ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ಮಳೆ ಅಬ್ಬರ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜು 7ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Rain, school holidays: ರಾಜ್ಯದಲ್ಲಿ ಮುಂಗಾರಿನ ಅಬ್ಬರ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ಅವಾಂತರಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲ ತಾಲೂಕುಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜುಲೈ 7ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಎಂಬ ಮಾಹಿತಿ ಇಲ್ಲಿದೆ.
- Suraj Mahaveer Utture
- Updated on: Jul 6, 2026
- 10:38 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ: ಅರೆಸ್ಟ್ ಆದ ಮಂಕಿ ಠಾಣೆ PSI ಮಾಡಿದ್ದೇನು ಗೊತ್ತಾ?
Uttara Kannada News: ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೆಲವೇ ತಿಂಗಳ ಹಿಂದಷ್ಟೇ ವರ್ಗಾವಣೆಗೊಂಡು ಮಂಕಿ ಪೊಲೀಸ್ ಠಾಣೆಗೆ ಬಂದಿದ್ದ ಸಬ್ ಇನ್ಸ್‌ಪೆಕ್ಟರ್ (PSI) ಅಭಿನಂದನ್ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಪೊಲೀಸಪ್ಪ ಮಾಡಿದ್ದೇನು? ಎನ್ನುವ ವಿವರ ಇಲ್ಲಿದೆ.
- Suraj Mahaveer Utture
- Updated on: Jul 5, 2026
- 3:50 pm
ಉತ್ತರ ಕನ್ನಡದಲ್ಲಿ ಬಯಲಾಯ್ತು ನಾಡಬಾಂಬ್, ಕಳ್ಳಬಂದೂಕು ತಯಾರಿಕೆಯ ಬೃಹತ್ ಜಾಲ: ಪ್ರಾಣಿ ಬೇಟೆಯ ಕರಾಳ ದಂಧೆಗೆ ತುಮಕೂರು ಬ್ಲಾಸ್ಟ್ ಲಿಂಕ್!
ತುಮಕೂರು ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ನಾಡಬಾಂಬ್ ಹಾಗೂ ಕಳ್ಳಬಂದೂಕು ತಯಾರಿಸುವ ಬೃಹತ್ ಜಾಲ ಪತ್ತೆಯಾಗಿದೆ. ಅಂಕೋಲಾ ಮತ್ತು ಹೊನ್ನಾವರ ಮೂಲದ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಣಿ ಬೇಟೆಗಾಗಿ ಕೇವಲ 100 ರಿಂದ 300 ರೂಪಾಯಿಗೆ ಬಾಂಬ್ ಮಾರಾಟ ಮಾಡುತ್ತಿದ್ದ ದಂಧೆಯ ಕರಾಳ ಮುಖ ಬಯಲಾಗಿದ್ದು, ಮೂರು ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ.
- Suraj Mahaveer Utture
- Updated on: Jun 30, 2026
- 10:37 am
ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ನಾಲ್ಕು ತಾಲೂಕಿನಲ್ಲಿ 36 ಗಂಟೆ ನಿರಂತರ ಮಳೆ ಸುರಿದಿದೆ. ಪರಿಣಾಮ ಹಲವೆಡೆ ಅವಾಂತರ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆಯಲಿದ್ದು, ಹೀಗಾಗಿ ಜುಲೈ 2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಜನರಿಗೆ ಮನವಿ ಮಾಡಿದ್ದಾರೆ.
- Suraj Mahaveer Utture
- Updated on: Jun 29, 2026
- 8:37 pm
ಕಾರವಾರ: ಕೊಮುಗಲಭೆ ಸುಳಿವು ನೀಡಿದ ಗುಪ್ತಚರ ಇಲಾಖೆ, ಕಠಿಣ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ!
ಮುರಿನ್ ಕಟ್ಟೆ ವಿವಾದದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಗುಪ್ತಚರ ಇಲಾಖೆ ಭಟ್ಕಳದಲ್ಲಿ ಕೊಮುಗಲಭೆಯ ಸುಳಿವು ನೀಡಿದೆ. ಈ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, 60 ರೌಡಿ ಶೀಟರ್‌ಗಳಿಗೆ ನೋಟಿಸ್ ನೀಡಿದೆ. ಕೊಮುಗಲಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡುವಂತೆ ಸೂಚಿಸಲಾಗಿದೆ.
- Suraj Mahaveer Utture
- Updated on: Jun 29, 2026
- 8:32 pm
ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಬರಗಾಲದ ಭೀತಿ ಎದುರಾಗಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಮಳೆನೀರು ನುಗ್ಗಿದ್ದು, ಪವಿತ್ರ ಆತ್ಮಲಿಂಗ ಜಲಾವೃತಗೊಂಡಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.
- Suraj Mahaveer Utture
- Updated on: Jun 29, 2026
- 10:28 am
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಜಲವೈಭೋಗ ಸೃಷ್ಟಿಯಾಗಿದೆ. ಕಾರವಾರ ಮತ್ತು ಅಂಕೋಲಾ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅನೇಕ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಮತ್ತು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತಿದ್ದು, ಸೆಲ್ಫಿ ಹಾಗೂ ರೀಲ್ಸ್‌ಗೆ ಉತ್ತಮ ತಾಣವಾಗಿದೆ.
