ಕಾಂಗ್ರೆಸ್ ಸುಧಾರಣೆಯ ವಿರೋಧಿ; ಸಿದ್ದರಾಮಯ್ಯ ಜಿನ್ನಾ ಭೂತ ಬಂದಂತೆ ಆಡುತ್ತಿದ್ದಾರೆ: ಸಿ.ಟಿ ರವಿ ಆಕ್ರೋಶ

| Updated By: ganapathi bhat

Updated on: Feb 06, 2022 | 9:00 PM

ಕಾಲೇಜುಗಳಲ್ಲಿ ತಾಲಿಬಾನ್ ವಾದ ತರಲು ಹೊರಟಿದ್ದೀರಿ. ಇದರಿಂದ ದೇಶ, ಸಮಾಜಕ್ಕೆ ಒಳ್ಳೆದಾಗುವುದಿಲ್ಲ. ಮುಸ್ಲಿಮರೆಂದು ಶಾಲೆಗೆ ಬುರ್ಖಾ ಧರಿಸಿಕೊಂಡು ಬಂದರೆ. ನಾಳೆ ಪೊಲೀಸ್​ ಆದಾಗಲೂ ಬುರ್ಖಾ ಧರಿಸಿಬಂದರೆ ಹೇಗೆ? ಎಂದು ಸಿಟಿ ರವಿ ಕೇಳಿದ್ದಾರೆ.

ಕಾಂಗ್ರೆಸ್ ಸುಧಾರಣೆಯ ವಿರೋಧಿ; ಸಿದ್ದರಾಮಯ್ಯ ಜಿನ್ನಾ ಭೂತ ಬಂದಂತೆ ಆಡುತ್ತಿದ್ದಾರೆ: ಸಿ.ಟಿ ರವಿ ಆಕ್ರೋಶ
ಸಿ.ಟಿ. ರವಿ
Follow us on

ಕಾರವಾರ: ಕಾಂಗ್ರೆಸ್ ಸುಧಾರಣೆಯ ವಿರೋಧಿ ಎಂದು ಗೊತ್ತಾಗುತ್ತದೆ. ಕಾಂಗ್ರೆಸ್‌ನವರ ನಡವಳಿಕೆಯಿಂದಲೇ ಅದು ಗೊತ್ತಾಗುತ್ತದೆ. ಸಮಾಜ ಪರಿವರ್ತನೆ ಆದಂತೆ ಇಸ್ಲಾಂ ಏಕೆ ಪರಿವರ್ತನೆ ಆಗ್ತಿಲ್ಲ. ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಶೋಷಣೆಯನ್ನು ತೋರಿಸುತ್ತೆ. ಇಸ್ಲಾಂ ಮಹಿಳೆಯರು ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ಕಡ್ಡಾಯವಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ನಿವಳಿ ಗ್ರಾಮದಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ತಾಲಿಬಾನ್ ಭೂತ ಹೊಕ್ಕಂತೆ ಮಾತಾಡ್ತಾರೆ. ಶಾಲೆಗಳಲ್ಲಿ ಮತೀಯವಾದ ತುರುಕುವಂತೆ ಮಾತಾಡುತ್ತಾರೆ. 1983 ರ ಶಿಕ್ಷಣ ನೀತಿ ಸಮವಸ್ತ್ರ ಧರಿಸಿ ಎಂದು ಹೇಳುತ್ತದೆ. ಸಿದ್ದರಾಮಯ್ಯನವರೇ ನಿಮ್ಮ ವಕೀಲರ ಬುದ್ಧಿ ಮಸುಕಾಗಿದೆ. ಹಿಜಾಬ್ ಪರವಾಗಿ ಏಕೆ ವಕಾಲತ್ತು ವಹಿಸುತ್ತೀರೆಂದು ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ. ಕಾಲೇಜುಗಳಲ್ಲಿ ತಾಲಿಬಾನ್ ವಾದ ತರಲು ಹೊರಟಿದ್ದೀರಿ. ಇದರಿಂದ ದೇಶ, ಸಮಾಜಕ್ಕೆ ಒಳ್ಳೆದಾಗುವುದಿಲ್ಲ. ಮುಸ್ಲಿಮರೆಂದು ಶಾಲೆಗೆ ಬುರ್ಖಾ ಧರಿಸಿಕೊಂಡು ಬಂದರೆ. ನಾಳೆ ಪೊಲೀಸ್​ ಆದಾಗಲೂ ಬುರ್ಖಾ ಧರಿಸಿಬಂದರೆ ಹೇಗೆ? ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಜಿನ್ನಾ ಭೂತ ಬಂದಂತೆ ಆಡುತ್ತಿದ್ದಾರೆ: ಸಿ.ಟಿ ರವಿ

