ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಪ್ರತಿಭಟನೆ, ಮತ್ಸ್ಯ ಪ್ರಿಯರಿಗಿಲ್ಲ ಮೀನೂಟ

|

Updated on: Jan 20, 2020 | 3:29 PM

ಕಾರವಾರ: ಕರಾವಳಿಗರಿಗೆ ಮೀನು ಅನ್ನೋದು ಅಚ್ಚು ಮೆಚ್ಚಿನ ಆಹಾರ. ಪ್ರತಿದಿನ ಮೀನು ಇರಲೇ ಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ ಮಾತ್ರ ಇದೀಗ ಮೀನಿಗೆ ಜನರು ಪರದಾಡುವಂತಾಗಿದೆ. ಕಡಲಿಗೆ ಹೋಗಿ ಖಾಲಿ ಕೈಯಲ್ಲಿ ವಾಪಸ್ ಆಗ್ತಿದ್ದಾರೆ. ಬೋಟ್​ಗಳು ಕಡಲಿಗೆ ಇಳಿದಿಲ್ಲ. ಮೀನುಗಾರರು ಕೂಡ ಕಣ್ಣಿಗೆ ಕಾಣಿಸ್ತಿಲ್ಲ. ಮಾರುಕಟ್ಟೆಯ ಬಾಗಿಲ್ ಕ್ಲೋಸ್ ಆಗಿದೆ. ಮೀನು ಖರೀದಿಗೆ ಬಂದವರು ಕೂಡ ಖಾಲಿ ಕೈನಲ್ಲಿ ವಾಪಸ್ ಆಗ್ತಿದ್ದಾರೆ. ಯಾಕಂದ್ರೆ, ಇಲ್ಲಿ ಎಲ್ಲವೂ ಬಂದ್.. ಬಂದ್.. ಬಂದ್. ಇದು ಉತ್ತರ ಕನ್ನಡ ಜಿಲ್ಲೆಯ […]

ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಪ್ರತಿಭಟನೆ, ಮತ್ಸ್ಯ ಪ್ರಿಯರಿಗಿಲ್ಲ ಮೀನೂಟ
Follow us on

ಕಾರವಾರ: ಕರಾವಳಿಗರಿಗೆ ಮೀನು ಅನ್ನೋದು ಅಚ್ಚು ಮೆಚ್ಚಿನ ಆಹಾರ. ಪ್ರತಿದಿನ ಮೀನು ಇರಲೇ ಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ ಮಾತ್ರ ಇದೀಗ ಮೀನಿಗೆ ಜನರು ಪರದಾಡುವಂತಾಗಿದೆ. ಕಡಲಿಗೆ ಹೋಗಿ ಖಾಲಿ ಕೈಯಲ್ಲಿ ವಾಪಸ್ ಆಗ್ತಿದ್ದಾರೆ.

ಬೋಟ್​ಗಳು ಕಡಲಿಗೆ ಇಳಿದಿಲ್ಲ. ಮೀನುಗಾರರು ಕೂಡ ಕಣ್ಣಿಗೆ ಕಾಣಿಸ್ತಿಲ್ಲ. ಮಾರುಕಟ್ಟೆಯ ಬಾಗಿಲ್ ಕ್ಲೋಸ್ ಆಗಿದೆ. ಮೀನು ಖರೀದಿಗೆ ಬಂದವರು ಕೂಡ ಖಾಲಿ ಕೈನಲ್ಲಿ ವಾಪಸ್ ಆಗ್ತಿದ್ದಾರೆ. ಯಾಕಂದ್ರೆ, ಇಲ್ಲಿ ಎಲ್ಲವೂ ಬಂದ್.. ಬಂದ್.. ಬಂದ್.

ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ. ಇಲ್ಲಿನ ಮೀನುಗಾರರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕಡಲಿನ ಕಡೆ ಮುಖನೂ ಮಾಡ್ತಿಲ್ಲ. ವ್ಯಾಪಾರನೂ ನಡೀತಿಲ್ಲ. ಎಲ್ಲ ಕಡೆ ಬಿಕೋ ಎನ್ನುತ್ತಿದೆ. ಯಾಕಂದ್ರೆ, ವಾಣಿಜ್ಯ ಬಂದರು ವಿಸ್ತರಣೆಯನ್ನ ವಿರೋಧಿಸಿ ಮೀನುಗಾರರು ಹೋರಾಟ ನಡೆಸ್ತಿದ್ದಾರೆ.

ಅಂದ್ಹಾಗೆ, ಕರಾವಳಿ ಭಾಗದಲ್ಲಿ ಮೀನು ಅನ್ನೋದು ಅತೀ ಮುಖ್ಯ ಆಹಾರ. ಪ್ರತಿದಿನ ತಮ್ಮ ಊಟದಲ್ಲಿ ಮೀನು ಇರಲೇ ಬೇಕು ಎನ್ನುವವರೇ ಇಲ್ಲಿ ಜಾಸ್ತಿ. ಆದ್ರೆ, ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆಗೆ ಇಳಿದಿರೋದ್ರಿಂದ ಮೀನುಗಾರರು, ಮೀನು ಮಾರಾಟವನ್ನ ನಿಲ್ಲಿಸಿದ್ದಾರೆ. ಇದ್ರಿಂದ ಫಿಶ್ ಪ್ರಿಯರು, ಕಡಲಿಗೆ ಬಂದು ಬರೀ ಕೈನಲ್ಲಿ ವಾಪಸ್ ಹೋಗ್ತಿದ್ದಾರೆ.

ಇನ್ನು, ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆ ಮಾಡಿದರೆ ಮೀನುಗಾರಿಕೆಗೆ ಸಮಸ್ಯೆ ಆಗಲಿದೆ. ಜೊತೆಗೆ ಕಾರವಾರಕ್ಕೆ ಇರುವ ಏಕೈಕ ಕಡಲ ತೀರ ಟಾಗೋರ್ ಕಡಲ ತೀರಕ್ಕೆ ಸಹ ಹಾನಿಯಾಗಲಿದೆ ಅನ್ನೋದು ಮೀನುಗಾರರ ಆಗ್ರಹ. ಅದಕ್ಕಾಗಿಯೇ ಕಳೆದ ಸೋಮವಾರದಿಂದ ಹೋರಾಟ ಮಾಡ್ತಿರೋ ಮೀನುಗಾರರು, ಮೀನುಗಾರಿಕೆಯನ್ನೂ ಬಂದ್ ಮಾಡಿದ್ದಾರೆ. ನೂರಾರು ಬೋಟ್​ಗಳು ಸಹ ಲಂಗರು ಹಾಕಿ ನಿಂತಿದೆ.

ಒಟ್ನಲ್ಲಿ, ಕಳೆದ ಒಂದು ವಾರದಿಂದ ಮೀನು ಮಾರುಕಟ್ಟೆ ಸ್ಥಗತಿವಾಗಿದೆ. ಇದ್ರ ಎಫೆಕ್ಟ್ ಮತ್ಸ್ಯ ಪ್ರಿಯರಿಗೆ ತಟ್ಟಿದೆ. ಅಲ್ದೆ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೆ ಅನ್ನೋ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ.

Published On - 3:10 pm, Mon, 20 January 20