಿ ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿ, ಕಾಂತಾರ ಸ್ಟೈಲಿನಲ್ಲಿ ನುಡಿ ನೀಡಿದ ದೈವ ಪಾತ್ರಿ

ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ್ದು ವಿವಾಹಿತ ಮಹಿಳೆಯನ್ನ ವರೆಸುವ ಸಲುವಾಗಿ ದೈವದ ಹೆಸರನ್ನ ಬಳಿಸಿಕೊಂಡಿದ್ದಾನೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಇನ್ನು ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ, ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದ್ದು ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಿ ಇಲ್ಲಿಗೆ ಭಕ್ತರು ಬರುತ್ತಾರೆ. ಹತ್ತಾರು ವರ್ಷಗಳಿಂದ ಈ ಸ್ಥಳದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Sat, 4 February 23