Gokarna: ಗೋಕರ್ಣದ ರಾಮತೀರ್ಥಕ್ಕೆ ರಾಜ್ಯ ಪಾರಂಪರಿಕ ಜೀವವೈವಿಧ್ಯ ತಾಣ ಮಾನ್ಯತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2023 | 11:38 PM

ಕರ್ನಾಟಕದಲ್ಲಿ ಈಗಾಗಲೇ ಕೆಲ ಪ್ರದೇಶಗಳನ್ನು ಜೀವ ವೈವಿಧ್ಯ ಪಾರಂಪರಿಕ ತಾಣಗಳೆಂದು ಘೋಷಿಸಲಾಗಿದೆ. ಅವುಗಳ ಸಾಲಿಗೆ ಸದ್ಯ ಜಿಲ್ಲೆಯ ಗೋಕರ್ಣದ ರಾಮ ತೀರ್ಥ ಕೂಡ ಸೇರ್ಪಡೆಗೊಳ್ಳುತ್ತಿದೆ.

Gokarna: ಗೋಕರ್ಣದ ರಾಮತೀರ್ಥಕ್ಕೆ ರಾಜ್ಯ ಪಾರಂಪರಿಕ ಜೀವವೈವಿಧ್ಯ ತಾಣ ಮಾನ್ಯತೆ
ಗೋಕರ್ಣ ರಾಮ ತೀರ್ಥ
Image Credit source: hindutemples
Follow us on

ಉತ್ತರ ಕನ್ನಡ: ಕರ್ನಾಟಕದಲ್ಲಿ ಈಗಾಗಲೇ ಕೆಲ ಪ್ರದೇಶಗಳನ್ನು ಜೀವ ವೈವಿಧ್ಯ ಪಾರಂಪರಿಕ ತಾಣಗಳೆಂದು ಘೋಷಿಸಲಾಗಿದೆ. ಅವುಗಳ ಸಾಲಿಗೆ ಸದ್ಯ ಜಿಲ್ಲೆಯ ಗೋಕರ್ಣದ (Gokarna) ರಾಮ ತೀರ್ಥ ಕೂಡ ಸೇರ್ಪಡೆಗೊಳ್ಳುತ್ತಿದೆ. ಗೋಕರ್ಣದ ರಾಮ ತೀರ್ಥವನ್ನು ರಾಜ್ಯ ಪಾರಂಪರಿಕ ಜೀವ ವೈವಿಧ್ಯ ತಾಣ (state heritage biodiversity site) ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ (Karnataka Biodiversity Board) ಘೋಷಣೆ ಮಾಡಿದೆ. ಕಳೆದ 6 ತಿಂಗಳಿಂದ ರಾಮತೀರ್ಥ ಸಂರಕ್ಷಣಾ ಅಭಿಯಾನ ನಡೆದಿದ್ದು, ರಾಮತೀರ್ಥ ಉಳಿಸಿ ಎಂಬ ರಚನಾತ್ಮಕ ಚಳುವಳಿಗೆ ಭಾಗಶಃ ಯಶಸ್ಸು ಸಿಕ್ಕಿದೆ. ಕರ್ನಾಟಕ ಸರ್ಕಾರದ ರಾಜ್ಯ ಜೀವ ವೈವಿಧ್ಯ ಮಂಡಳಿಯ 7-1-2023 ರ ಸಭೆ ರಾಮತೀರ್ಥ ಅರೆಸಾಮಿಕರೆ ಪ್ರದೇಶಕ್ಕೆ ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಮಾನ್ಯತೆ ನೀಡಿ ನಿರ್ಣಯ ಕೈಗೊಂಡಿದೆ. ಜೊತೆಗೆ ರಾಮತೀರ್ಥ ಪರಿಸರ ನಿರ್ವಹಣಾ ಸಮಿತಿ ರಚಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಲಾಗಿದೆ.

