ಕಾರವಾರ: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆ(Fishing Boat)ಗೆ ತೆರಳಿದ್ದ ಬೋಟ್ ಮುರ್ಡೇಶ್ವರದ ಬಳಿ ಪಲ್ಟಿಯಾಗಿದೆ. ಜನಾರ್ಧನ್ ಪುರ್ಸು ಹರಿಕಾಂತ ಗದ್ದೆಮನೆ ಎಂಬುವರಿಗೆ ಸೇರಿದ ಬೋಟ್ ಇದಾಗಿದ್ದು, ಇಂದು ಬೆಳಗ್ಗೆ ಮೀನುಗಾರಿಕೆ ತೆರಳಿತ್ತು. ಆದರೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳದ ಮುರ್ಡೇಶ್ವರದ ಬಳಿ ಪಲ್ಟಿಯಾಗಿದೆ.
ಇಂದೂ ಸಹ ಉತ್ತರ ಕನ್ನಡ, ಕರಾವಳಿ ಕಡೆಗಳಲ್ಲಿ ಮಳೆ ಮುಂದುವರಿದಿದೆ. ಹೀಗಿದ್ದಾಗ್ಯೂ ಮೀನುಗಾರರು ಸಹಜವೆಂಬಂತೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯುತ್ತಲೇ ಇದ್ದಾರೆ. ಅದರಂತೆ ಇಂದು ಹರಿಕಾಂತ ಗದ್ದೆಮನೆಯವರ ಜಲಗಂಗಾ ಎಂಬ ಹೆಸರಿನ ಬೋಟ್ ಮೀನುಗಾರಿಕೆಗೆ ಹೋಗಿತ್ತು. ಅದು ಪಲ್ಟಿಯಾಗಿ ಆತಂಕ ಮೂಡಿಸಿತ್ತು. ಅದರಲ್ಲಿದ್ದ ಏಳೂ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯಗಳಿಗೆ ಒಬಿಸಿ ಪಟ್ಟಿ ರೂಪಿಸಿಕೊಳ್ಳುವ ಅಧಿಕಾರ ಮರುಸ್ಥಾಪನೆಗೆ ಕೇಂದ್ರ ಸಂಪುಟ ನಿರ್ಧಾರ