ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕ; ರೈಲ್ವೇ ಸಿಬ್ಬಂದಿಯಿಂದ ರಕ್ಷಣೆ- ವಿಡಿಯೋ ನೋಡಿ

| Updated By: ganapathi bhat

Updated on: Jan 09, 2022 | 6:05 PM

ರೈಲಿನಲ್ಲಿ ಸೀಟು ಕಾದಿರಿಸಿ ತಮ್ಮ ಲಗೇಜು ತೆಗೆದುಕೊಳ್ಳಲು ರೈಲಿನಲ್ಲಿ ಇಳಿಯುವಾಗ ರೈಲು ಮುಂದೆ ಸಾಗಿದ್ದರಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ರಕ್ಷಣೆ ವಿಡಿಯೋವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆಗೊಳಿಸಿದೆ.

ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕ; ರೈಲ್ವೇ ಸಿಬ್ಬಂದಿಯಿಂದ ರಕ್ಷಣೆ- ವಿಡಿಯೋ ನೋಡಿ
ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕ
Follow us on

ಕಾರವಾರ: ಚಲಿಸುತ್ತಿರುವ ರೈಲು ಬೋಗಿಯಿಂದ ರೈಲಿನ ಅಡಿಭಾಗಕ್ಕೆ ಆಯ ತಪ್ಪಿ ಬೀಳುತಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ ನರೇಶ್ ಎಂಬವರಿಂದ ಅಪಾಯದಲ್ಲಿದ್ದ ಪ್ರಯಾಣಿಕನ ರಕ್ಷಣೆ ಮಾಡಲಾಗಿದೆ. ಪಂಚಗಂಗಾ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕನ ರಕ್ಷಣೆ ಮಾಡಲಾಗಿದೆ.

ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ. ದೇಸಾಯಿ ಎಂಬವರು ರಕ್ಷಣೆಗೊಳಗಾದ ವ್ಯಕ್ತಿ. ರೈಲಿನಲ್ಲಿ ಸೀಟು ಕಾದಿರಿಸಿ ತಮ್ಮ ಲಗೇಜು ತೆಗೆದುಕೊಳ್ಳಲು ರೈಲಿನಲ್ಲಿ ಇಳಿಯುವಾಗ ರೈಲು ಮುಂದೆ ಸಾಗಿದ್ದರಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ರಕ್ಷಣೆ ವಿಡಿಯೋವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆಗೊಳಿಸಿದೆ.

ಶಿವಮೊಗ್ಗ: ಮೀನಿನ ಗಾಳದ ಬಲೆಗೆ ಬಿದ್ದ ಮೊಸಳೆ ಮರಿ
ಮೊಸಳೆ ಮರಿ ಒಂದು ಮೀನಿನ ಗಾಳದ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಬಳಿಯ ತುಂಗಾ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ನಡೆದಿದೆ. ಮೀನಿನ ಬದಲಿಗೆ ಮೊಸಳೆ ಮರಿ ಗಾಳಕ್ಕೆ ಸಿಕ್ಕಿಬಿದ್ದಿದೆ. ಗ್ರಾಮದ ರಶೀದ್ ಅವರ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದಿದೆ. ಮೀನು ಹಿಡಿಯುವ ಗಾಳ ಎಳೆದಾಗ ಮೊಸಳೆ ಪ್ರತ್ಯಕ್ಷವಾಗಿದೆ. ಮೊಸಳೆ ಮರಿ ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಘಟನೆ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊವಿಡ್​ ಇದ್ದರೂ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋದರಾ ಮಹೇಶ್​ ಬಾಬು? ವೈರಲ್​ ಆದ ಫೋಟೋದ ಅಸಲಿಯತ್ತೇನು?  

ಇದನ್ನೂ ಓದಿ: Viral Video: ಪೊಲೀಸ್ ವ್ಯಾನ್​ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ

Published On - 6:02 pm, Sun, 9 January 22