ಪೊಲೀಸ್​ ಆದಾಗಲೂ ಬುರ್ಖಾ ಧರಿಸಿಬಂದರೆ ಕಳ್ಳ ಯಾರು, ಪೊಲೀಸ್ ಯಾರೆಂದು ಗೊತ್ತಾಗುವುದು ಹೇಗೆ? ಮತೀಯವಾದಕ್ಕೆ ಕಾಂಗ್ರೆಸ್ ಪ್ರೋತ್ಸಾಹ ನೀಡೋದನ್ನ ನಿಲ್ಲಿಸಲಿ. ಓಲೈಕೆ ರಾಜಕಾರಣದಿಂದಾಗ ಈ ದೇಶ ತುಂಡಾಯಿತು. ದೇಶ ವಿಭಜನೆಯಾಗಲು ಜಿನ್ನಾ ಹೇಗೆ ಕಾರಣನಾದನೋ, ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಕಾರಣವಾಗಿದೆ. ದೇಹ ತುಂಡಾದ್ರೂ, ದೇಶ ತುಂಡಾಗಲು ಬಿಡಲ್ಲವೆಂದಿದ್ದ ಗಾಂಧಿ. ಆದರೂ ನಮ್ಮ ದೇಶ ತುಂಡಾಯಿತು ಎಂದು ಸಿ.ಟಿ.ರವಿ ಹೇಳಿದ್ದಾರೆ.

ತುಂಡಾದ ದೇಶಕ್ಕೆ ನೆಹರು ಪ್ರಧಾನಮಂತ್ರಿಯಾದರು. ಶಾಲೆಯಲ್ಲಿ ವಿಭಜನೆ ಸೂತ್ರ ದೇಶ ವಿಭಜನೆಗಿಂತ ಅಪಾಯ. ಹಿಜಾಬ್ ಮುಸ್ಲಿಂ ಮಹಿಳೆಯರು ಶೋಷಣೆ ಸಂಕೇತವಷ್ಟೇ ಅಲ್ಲ. ಮತೀಯವಾದದ ಸಂಕೇತ ಕೂಡ ಆಗಿದೆ. ತುಕಡೆ ಗ್ಯಾಂಗ್‌ಗಳೆಲ್ಲಾ ಕಾಂಗ್ರೆಸ್‌ಗೆ ಬಂದು ಸೇರಕೊಂಡಿವೆ. ಅವರ ಅಜೆಂಡಾ ಸಾಕಾರಕ್ಕೆ ಶಾಲೆಗಳನ್ನ ಬಳಸಿಕೊಳ್ತಿದ್ದಾರೆ. ಸಿದ್ದರಾಮಯ್ಯ ಜಿನ್ನಾ ಭೂತ ಬಂದಂತೆ ಆಡುತ್ತಿದ್ದಾರೆ. ಇದೆಲ್ಲಾ ವೋಟ್ ಬ್ಯಾಂಕ್‌ಗಾಗಿ ಮಾಡುತ್ತಿರುವುದು. ಹಿಜಾಬ್ ವಿವಾದವನ್ನು ಹುಟ್ಟು ಹಾಕಿರುವುದು ಕಾಂಗ್ರೆಸ್ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ತೀವ್ರತೆ ಕಡಿಮೆಯಾದ ಮೇಲೆ ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ: ಬಿಎಸ್ ಯಡಿಯೂರಪ್ಪ

ಕೊರೊನಾ ತೀವ್ರತೆ ಕಡಿಮೆಯಾದ ಮೇಲೆ ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತೇನೆ. ಮುಂದಿನ ಎಲೆಕ್ಷನ್​ನಲ್ಲಿ ಬಿಜೆಪಿ 135 ಸ್ಥಾನ ಗೆಲ್ಲಲು ಸಿದ್ಧತೆ ನಡೆಸಲಾಗಿದೆ. ನಿನ್ನೆಯೂ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಮೋದಿ ಅಲೆಯಲ್ಲಿ ಮುಂದಿನ ಚುನಾವಣೆ ಗೆಲ್ಲುವ ವಿಶ್ವಾಸ ಇದೆ. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಚುನಾವಣೆಯಲ್ಲಿ ಗೆಲ್ತೇವೆ. ಗೋವಾದಲ್ಲೂ ಬಿಜೆಪಿ ಸರ್ಕಾರ ಬರಲಿದೆ ಎಂದು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ನಿವಳಿ ಗ್ರಾಮದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಲತಾ ಮಂಗೇಶ್ಕರ್ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಗಾಯಕಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ಆತ್ಮಕ್ಕೆ ಆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ನಿವಳಿ ಗ್ರಾಮದಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: 6 ಜನರಿಂದ 700 ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ; ಹಿಜಾಬ್ ವಿವಾದದ ಕುರಿತು ಉಡುಪಿ ಜಿಲ್ಲಾಡಳಿತದ ಮೊರೆಹೋದ ವಿದ್ಯಾರ್ಥಿನಿಯರು

ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ ಕೊನೆಗೊಳಿಸಲು ಏಕರೂಪದ ಸಮವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ

Published On - 8:00 pm, Sun, 6 February 22