- Suraj Mahaveer Utture
- Updated on: Jun 29, 2026
- 9:33 am
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ಜಿಲ್ಲೆಯ ಕರಾವಳಿ ಭಾಗದಲ್ಲಿ ಕೇವಲ ಒಂದು ದಿನದ ಅಬ್ಬರದ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದ್ದು, ಇತಿಹಾಸ ಪ್ರಸಿದ್ಧ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಚರಂಡಿ ಹೂಳು ತೆಗೆಯದ ಕಾರಣ ಇಡೀ ಗೋಕರ್ಣದ ಬೀದಿಗಳು ಹಳ್ಳದಂತಾಗಿದ್ದು, ಮಧ್ಯಾಹ್ನ 12:30ರ ನಿತ್ಯ ಮಹಾಪೂಜೆಗೂ ಅಡ್ಡಿಯಾಗಿದೆ. ಮತ್ತೊಂದೆಡೆ, ಕುಮಟಾ ತಾಲೂಕಿನ ವಾಲಗಳ್ಳಿ ಸಮೀಪ ಕುಮಟಾ-ಸಿದ್ದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯಲ್ಲೇ ನದಿಯಂತೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪ್ರಾಣದ ಹಂಗು ತೊರೆದು ಪರದಾಡುವಂತಾಗಿದೆ.
- Suraj Mahaveer Utture
- Updated on: Jun 28, 2026
- 1:40 pm
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
Kollegal Monitor Lizard Rescue: ಕೊಳ್ಳೇಗಾಲದ ಪ್ರಿಂಟಿಂಗ್ ಪ್ರೆಸ್‍ಗೆ ಕಾಡಿನಿಂದ ದಾರಿ ತಪ್ಪಿ ಬೃಹತ್ ಉಡವೊಂದು ನುಗ್ಗಿ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು. ಮಾಲೀಕರು ಊಟಕ್ಕೆ ತೆರಳಿದಾಗ ಅಂಗಡಿ ಪ್ರವೇಶಿಸಿದ್ದ ಉಡವನ್ನು ಗಮನಿಸಿ, ಸ್ಥಳೀಯ ಉರಗ ರಕ್ಷಕ ಸ್ನೇಕ್ ಬಾಬು ಅವರಿಗೆ ಮಾಹಿತಿ ನೀಡಿದರು. ಸ್ನೇಕ್ ಬಾಬು ಅವರು ಪ್ರಿಂಟಿಂಗ್ ಯಂತ್ರಗಳ ನಡುವೆ ಅಡಗಿಕೊಂಡಿದ್ದ ಉಡಕ್ಕೆ ಯಾವುದೇ ತೊಂದರೆಯಾಗದಂತೆ ಜಾಗರೂಕತೆಯಿಂದ ಹಿಡಿದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
- Suraj Mahaveer Utture
- Updated on: Jun 24, 2026
- 10:01 am
ಉತ್ತರ ಕನ್ನಡ ಜಿಲ್ಲೆಯ ದಶಕಗಳ ರೈಲು ಕನಸಿಗೆ ರೆಕ್ಕೆ: ಹುಬ್ಬಳ್ಳಿ-ಅಂಕೋಲಾ ಹಳಿ ಜೋಡಣೆಗೆ ಸಿಕ್ತು ಗ್ರೀನ್ ಸಿಗ್ನಲ್
Uttar Kannada: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ಉತ್ತರ ಕನ್ನಡದ ಬಹುದಿನದ ಕನಸಾಗಿದ್ದು, ಕರ್ನಾಟಕ ಆರ್ಥಿಕತೆಗೆ ದೊಡ್ಡ ಬಲ ತುಂಬಲಿದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯಿಂದಾಗಿ ಎದುರಾಗಿದ್ದ ತಾಂತ್ರಿಕ-ಕಾನೂನು ತೊಡಕುಗಳು ಇದೀಗ ನಿವಾರಣೆಯಾಗಿವೆ. ಪರಿಸರವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ತರಲು ಸಂಸದರಾದ ಪ್ರಲ್ಹಾದ್ ಜೋಶಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
- Suraj Mahaveer Utture
- Updated on: Jun 23, 2026
- 9:07 pm
ಕಾರವಾರ-ಬಳ್ಳಾರಿಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್
Lokayukta Raids Karwar, Ballari:ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಕಾರವಾರದ ಮುಂಡಗೋಡಿನಲ್ಲಿ ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿಯಲ್ಲಿ RDPR ಎಇಇ ಮನೆ-ಕಚೇರಿ ಮೇಲೆ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ. ಚಿನ್ನಾಭರಣ, ನಗದು, ನಿವೇಶನ ದಾಖಲೆಗಳು ಲಭ್ಯವಾಗಿವೆ.
- Suraj Mahaveer Utture
- Updated on: Jun 23, 2026
- 6:37 pm
ಅಮಾನವೀಯ ಕೃತ್ಯ: ಊಟ ಕೊಡಿ ಎಂದಿದ್ದಕ್ಕೆ ಭಿಕ್ಷುಕ ದಂಪತಿಗೆ ಥಳಿಸಿದ ಹೋಟೆಲ್ ಮಾಲೀಕ
ಉತ್ತರ ಕನ್ನಡದ ಕುಮಟಾದ ಗೋವರ್ಧನ ಹೋಟೆಲ್‌ನಲ್ಲಿ ಅಮಾನವೀಯ ಘಟನೆ ನಡೆದಿದೆ. ಹಸಿವಿನಿಂದ ಊಟ ಕೇಳಿದ ಭಿಕ್ಷುಕ ದಂಪತಿಗೆ ಹೋಟೆಲ್ ಮಾಲೀಕ ಮತ್ತು ವಾಚ್‌ಮನ್ ಹಿಗ್ಗಾಮುಗ್ಗಾ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Suraj Mahaveer Utture
- Updated on: Jun 22, 2026
- 10:21 pm