ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್

ಸಾಲು ಸಾಲು ರಜೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜಲಸಾಹಸ ಕ್ರೀಡೆಗಳಿಗಾಗಿ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಆದರೆ, ಟ್ರಾವೆಲ್ ಏಜೆಂಟರು ಮತ್ತು ಜಲಸಾಹಸ ಕಂಪನಿಗಳ ನಡುವೆ ದರ ನಿಗದಿ ವಿಚಾರವಾಗಿ ಜಟಾಪಟಿ ಶುರುವಾಗಿದೆ. ಜಲಸಾಹಸ ಕಂಪನಿಗಳು ಜಾರಿಗೆ ತಂದ 'ಸಿಂಗಲ್ ವಿಂಡೋ ಸಿಸ್ಟಮ್' ನಿಂದ ಏಜೆಂಟರು ಪಡೆಯುತ್ತಿದ್ದ ದೊಡ್ಡ ಕಮಿಷನ್‌ಗೆ ಬ್ರೇಕ್ ಬಿದ್ದಿದ್ದು, ಭಾರೀ ನಷ್ಟ ಎದುರಿಸುತ್ತಿದ್ದಾರೆ.

ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್
ವಾಟರ್ ಸ್ಪೋರ್ಟ್ಸ್
Image Credit source: tv9 kannada
Edited By:

Updated on: Mar 21, 2026 | 8:57 PM

ಕಾರವಾರ, ಮಾರ್ಚ್​ 21: ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್ಸ್​ ಮತ್ತು ಜಲಸಾಹಸ ಕ್ರಿಡಾ ಕಂಪನಿಗಳ ನಡುವೆ ದರ ನಗದಿ ವಿಚಾರವಾಗಿ ಭಾರೀ ಜಟಾಪಟಿ ನಡೆದಿದ್ದು, ಪ್ರವಾಸಿಗರು (Tourists) ಜಾಸ್ತಿ ಬಂದರೂ ನಿರೀಕ್ಷಿಸಿದಷ್ಟು ಲಾಭ ಸಿಗದೆ ಎಜೆಂಟರು ಒದ್ದಾಡುತ್ತಿದ್ದಾರೆ.

ಸದ್ಯ ಒಂದು ಕಡೆ ಸಾಲು ಸಾಲು ಹಬ್ಬ ಹಿನ್ನೆಲೆ ರಜೆ. ಮತ್ತೊಂದು ಕಡೆ ಮಕ್ಕಳ ಪರೀಕ್ಷೆ ಮುಗಿದಿದ್ದು, ಜಾಲಿ ಮಾಡುವ ಸಂದರ್ಭ. ಹೀಗಾಗಿ ಪ್ರವಾಸಿಗರು ವಾಟರ್ ಸ್ಪೋರ್ಟ್ಸ್​ಗಾಗಿ ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದೆ ಸಂದರ್ಭದಲ್ಲಿ ಜಲಸಾಹಸ ಕ್ರೀಡಾ ಕಂಪನಿಗಳು ಮತ್ತು ಟ್ರಾವೆಲ್ ಏಜೆಂಟ್ಸ್​​​ಗಳ ನಡುವಿನ ಜಟಾಪಟಿ ಕೂಡ ಉಂಟಾಗಿದೆ. ಪರಿಣಾಮ ನಿರೀಕ್ಷಿಸಿದ ಪ್ರಮಾಣದಲ್ಲಿ ಹಣ ಮಾಡುವುದಕ್ಕೆ ಆಗದ ಪರಿಸ್ಥಿತಿ ಉಂಟಾಗಿದೆ.

ಇದನ್ನೂ ಓದಿ: ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಜಲಸಾಹಸ ನಡೆಸುವವ ನಡುವಿನ ವ್ಯಾಪಾರವನ್ನು ಏಜೆಂಟ್​ಗಳು  ಬಂಡಾವಳ ಮಾಡಿಕೊಂಡಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಜಲಸಾಹಸ ಕ್ರೀಡೆ ಮಾಡಿಸಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಿಕುತ್ತಿದ್ದಾರೆ. ಆದರೆ ಈಗ ಜಲಸಾಹಸ ಕಂಪನಿಗಳು ಒಂದಾಗಿ ಸಿಂಗಲ್ ವಿಂಡೊ ಸಿಸ್ಟಮ್ ಜಾರಿಗೆ ತಂದಿದ್ದು, ಏಜೆಂಟ್​ಗಳು ಪಡೆಯುತ್ತಿದ್ದ ದೊಡ್ಡ ಮಟ್ಟದ ಕಮಿಷನ್​ಗೆ ಬ್ರೇಕ್ ಬಿದ್ದಂತಾಗಿದೆ.

ವಿಷಯ ಏನೆಂದರೆ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಅತ್ಯಾಕರ್ಷಣೀಯ ನಿಸರ್ಗತಾಣದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸುಮಾರು 5 ಕ್ಕೂ ಹೆಚ್ಚು ಬಗೆಯ ಜಲಸಾಹಸ ಕ್ರೀಡೆಗಳನ್ನ ನಡೆಸುತ್ತಾರೆ. ಇದಕ್ಕಾಗಿ ರಾಜ್ಯ ಹೊರರಾಜ್ಯಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚೆಗೆ ಜಲಸಾಹಸ ಕ್ರೀಡೆ ನಡೆಸುವ ಜೆಟ್ಟಿಗಳು ಹೆಚ್ಚಾಗಿದ್ದಾರೆ.

ಈ ಟ್ರಾವೆಲ್ ಏಜೆಂಟ್ಸ್​​ ಮಾತ್ರ ಪ್ರವಾಸಿಗರಿಂದ ತಲಾ 1500 ರೂ ಪಡೆದು ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದರು. ಇತ್ತೀಚೆಗೆ ಜೆಟ್ಟಿ ಮಾಲಿಕರಿಗೆ ಆಗುತ್ತಿರುವ ನಷ್ಟವನ್ನ ಮನಗಂಡು ತಮ್ಮಲ್ಲಿನ ವೈಮನಸ್ಸು ಬದಿಗಿಟ್ಟು, ಕಳೆದ ಒಂದು ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತಂದಿದ್ದಾರೆ. ಯಾರೇ ಪ್ರವಾಸಿಗರು ಬಂದರು ಒಂದೇ ಕಡೆ ಬುಕ್ಕಿಂಗ ಮಾಡಬೇಕಾಗಿದ್ದು, ತಲಾ 750 ರೂ ದರ ನಿಗದಿ ಮಾಡಿದ್ದಾರೆ. ಇದು ಏಜೆಂಟ್​ಗಳಿಗೆ ನುಂಗಲಾರದ ತುತ್ತಾಗಿದ್ದು, ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ

ಇನ್ನು ತಮಗಾಗುತ್ತಿರುವ ನಷ್ಟವನ್ನ ಸಹಿಸಲಾರದ ಏಜೆಂಟ್​ಗಳು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದ್ಯ ಈ ವಿಚಾರ ಜೋಯಿಡಾ ತಹಶೀಲ್ದಾರ್ ಅಂಗಳಕ್ಕೆ ಬಂದು ತಲುಪಿದೆ. ನಿನ್ನೆ ಈ ಬಗ್ಗೆ ಮೂರು ಗಂಟೆಗಳ ಕಾಲ ಸಭೆ ಮಾಡಿದರು ಸಹಿತ, ಇದುವರೆಗೂ ಇಬ್ಬರ ನಡುವಿನ ಜಟಾಪಟಿ ಅಂತ್ಯ ಆಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂರಜ್​, ಮಹಾವೀರ್​ ಉತ್ತುರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us