ಉತ್ತರ ಕನ್ನಡ: ಮಸೀದಿಯೊಂದರ (Mosque) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾರಾಮಾರಿ ನಡೆದಿರುವ ಘಟನೆ ಸಿದ್ದಾಪುರ (Siddapur) ತಾಲೂಕಿನ ಅರೇಂದೂರ ಗ್ರಾಮದಲ್ಲಿ ನಡೆದಿದೆ. ಅರೇಂದೂರ ಗ್ರಾಮದ ಮಸೀದಿಗೆ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ವೇಳೆ ಎರಡು ಗಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ 3 ಮಂದಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಾಪುರ ಠಾಣೆಯಲ್ಲಿ 33 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ ಉಡುಪು ಧರಿಸಿಸುವಂತಿಲ್ಲ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ (ತುಂಡು ಬಟ್ಟೆ) ಧರಿಸಿ ಸಾರ್ವಜನಿಕರು ಸಂಚರಿಸುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಕಮಿಟಿ ಫಲಕ ಅಳವಡಿಸಿದೆ. ರಥ ಬೀದಿಯಿಂದ ಕಡಲ ತೀರ ಮತ್ತು ಇತರೆ ಸ್ಥಳಗಳಿಗೆ ಸಾರ್ವಜನಿಕರು ತೆರಳುವ ಪ್ರದೇಶದಲ್ಲಿ ಕಮಿಟಿಯವರ ಸೂಚನಾ ಫಲಕ ಅಳವಡಿಸಿದ್ದಾರೆ.
ಈ ಹಿಂದೆ ದೇವಸ್ಥಾನದ ಸಮಿತಿ ದೇವಸ್ಥಾನ ಹೊರತುಪಡಿಸಿ ಸಾರ್ವಜನಿಕ ಪ್ರದೇಶದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಿತ್ತು. ಇದೀಗ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಎಂಟು ಜನರಿರುವ ಸಮಿತಿ ಸಾರ್ವಜನಿಕ ಸ್ಥಳವಾದ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸುವಂತಿಲ್ಲ ಎಂದು ಬ್ಯಾನರ್ ಅಳವಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sat, 12 November 22