ಕಾರವಾರದಲ್ಲಿ ಮೀನುಗಾರರ ಬಲೆಗೆ ಬಿತ್ತು ಅಪರೂಪದ ಉದ್ದ ಕಣ್ಣಿನ ಏಡಿ

| Updated By: sandhya thejappa

Updated on: May 21, 2022 | 2:59 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಮೀನುಗಾರರು ಬಲೆ ಹಾಕಿದ್ದರು. ಈ ವೇಳೆ ಅಪರೂಪದ ಏಡಿಯೊಂದು ಬಲೆಗೆ ಬಿದ್ದಿದೆ. ಈ ಏಡಿ ತನ್ನ ದೇಹದಷ್ಟೇ ಉದ್ದವಿರುವ ಕಡ್ಡಿಯಂತ ರಚನೆಯ ತುದಿಯಲ್ಲಿ ಕಣ್ಣುಗಳನ್ನ ಹೊಂದಿದೆ.

ಕಾರವಾರದಲ್ಲಿ ಮೀನುಗಾರರ ಬಲೆಗೆ ಬಿತ್ತು ಅಪರೂಪದ ಉದ್ದ ಕಣ್ಣಿನ ಏಡಿ
ಉದ್ದ ಕಣ್ಣಿನ ಏಡಿ
Follow us on

ಕಾರವಾರ: ಸದ್ಯ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ, ಹೊಳೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೊಸ ನೀರು ಹೆಚ್ಚಾದ್ದಂತೆ ಮೀನು (Fish), ಏಡಿಗಳ (Crab) ಸಂಖ್ಯೆಯೂ ಹೆಚ್ಚಾಗುತ್ತದೆ. ಮಳೆಗಾಲ ಬಂತೆಂದರೆ ಮಾಂಸ ಪ್ರಿಯರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಖುಷಿಯೋ ಖುಷಿ. ಕಾರಣ ಮೀನು, ಏಡಿಗಳು ಹೆಚ್ಚಾಗಿ ಸಿಗುತ್ತವೆ. ಒಂದು ಕಡೆ ಮಳೆ, ಇನ್ನೊಂದು ಕಡೆ ಮೀನು, ಏಡಿ ಹಿಡಿಯುವುದೇ ಒಂದು ರೀತಿ ಹಬ್ಬ. ಇದೇನೇ ಇರಲಿ, ಇಂದು (ಮೇ 21) ಕಾರಾವಾರ ತಾಲೂಕಿನ ಮಾಜಾಳಿಯಲ್ಲಿ ಅತ್ಯಂತ ವಿರಳವಾದ ಉದ್ದ ಕಣ್ಣಿನ ಏಡಿ ಪತ್ತೆಯಾಗಿದೆ. ಈ ಏಡಿಯನ್ನು ನೋಡಿ ಮೀನುಗಾರರು ಆಶ್ಚರ್ಯಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಮೀನುಗಾರರು ಬಲೆ ಹಾಕಿದ್ದರು. ಈ ವೇಳೆ ಅಪರೂಪದ ಏಡಿಯೊಂದು ಬಲೆಗೆ ಬಿದ್ದಿದೆ. ಈ ಏಡಿ ತನ್ನ ದೇಹದಷ್ಟೇ ಉದ್ದವಿರುವ ಕಡ್ಡಿಯಂತ ರಚನೆಯ ತುದಿಯಲ್ಲಿ ಕಣ್ಣುಗಳನ್ನ ಹೊಂದಿದೆ. ಸ್ಯುಡೊಪೊತಾಲಾಮಸ್ ವಿಜಿಲ್ ಎಂದು ಕರೆಯಲ್ಪಡುವ ಏಡಿ ಇದಾಗಿದೆ. ಇನ್ನು ಈ ಏಡಿ ಸಾಮಾನ್ಯವಾಗಿ ಹವಾಯಿ ದ್ವೀಪ, ಕೆಂಪು ಸಮುದ್ರ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ. ಈ ಅಪರೂಪದ ಏಡಿಗೆ ಮಾರುಕಟ್ಟೆಯಲ್ಲಿ ಸಕತ್ ಬೇಡಿಕೆಯೂ ಇದೆ.

ಇದನ್ನೂ ಓದಿ: ಚಾಟ್ಸ್​ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯವೇ?: ತಜ್ಞರು ಹೇಳೋದೆ ಬೇರೆ

ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ:
ಮಂಗಳೂರು: ಮೊಟ್ಟೆ ಎಂದಾಗ ಅದರ ಆಕಾರ ಎಲ್ಲರಿಗೂ ಗೊತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಕೋಳಿಯೊಂದು ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಈ ಘಟನೆ‌ ನಡೆದಿದೆ. ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿ, ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿದೆ. ಈ ಮೊಟ್ಟೆಯನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ. ಮೊಟ್ಟೆಯನ್ನು ನೋಡಲು ಪ್ರಶಾಂತ್ ಅವರ ಮನೆಗೆ ಜನರು ಆಗಮಿಸುತ್ತಿದ್ದಾರೆ. ಈವರೆಗೆ ಕೋಳಿ ಒಂದೇ ಆಕಾರದ ಸುಮಾರು 10 ಮೊಟ್ಟೆಗಳನ್ನ ಇಟ್ಟಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Sat, 21 May 22