ಜೀವ ವೈವಿಧ್ಯ ಮಂಡಳಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ರಾಮತೀರ್ಥ ಅರೆಸಾಮಿ ಕೆರೆ ಉಳಿಸಿ ಅಭಿಯಾನಕ್ಕೆ ಬಲ ನೀಡಲು ಹೊನ್ನಾವರದ ಪ್ರಜ್ಞಾವಂತ ಜನತೆ, ಸಂಘ ಸಂಸ್ಥೆಗಳು ಇನ್ನಷ್ಟು ಸಕ್ರಿಯ ಬೆಂಬಲ ನೀಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಉತ್ತರ ಕನ್ನಡ: ಸರ್ಕಾರಕ್ಕೆ ಕೋಟಿಗಟ್ಟಲೆ ವಂಚಿಸಿದ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳು; ಕೈಕಟ್ಟಿ ಕುಳಿತ ಜಿಲ್ಲಾಡಳಿತ

ರಾಮತೀರ್ಥ ಧಾರ್ಮಿಕವಾಗಿ ಪೌರಾಣಿಕವಾಗಿ, ಪಾರಿಸಾರಿಕವಾಗಿ ಜಲಮೂಲವಾಗಿ ಬಹಳ ಮಹತ್ವ ಹೊಂದಿದೆ. ಐತಿಹಾಸಿಕ ಪ್ರಾಮುಖ್ಯತೆ ಪಡೆದ ರಾಮತೀರ್ಥದ ಉಳಿವು ಕರಾವಳಿಯ ಸಂಸ್ಕೃತಿಯ ಉಳಿವು ಎಂಬ ಅಭಿಪ್ರಾಯವನ್ನು ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯ ಶಿವಾನಂದ ಹೆಗಡೆ ಕೆರೆಮನೆ ತಮ್ಮ ಅಭಿಪ್ರಾಯ ವ್ಯಕ್ತ ಮಾಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಸುಭಾಸ ಚಂದ್ರನ್ ರಾಮತೀರ್ಥ ಸೂಕ್ಷ್ಮ ಪರಿಸರ ಪ್ರದೇಶ ಎಂದು ಉ.ಕ ಜಿಲ್ಲಾ ಪರಿಸರ ಧಾರಣ ಸಾಮರ್ಥ್ಯ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ ರಾಜ್ ಅವರು ರಾಜ್ಯ ಜೀವ ವೈವಿಧ್ಯ ತಾಣ ಪಟ್ಟಗೆ ರಾಮತೀರ್ಥ ಸೇರ್ಪಡೆ ಆದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: Magh Chaturthi: ಕಾರವಾರದ ಜನ ಮನೆಗಳಲ್ಲಿ ಗಣೇಶನ ವಿಗ್ರಹವಿಟ್ಟು ಪೂಜೆ ಮಾಡಿದರು! ಹಿನ್ನೆಲೆ, ಸಂಪ್ರದಾಯದ ವಿವರ ಹೀಗಿದೆ

ಹೊನ್ನಾವರ ನಗರಸಭೆ ಸದಸ್ಯೆ ತಾರಾ ಸೂರ್ಯಕಾಂತ ಮೇಸ್ತ ಮಾತನಾಡಿ, ರಾಮತೀರ್ಥಕ್ಕೆ ರಾಜ್ಯ ಮಟ್ಟದಲ್ಲಿ ಪ್ರಾಧಾನ್ಯತೆ ದೊರೆತಿದೆ ಎಂದು ಹೇಳಿದರು. ಕರಾವಳಿ ಪರಿಸರ ಕಾಯಿದೆ ತಜ್ಞ ಡಾ. ಮಹಾಭಲೇಶ್ವರ ಜೀವ ವೈವಿಧ್ಯ ಕಾಯಿದೆಯನ್ನು ತಳ ಮಟ್ಟದಲ್ಲಿ ಜಾರಿ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ರಾಮತೀರ್ಥವನ್ನು ಪರಂಪರಾ ಪ್ರದೇಶವಾಗಿ ಸ್ಥಳೀಯ ಜನತೆ ಮತ್ತು ಆಡಳತ ರಕ್ಷಣೆ ಮಾಡಬೇಕು ಎಂದು ಮಂಡಳಿ ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಪುರಾತತ್ವ ಇಲಾಖೆಯ ಉಪನಿದೇರ್ಶಕರು ಈಗಾಗಲೇ ಹೊನ್ನಾವರಕ್ಕೆ ಭೇಟಿ ನೀಡಿದ್ದಾರೆ. ರಾಮತೀರ್ಥ ಪರಾತತ್ವ ಇಲಾಖೆ ವ್ಯಾಪ್ತಿಯಲ್ಲಿದೆ. ರಕ್ಷಣೆಗೆ ಕ್ರಮ ಕೈಗೊಳ್ಳಲು ಪುರಾತತ್ವ ಇಲಾಖೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ಅವರಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:37 pm, Thu, 2 February 23