ಕಾರವಾರ, ಜೂನ್.24: ಹಾಸನ ಮೂಲದ ಯುವತಿಯೊಬ್ಬರು ಪೊಲೀಸ್ ಕಾನ್‍ಸ್ಟೆಬಲ್ ಮೇಲೆ 420 ಕೇಸ್ (420 Case) ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ಪೊಲೀಸ್ ಠಾಣೆಯಲ್ಲಿ (Mundgod Police Station) ಮುಂಡಗೊಡ ಪೊಲೀಸ್ ಠಾಣೆ ಕಾನ್‍ಸ್ಟೆಬಲ್ ಗಿರೀಶ್ ಎಸ್ ಎಮ್ ವಿರುದ್ಧ ಸುಚಿತ್ರಾ ಎಂಬ ಯುವತಿ ಕೇಸ್ ದಾಖಲಿಸಿದ್ದಾರೆ.
ಹಾಸನ ಜಿಲ್ಲಾ ಚೆನ್ನರಾಯಪಟ್ಟಣ ಮೂಲದ ಸುಚಿತ್ರಾ ಎಂಬ ಯುವತಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯಿಂದ ಕಾನ್‍ಸ್ಟೆಬಲ್ ಗಿರೀಶ್ 20 ಲಕ್ಷ ಪಡೆದಿದ್ದ. ಹಣ ಪಡೆದ ಬಳಿಕ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಮೋಸ ಮಾಡಿದ್ದ. ಸುಚಿತ್ರಾಳಿಂದ ಪಡೆದ ಹಣ ಕೂಡ ಹಿಂತಿರುಗಿಸಲು ನಿರಾಕರಿಸಿದ್ದ. ಈ ವಿಚಾರವಾಗಿ ಕೆಲ ತಿಂಗಳ ಹಿಂದೆ ಉತ್ತರ ಕನ್ನಡ ಎಸ್ ಪಿ ಗೆ ದೂರು ನೀಡಿದ್ದಳು. ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಹಿಂತಿರುಗಿಸುವುದಾಗಿ ಗಿರೀಶ್ ಒಪ್ಪಿದ್ದ. ಆದರೆ ಇದುವರೆಗೂ ಯುವತಿಗೆ ಹಣ ಹಿಂತಿರುಗಿಸಿಲ್ಲ. ಹೀಗಾಗಿ ನಿನ್ನೆ ರಾತ್ರಿ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಎಣ್ಣೆ ಹೊಡಿಯುವ ವಿಚಾರಕ್ಕಾಗಿ ನಡೆಯಿತಿ ಆಕಾಶ್ ಮಠಪತಿ ಕೊಲೆ!
ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಮೃತಪಟ್ಟಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅರುವತ್ತೊಕ್ಕಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಈಶ್ವರ ರಾವ್ ತೋಟದಲ್ಲಿ ಆನೆ ಕಳೇಬರ ಪತ್ತೆಯಾಗಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿದೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜಿಲ್ಲೆಯಲ್ಲಿ ವಾರದಲ್ಲಿ 3 ಕಾಡಾನೆಗಳು ಮೃತಪಟ್ಟಿವೆ.
ಸೆರೆಸಿಕ್ಕ ಚಿರತೆ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಯಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ ಚಿರತೆಯನ್ನ ಸೆರೆಹಿಡಿಯಲಾಗಿತ್ತು. ಆಗ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ ಜಯಶಂಕರ್ನನ್ನು ಚಿರತೆ ಪರಚಿದೆ. ಗಾಯಾಳು ಜಯಶಂಕರ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:27 am, Mon, 24 June 24